Advertisement

ತೆರೆಗೆ ಬರಲು ರೆಡಿಯಾದ “ಗಂಟುಮೂಟೆ’

10:14 AM Sep 15, 2019 | Team Udayavani |

ತಸ್ವೀರ ಸೌತ್‌ ಏಶಿಯನ್‌ ಫಿಲಂ ಫೆಸ್ಟಿವಲ್‌ಗೆ ಆಯ್ಕೆಯಾಗಿರುವ “ಗಂಟುಮೂಟೆ’ ಚಿತ್ರತಂಡವು ಅಕ್ಟೋಬರ್‌ ತಿಂಗಳಲ್ಲಿ ಚಿತ್ರವನ್ನು ಕರ್ನಾಟಕದಾದ್ಯಂತ ಬಿಡುಗಡೆಗೊಳಿಸುವ ತಯಾರಿಯಲ್ಲಿದೆ.  1990ರ ದಶಕದಲ್ಲಿನ ಹರೆಯದ ಹುಡುಗರ ಹೈಸ್ಕೂಲ್‌ ಜೀವನದಲ್ಲಿ ನಡೆಯುವ ಘಟನೆಗಳ ಸುತ್ತ ಸಾಗುವ ಗಂಟುಮೂಟೆ ಚಿತ್ರದಲ್ಲಿ, ಹುಡುಗಿಯೊಬ್ಬಳ ಭಾವನೆಗಳ ತೊಳಲಾಟದವನ್ನು ತೆರೆಮೇಲೆ ಹೇಳಲಾಗುತ್ತಿದೆ ಎನ್ನುತ್ತದೆ ಚಿತ್ರತಂಡ.

Advertisement

ನಮ್ಮ ಸುತ್ತಮುತ್ತ ನಡೆದಿರುವ ನೈಜ ಘಟನೆ ಎನ್ನುವ ರೀತಿಯಲ್ಲಿ ಚಿತ್ರವನ್ನು ಪ್ರೇಕ್ಷಕರ ಮುಂದೆ ತರುತ್ತಿದ್ದೇವೆ ಎನ್ನುತ್ತದೆ ಚಿತ್ರತಂಡ. ಈ ಚಿತ್ರವನ್ನು ರೂಪ ರಾವ್‌ ನಿರ್ದೇಶಿಸಿದ್ದು, ಅಮೇಯುಕ್ತಿ ಸ್ಟುಡಿಯೊಸ್‌ ಈ ಚಿತ್ರವನ್ನು ನಿರ್ಮಿಸಿದೆ. ಪ್ರಕಾಶ್‌ ಬೆಳವಾಡಿ ಪುತ್ರಿ ತೇಜು ಬೆಳವಾಡಿ ಮತ್ತು ನಿಶ್ಚಿತ್‌ ಕೊರೋಡಿ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಇನ್ನು “ಗಂಟುಮೂಟೆ’ ಚಿತ್ರವು ಈ ವರ್ಷದ ಮೇ ತಿಂಗಳಿನಲ್ಲಿ ನ್ಯೂಯಾರ್ಕ್‌ನಲ್ಲಿ ನಡೆದ ನ್ಯೂಯಾರ್ಕ್‌ ಇಂಡಿಯನ್‌ ಫಿಲಂ ಫೆಸ್ಟಿವಲ್‌ನಲ್ಲಿ ಪ್ರದರ್ಶನ ಕಂಡು ಅತ್ಯುತ್ತಮ ಸ್ಕ್ರೀನ್‌ ಪ್ಲೇ ಪ್ರಶಸ್ತಿ ಪಡೆದುಕೊಂಡಿದೆ.

ಕೆನಡಾದಲ್ಲಿನ ಒಟ್ಟಾವಾ ಚಿತ್ರೋತ್ಸವದಲ್ಲಿ ಅತ್ಯುತ್ತಮ ನಿರ್ದೇಶನ ಪ್ರಶಸ್ತಿಗೆ ಆಯ್ಕೆ ಸ್ಪರ್ಧೆಯಲ್ಲಿದ್ದ ಈ ಚಿತ್ರವು ಇಟಲಿ, ಆಸ್ಟ್ರೇಲಿಯಾಗಳಲ್ಲಿನ ಪ್ರತಿಷ್ಠಿತ ಚಲಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡಿದೆ. ಸದ್ಯ ಚಿತ್ರವನ್ನು ಚೀನಾ, ಕೊರಿಯಾ, ಜಪಾನ್‌ ಭಾಷೆಗಳಲ್ಲೂ ಭಾಷಾಂತರಿಸಿ ಬಿಡುಗಡೆ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next