Advertisement

ಮಳೆ ಹಾನಿ ಪರಿಶೀಲಿಸದ ಅಧಿಕಾರಿಗಳ ವಿರುದ್ಧ ಗರಂ

06:25 AM Sep 06, 2018 | Team Udayavani |

ಶನಿವಾರಸಂತೆ: ದುಂಡಳ್ಳಿ ಗ್ರಾ.ಪಂ.ಯ 2018-19ನೇ ಸಾಲಿನ ಗ್ರಾಮಸಭೆ ಸುಳುಗಳಲೆ ಕಾಲೋನಿಯ ಸಾರ್ವಜನಿಕ ಸಮೂದಾಯ ಭವನದಲ್ಲಿ ಗ್ರಾ.ಪಂ.ಅಧ್ಯಕ್ಷ ಸಿ.ಜೆ.ಗಿರೀಶ್‌ ಅಧ್ಯಕ್ಷತೆಯಲ್ಲಿ ನಡೆಯಿತು.

Advertisement

ಶನಿವಾರಸಂತೆ ಮತ್ತು ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯಲ್ಲಿ ವಾಡಿಕೆ ಮಳೆಗಿಂತ ಮೂರುಪಟ್ಟು ಹೆಚ್ಚಿನ ಮಳೆಯಾಗಿರುವುದ್ದರಿಂದ ಈ ಭಾಗದಲ್ಲಿ ಕಾಫಿ, ಭತ್ತ, ಕಾಳುಮೆಣಸು ಸೇರಿದಂತೆ ಶುಂಠಿ, ಬಾಳೆ ಮುಂತಾದ ಕೃಷಿ ಬೆಳೆಗಳಿಗೆ ಹಾನಿಯಾಗಿದ್ದು ರೈತರು ಅತೀವ ನಷ್ಟಕೊಳ್ಳಗಾಗಿದ್ದರೂ, ಇಲ್ಲಿಯ ತನಕ ಈ ವ್ಯಾಪ್ತಿಯ ಗ್ರಾಮಗಳಿಗೆ ಸಂಬಂಧಪಟ್ಟ ಕೃಷಿ, ಕಂದಾಯ ಮತ್ತು ತೋಟಗಾರಿಗೆ ಇಲಾಖೆ ಅಧಿಕಾರಿಗಳು ಬಂದು ಪರಿಶೀಲನೆ ನಡೆಸಿಲ್ಲ, ಪರಿಶೀಲನೆ ನಡೆಸದೆ ಅಧಿಕಾರಿಗಳು ರೈತರಿಗೆ ಹೇಗೆ ಪರಿಹಾರ ನೀಡುತ್ತಾರೆ ಎಂದು ಮಾಜಿ ಗ್ರಾ.ಪಂ.ಅಧ್ಯಕ್ಷ ಡಿ.ಬಿ.ಬೋಜಪ್ಪ ಗ್ರಾಮಸ್ಥರ ಪರವಾಗಿ ಸಭೆಯಲ್ಲಿ ಪ್ರಶ್ನಿಸಿದರು.

ಉತ್ತರಿಸಿದ ನೋಡಲ್‌ ಅಧಿಕಾರಿ ಮುಕುಂದ  ಜಿಲ್ಲಾಡಳಿತ ಮತ್ತು ರಾಜ್ಯ ಸರಕಾರ ಎಲ್ಲಾರೀತಿಯ ಪರಿಹಾರ ಪ್ರಕ್ರಿಯೆ ಕಾರ್ಯವನ್ನು ನಡೆಸುತ್ತಿದೆ, ಶನಿವಾರಸಂತೆ ಮತ್ತು ಕೊಡ್ಲಿಪೇಟೆ ಹೋಬಳಿಯಲ್ಲಿ ಮಳೆಹಾನಿಯಿಂದ ಕೃಷಿ ಬೆಳೆಗಳು ಹಾಳಾಗಿರುವ ಹಿನ್ನೆಲೆಯಲ್ಲಿ ಗ್ರಾಮಗಳಲ್ಲಿ ಪರಿಶೀಲನೆ ನಡೆಸುವ ಉದ್ದೇಶದಿಂದ ಈಗಾಗಲೆ ತೋಟಗಾರಿಕೆ, ಕೃಷಿ ಮತ್ತು ಕಂದಾಯ ಇಲಾಖೆ ಅಧಿಕಾರಿಗಳನ್ನು ಬೇರೆ ಜಿಲ್ಲೆಗಳಿಂದ ಕರೆಸಿಕೊಳ್ಳಲಾಗಿದೆ, ಅದರಂತೆ ಹಂತಹಂತವಾಗಿ ಗ್ರಾ.ಪಂ.ವ್ಯಾಪ್ತಿಗಳಲ್ಲಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ ಎಂದರು. ಈ ಬಗ್ಗೆ ಗ್ರಾಮಸ್ಥರಿಂದ ಸುದೀರ್ಘ‌ ಚರ್ಚೆ ನಡೆಯಿತು. 

ಅತೀವೃಷ್ಟಿಯಾಗಿರುವ ಹಿನ್ನಲೆಯಲ್ಲಿ ಜಿಲ್ಲೆಯ ಎಲ್ಲ ಗ್ರಾ.ಪಂ.ಗಳನ್ನು ಅತೀವೃಷ್ಟಿಯಿಂದ ನಷ್ಟಗೊಳಗಾಗಿದೆ ಎಂದು ಪರಿಗಣಿಸಿ ರೈತರಿಗೆ ಪರಿಹಾರ ನೀಡುವುದರ ಜೊತೆಯಲ್ಲಿ ರೈತರ ಕೃಷಿ ಸಾಲವನ್ನು ಮನ್ನಾ ಮಾಡುವಂತೆ ಜಿಲ್ಲಾಧಿಕಾರಿ, ಮುಖ್ಯಮಂತ್ರಿ ಮತ್ತು ಸರಕಾರಕ್ಕೆ ಮನವಿ ನೀಡುವಂತೆ ತೀರ್ಮಾನಿಸಲಾಯಿತು.ಕಾಡಾನೆ ಹಾವಳಿ ಎಚ್ಚಾಗುತ್ತಿರುವ ಬಗ್ಗೆ ಮತ್ತು ಕಾಡಾನೆ ದಾಳಿಯಿಂದ ಗಾಯಗೊಂಡವksಡಿಚಿ  ಎರಡೂವರೆ ಲಕ್ಷ ರು ಪರಿಹಾರ ನೀಡುವಂತೆ ಗ್ರಾಮಸ್ಥರು ಅರಣ್ಯ ಇಲಾಖೆಯ ಅಧಿಕಾರಿಯಲ್ಲಿ ಮನವಿ ಮಾಡಿದರು.

ಸಭೆಯಲ್ಲಿ ಉದ್ಯೋಗ ಖಾತ್ರಿ ಯೋಜನೆ, ಅರಣ್ಯ, ತೋಟಗಾರಿಕೆ ಇಲಖೆಯಿಂದ ಗ್ರಾಮಸ್ಥರಿಗೆ ಆಗುವ ಉಪಯೋಗದ ಕುರಿತು ಚರ್ಚಿಸಲಾಯಿತು.

Advertisement

ಜಿ.ಪಂ.ಸದಸ್ಯೆ ಸರೋಜಮ್ಮ ಮಾತನಾಡಿ-ಜಿ.ಪಂ. ಯಿಂದ ಬಂದಿರುವ ಅನುದಾನವನ್ನು ಸರಿಯಾಗಿ ಸದ್ಬಳಕೆ ಮಾಡಿಕೊಂಡಿದ್ದೇನೆ, ಜಿ.ಪಂ.ಗೆ ಅನುದಾನದ ಕೊರತೆಯಿಂದ ಗ್ರಾಮಗಳನ್ನು ಅಭಿವೃದ್ದಿ ಪಡಿಸಲು ತೊಡಕ್ಕಾಗುತ್ತಿದೆಯಷ್ಟೆ ಎಂದರು. 

ಮಳೆ ಪರಿಹಾರ ಯೋಜನೆಯಿಂದ ಜಿ.ಪಂ.ವ್ಯಾಪ್ತಿಯ ರಸ್ತೆಗಳನ್ನು ಅಭಿವೃದ್ದಿ ಪಡಿಸಲು ಕ್ರೀಯಯೋಜನೆ ರೂಪಿಸಲಾಗಿದೆ, ಈ ಕುರಿತು ಶಾಸಕರಿಗೆ ಮತ್ತು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.

ಗ್ರಾ.ಪಂ.ಅಧ್ಯಕ್ಷ ಸಿ.ಜೆ.ಗಿರೀಶ್‌ ಮಾತನಾಡಿ ಬಂದಿರುವ ಅನುದಾನದಂತೆ ಅಭಿವೃದ್ದಿ ಪಡಿಸಲಾಗುತ್ತಿದೆ, ‌ ಇಚ್ಚಾಶಕ್ತಿ ಇದ್ದರೂ ಅನುದಾನದ ಕೊರತೆಯಿಂದ ಸಮಸ್ಯೆಯಾಗುತ್ತದೆ ಎಂದರು. ಗ್ರಾ.ಪಂ.ಉಪಾಧ್ಯಕ್ಷೆ ರೂಪಾಇ ಗ್ರಾ.ಪಂ.ಪಿಡಿಒ ವೇಣುಗೋಪಾಲ್‌ ಗ್ರಾ.ಪಂ.ಸದಸ್ಯರು ಹಾಜರಿದ್ದರು.

ಅಧಿಕಾರಿಗಳ ಹಾಜರಾತಿ
ಹಿರಿಯ ಅಧಿಕಾರಿ ಇದ್ದಲ್ಲಿ ಸರಕಾರ ಮಟ್ಟದಲ್ಲಿ ಗಮನ ಸೆಳೆಯಲು ಸಾಧ್ಯವಾಗುತ್ತದೆ ಎಂದು ಗ್ರಾಮಸ್ಥರು ಸಲಹೆ ನೀಡಿದರುಮುಂದಿನ ಗ್ರಾಮಸಭೆಯಲ್ಲಿ ಆರೋಗ್ಯ ಇಲಾಖೆ ಸೇರಿದಂತೆ ಇತರೆ ಇಲಾಖೆಯ ಹಿರಿಯ ಅಧಿಕಾರಿಗಳು ಗ್ರಾಮಸಭೆಯಲ್ಲಿ ಭಾಗವಹಸುವಂತೆ ನಿರ್ಣಯ ತೆಗೆದುಕೊಳ್ಳಲಾಯಿತು

Advertisement

Udayavani is now on Telegram. Click here to join our channel and stay updated with the latest news.

Next