ಉಡುಪಿ: ಶಿಕ್ಷಣ ತಜ್ಞ, ಕಲಾಪೋಷಕ ಡಾ| ಎಂ. ಮೋಹನ ಆಳ್ವ ಅಧ್ಯಕ್ಷತೆಯಲ್ಲಿ ಉಡುಪಿಯಲ್ಲಿ ಜರಗಲಿರುವ ತುಳುನಾಡ ಗರಡಿಗಳ ಎರಡನೇ ಮಹಾ ಸಮ್ಮೇಳನದ ಆಮಂತ್ರಣ ಪತ್ರವನ್ನು ಸಂಸದೆ ಶೋಭಾ ಕರಂದ್ಲಾಜೆ ರವಿವಾರ ಮಣಿಪಾಲದ ಸಂಸದರ ಕಚೇರಿಯಲ್ಲಿ ಬಿಡುಗಡೆಗೊಳಿಸಿದರು.
ತುಳುನಾಡಿನಾದ್ಯಂತ ಇರುವ ಗರಡಿಗಳ ಸಂಸ್ಕೃತಿ, ಐತಿಹ್ಯ ಉಳಿಸಿ, ಬೆಳೆಸಿ ಮುಂದಿನ ಪೀಳಿಗೆಗೆ ಆಸಕ್ತಿ ದಾಯಕವನ್ನಾಗಿ ಮಾಡುವ ನಿಟ್ಟಿನಲ್ಲಿ ಆಯೋಜಿಸಲಾದ ಈ ಮಹಾಸಮ್ಮೇ ಳನ ಜ. 24ರಂದು ಉಡುಪಿಯ ಅಮ್ಮಣಿ ರಾಮಣ್ಣ ಶೆಟ್ಟಿ ಸಭಾಭವನ
ದಲ್ಲಿ ಜರಗಲಿದ್ದು, ಮಾಜಿ ಮುಖ್ಯ ಮಂತ್ರಿ ಬಿ.ಎಸ್. ಯಡಿಯೂರಪ್ಪ ಉದ್ಘಾಟಿಸಲಿದ್ದಾರೆ.
ಆಮಂತ್ರಣ ಪತ್ರ ಬಿಡುಗಡೆ ಸಂದರ್ಭ ಉದ್ಯಮಿಗಳಾದ ಕಿರಣ್ ಕೊಡ್ಗಿ, ಕೆ. ಉದಯಕುಮಾರ್ ಶೆಟ್ಟಿ, ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್, ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಗುರ್ಮೆ ಸುರೇಶ್ ಶೆಟ್ಟಿ, ಸಂಚಾಲಕ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಸಾಮಾಜಿಕ ಕಾರ್ಯಕರ್ತೆಯರಾದ ಶ್ಯಾಮಲಾ ಎಸ್. ಕುಂದರ್ ಮತ್ತು ಸಂಧ್ಯಾ ರಮೇಶ್ ಮೊದಲಾದವರು ಉಪಸ್ಥಿತ ರಿದ್ದರು.