Advertisement

Sandalwood; ನವೆಂಬರ್ 1ರಂದು ‘ಗರಡಿ’ ಟ್ರೇಲರ್

03:11 PM Oct 30, 2023 | Team Udayavani |

ಬಿ.ಸಿ.ಪಾಟೀಲ್‌ ನಿರ್ಮಾಣದ, ಯೋಗರಾಜ್‌ ಭಟ್‌ ನಿರ್ದೇಶನದ ಬಹು ನಿರೀಕ್ಷಿತ “ಗರಡಿ’ ಚಿತ್ರದ ಟ್ರೇಲರ್‌ ಬಿಡುಗಡೆ ಸಮಾರಂಭ ನವೆಂಬರ್‌ 1 ಕನ್ನಡ ರಾಜ್ಯೋತ್ಸವದಂದು ಸಂಜೆ 6.30ಕ್ಕೆ ರಾಣಿಬೆನ್ನೂರಿನ ಮುನ್ಸಿಪಾಲ್‌ ಗ್ರೌಂಡ್‌ನ‌ಲ್ಲಿ ನಡೆಯಲಿದೆ. ಈಗಾಗಲೇ ಸಮಾರಂಭಕ್ಕೆ ಅದ್ಧೂರಿ ತಯಾರಿ ನಡೆಯುತ್ತಿದೆ. ನಟ ದರ್ಶನ್‌ ಟ್ರೇಲರ್‌ ಬಿಡುಗಡೆ ಮಾಡಲಿದ್ದಾರೆ. ದರ್ಶನ್‌ ಅವರು ಈ ಚಿತ್ರದ ಪ್ರಮುಖ ಪಾತ್ರದಲ್ಲೂ ನಟಿಸಿದ್ದಾರೆ.

Advertisement

ಇತ್ತೀಚಿಗೆ ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್‌ ಮಂಡಳಿ ಯಾವುದೇ ಕಟ್ಸ್‌ ಇಲ್ಲದೇ ಯು/ಎ ಅರ್ಹತಾ ಪತ್ರ ನೀಡಿದೆ. ಗರಡಿ ನವೆಂಬರ್‌ 10ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ಸೌಮ್ಯ ಫಿಲಂಸ್‌ ಹಾಗೂ ಕೌರವ ಪ್ರೊಡಕ್ಷನ್‌ ಹೌಸ್‌ ಲಾಂಛನದಲ್ಲಿ ವನಜಾ ಪಾಟೀಲ್‌ ನಿರ್ಮಿಸಿರುವ ಈ ಚಿತ್ರಕ್ಕೆ ವಿ.ಹರಿಕೃಷ್ಣ ಸಂಗೀತ ನೀಡಿದ್ದಾರೆ. ನಿರಂಜನ್‌ ಬಾಬು ಛಾಯಾಗ್ರಹಣ ಹಾಗೂ ಸುರೇಶ್‌ ನವೆಂಬರ್‌ 1 ರಂದು ಗರಡಿ ಟ್ರೇಲರ್‌ ಅರಸ್‌ ಅವರ ಸಂಕಲನವಿರುವ ಗರಡಿ ಚಿತ್ರದ ಕಾರ್ಯಕಾರಿ ನಿರ್ಮಾಪಕರು ಸೃಷ್ಟಿ ಪಾಟೀಲ್.

“ಗರಡಿ’ ಈ ಬಾರಿ ದೊಡ್ಡ ಮಟ್ಟದಲ್ಲಿ ಬಿಡುಗಡೆಯಾಗಲಿದೆ. ಅದಕ್ಕೆ ಕಾರಣ ರಿಲಯನ್ಸ್‌ ಎಂಟರ್‌ಟೈ ನ್ಮೆಂಟ್‌. ಹೌದು, ಬಿ.ಸಿ.ಪಾಟೀಲ್‌ ಅವರ ಕೌರವ ಪ್ರೊಡಕ್ಷನ್ಸ್‌ಗೆ ರಿಲಯನ್ಸ್‌ ಕೈ ಜೋಡಿಸಿದ್ದು, ಸಿನಿಮಾದ ವಿತರಣಾ ಹಕ್ಕನ್ನು ಪಡೆದಿದೆ. ಈ ಮೂಲಕ ಚಿತ್ರ ದೊಡ್ಡ ಮಟ್ಟದಲ್ಲಿ ಬಿಡುಗಡೆಯಾಗಲಿದೆ.

ಈಗಾಗಲೇ ಚಿತ್ರದ ಹಾಡುಗಳೂ ಬಿಡುಗಡೆಯಾಗಿ ಹಿಟ್‌ ಲಿಸ್ಟ್ ಸೇರಿಕೊಂಡಿದೆ. ಉತ್ತರ ಕರ್ನಾಟಕ ಶೈಲಿಯಲ್ಲಿರುವ “ಹೊಡಿರಲೆ ಹಲಗಿ’ ಹಾಗೂ ಟೈಟಲ್‌ ಟ್ರ್ಯಾಕ್‌ ಬಿಡುಗಡೆಯಾಗಿದೆ. ಹೊಡಿರಲೆ ಹಲಗಿ ಹಾಡಿನಲ್ಲಿ ನಿಶ್ವಿ‌ಕಾ ನಾಯ್ಡು ಸ್ಟೆಪ್‌ ಹಾಕಿದ್ದು, ಸಖತ್‌ ಹಾಟ್‌ ಆಗಿ ಕಾಣಿಸಿಕೊಂಡಿದ್ದಾರೆ. ಇದರೊಂದಿಗೆ ವರ್ಷದ ಹಿಟ್‌ ಸಾಂಗ್‌ ಲಿಸ್ಟ್‌ನಲ್ಲಿ ಸೇರಿಕೊಂಡಿದೆ.

Advertisement

“ಗರಡಿ’ ಸಿನಿಮಾದ ಪ್ರಮುಖ ಆಕರ್ಷಣೆಗಳಲ್ಲಿ ನಟ ದರ್ಶನ್‌ ಕೂಡಾ ಒಂದು. ಹೌದು, ನಟ ದರ್ಶನ್‌ “ಗರಡಿ’ ಸಿನಿಮಾದಲ್ಲಿ ನಟಿಸಿದ್ದಾರೆ. ಅದು ಅತಿಥಿ ಪಾತ್ರದಲ್ಲಿ. ಸಿನಿಮಾಕ್ಕೆ ಟ್ವಿಸ್ಟ್‌ ಕೊಡುವ ಪಾತ್ರ ಇದಾಗಿದ್ದು, ದರ್ಶನ್‌ ಅಭಿಮಾನಿಗಳಿಗೆ ಅವರ ಎಂಟ್ರಿ ಖುಷಿಕೊಡಲಿದೆ ಎಂಬ ವಿಶ್ವಾಸದಲ್ಲಿದೆ ಚಿತ್ರತಂಡ.

ಸೂರ್ಯ ನಾಯಕರಾಗಿ ನಟಿಸಿದ್ದಾರೆ. ಬಿ.ಸಿ.ಪಾಟೀಲ್, ಸೋನಾಲ್‌ ಮೊಂತೆರೊ, ರವಿ ಶಂಕರ್‌, ಧರ್ಮಣ್ಣ, ಸುಜಯ್‌ ಬೇಲೂರು, ರಾಘವೇಂದ್ರ, ಚೆಲುವ ರಾಜ್‌, ಬಲ ರಾಜವಾಡಿ, ತೇಜಸ್ವಿನಿ ಪ್ರಕಾಶ್‌, ನಯನಾ ಮುಂತಾದವರು ಗರಡಿ ಚಿತ್ರದ ತಾರಾಬಳಗದಲ್ಲಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next