Advertisement

Arrested: ಗಾಂಜಾ ಮಾರಾಟ; 9 ಮಂದಿಯನ್ನು ಬಂಧಿಸಿದ ಪೊಲೀಸರು

12:41 PM Aug 13, 2024 | Team Udayavani |

ಹುಬ್ಬಳ್ಳಿ: ಇಲ್ಲಿನ ಹಳೇಹುಬ್ಬಳ್ಳಿ ಆನಂದನಗರ ರಸ್ತೆಯ ನಿರ್ಮಾಣ ಹಂತದ ಜಯದೇವ ಆಸ್ಪತ್ರೆ ಹತ್ತಿರ ಮಂಗಳವಾರ(ಆ.13ರಂದು) ಬೆಳಗಿನ ಜಾವ ಗಾಂಜಾ ಮಾರುತ್ತಿದ್ದ 9 ಜನರನ್ನು ಹಳೇಹುಬ್ಬಳ್ಳಿ ಪೊಲೀಸರು ಬಂಧಿಸಿ, ಅವರಿಂದ ಅಂದಾಜು 1.25ಲಕ್ಷ ರೂ. ಮೌಲ್ಯದ 1.5ಕೆಜಿ ಗಾಂಜಾ, 6 ಮೊಬೈಲ್ ಪೋನ್ಸ್, 2ಸಾವಿರ ರೂ. ನಗದು ವಶಪಡಿಸಿಕೊಂಡಿದ್ದಾರೆ.

Advertisement

ಮಿರಜ್‌ನ ಆಸ್ಪಕ ಮುಲ್ಲಾ, ಹಳೇಹುಬ್ಬಳ್ಳಿಯ ಶಿವಕುಮಾರ ಊರ್ಫ ಮಚ್ಚಿ ತುಮಕೂರ, ಇಕ್ಬಾಲ್ ಅಹ್ಮದ ಊರ್ಫ ಸಾಹೇಬ ಮುದಗಲ್,  ಆರೀಫ ಊರ್ಫ ಚರಕ ಗಲಗಲಿ, ಅಭಿಷೇಕ ದೇವಮಾನೆ, ಅಮೃತ ಹವಳದ, ಮೊಹ್ಮದರೆಹಾನ ಗೋಕಾಕ, ಸಾಧಿಕ ಕಿತಾಬ್‌ವಾಲೆ, ಮೆಹಬೂಬಸಾಬ ಡೌಗಿ ಮಕಾಂದಾರ ಬಂಧಿತರಾದವರು.

ಗಾಂಜಾ ಮಾರುತ್ತಿದ್ದ ಹಾಗೂ ಅದನ್ನು ಕೆಲವರು ಖರೀದಿಸುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಹಳೇಹುಬ್ಬಳ್ಳಿ ಪೊಲೀಸರು ದಾಳಿ ನಡೆಸಿ, ಗಾಂಜಾ ಸಮೇತ ಒಂಬತ್ತು ಜನರನ್ನು ಬಂಧಿಸಿದ್ದಾರೆ. ಹಳೇಹುಬ್ಬಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next