Advertisement
ಘಟನೆ ನಡೆಯುವು ಮುನ್ನು ಆರೋಪಿ ವಿಷ್ಣು ಜೊತೆ ಡ್ರಿಂಕ್ಸ್ ಪಾರ್ಟಿ ಮಾಡಿರುವುದು ಕಂಡು ಬಂದ ಹಿನ್ನಲೆಯಲ್ಲಿ ಪ್ರಣಮ್, ಕೈಸರ್, ವಿಷ್ಣು ಸಹೋದರ ಆದಿ ಸೇರಿದಂತೆ 6 ಮಂದಿಗೆ ಭಾನುವಾರ ಸಂಜೆ ನೊಟೀಸ್ ನೀಟಡಿದ್ದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ.
Related Articles
Advertisement
ಡಿಕ್ಕಿ ಪರಿಣಾಮ ಓಮ್ನಿ ಕಾರು ಸಂಪೂರ್ಣ ಜಖಂಗೊಂಡಿತ್ತು. ಅದರಲ್ಲಿದ್ದ ಕಲಾಸಿಪಾಳ್ಯ ನಿವಾಸಿಗಳಾದ ಕೈಜರ್, ಗಿಜರ್ ಹಾಗೂ ನಾಲ್ವರು ಮಕ್ಕಳಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದವು.
ಘಟನಾ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಸಾರ್ವಜನಿಕರು ವಿಷ್ಣು ಹಾಗೂ ಇತರ ಮೂವರು ಸ್ನೇಹಿತರಿಗೆ ಹಿಗ್ಗಾಮುಗ್ಗಾ ಥಳಿಸಿದ್ದರು. ಈ ವೇಳೆ, ವಿಷ್ಣು ಹೊರತು ಪಡಿಸಿ ಉಳಿದವರು ಸ್ಥಳದಿಂದ ಪರಾರಿಯಾಗಿದ್ದರು.
ಅಪಘಾತದಿಂದ ಉದ್ರಿಕ್ತಗೊಂಡಿದ್ದ ಸಾರ್ವಜನಿಕರು, ರಸ್ತೆಯುದ್ದಕ್ಕೂ ವಿಷ್ಣುಗೆ ಹೊಡೆದು ಕೊಂಡು, ಜಯನಗರ ಠಾಣೆಗೆ ಎಳೆದೊಯ್ದು, ಪೊಲೀಸರಿಗೊಪ್ಪಿಸಿದ್ದರು. ಈ ವೇಳೆ, ವಿಷ್ಣು ಕಂಠಪೂರ್ತಿ ಮದ್ಯ ಸೇವಿಸಿರುವುದು ಪತ್ತೆಯಾಗಿತ್ತು.
ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರಿಗೆ ಸಾರ್ವಜನಿಕರು ವಿಷ್ಣು ಕಾರಿನಲ್ಲಿ ಗಾಂಜಾ ಇದೆ ಎಂಬ ಮಾಹಿತಿ ನೀಡಿದ್ದರು. ಅದರಂತೆ ಕಾರು ಪರಿಶೀಲಿಸಿದಾಗ ಸಿಬ್ಬಂದಿಗೆ 110 ಗ್ರಾಂ ಗಾಂಜಾ ಸಿಕ್ಕಿತ್ತು.
ತೀವ್ರ ಹಲ್ಲೆಗೊಳಗಾಗಿ ಮಲ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವಿಷ್ಣು ಪರಾರಿಯಾಗಿದ್ದು ಪೊಲೀಸರು ಶೋಧ ನಡೆಸುತ್ತಿದ್ದಾರೆ.
ನಟ ಪ್ರಜ್ವಲ್ ದೇವರಾಜ್ ಮತ್ತು ದಿಗಂತ್ ಘಟನೆ ವೇಳೆ ವಿಷ್ಣು ಚಾಲನೆ ಮಾಡುತ್ತಿದ್ದ ಬೆಂಝ್ ಕಾರಿನಲ್ಲಿ ಇದ್ದರು ಎಂದು ಸ್ಥಳೀಯರು ಹೇಳಿದ್ದರು.
ಪ್ರಜ್ವಲ್ ಮತ್ತು ದಿಗಂತ್ ನಾವು ಕಾರಿನಲ್ಲಿರಲಿಲ್ಲ ನಾವು ಶೂಟಿಂಗ್ ನಲ್ಲಿದ್ದವು ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರು.
ಕಾರಿನಲ್ಲಿ ಲಕ್ಷಾಂತರ ರೂ.ಮೌಲ್ಯದ ಗಾಂಜಾ ಪತ್ತೆಯಾಗಿ. ಈ ಸಂಬಂಧ ಆದಿಕೇಶವಲು ಮೊಮ್ಮಗ ಗೀತವಿಷ್ಣು ಹಾಗೂ ಇತರರ ವಿರುದ್ಧ ಎನ್‌ಡಿಪಿಎಸ್ ಕಾಯ್ದೆ ಅಡಿಯಲ್ಲಿ ಜಯನಗರ ಠಾಣೆಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಐಪಿಸಿ 279 (ಅತಿ ವೇಗವಾಗಿ ವಾಹನ ಚಾಲನೆ) 337 ನಿರ್ಲಕ್ಷ್ಯದ ಆರೋಪದ ಮೇಲೆ ವಿಷ್ಣು ವಿರುದ್ಧ ಜಯ ನಗರ ಸಂಚಾರ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.