Advertisement
ಜೂ. 11 ರಂದು ಸಾಂತಾಕ್ರೂಜ್ ಪೂರ್ವ ಬಿಲ್ಲವರ ಭವನದ ನಾರಾಯಣ ಗುರು ಸಭಾಗೃಹದಲ್ಲಿ ನಡೆದ ಗಾಣಿಗ ಸಮಾಜ ಮುಂಬಯಿ ಇದರ ಇಪ್ಪತ್ತನೇ ವಾರ್ಷಿಕೋತ್ಸÕವ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿ ಪಾಲ್ಗೊಂಡು ಮಾತನಾಡಿದ ಅವರು, ನನ್ನ ಅಣ್ಣ ದಿ| ಆನಂದ ಗಾಣಿಗ ಅವರಿಂದ ಪ್ರಾರಂಭಿಸಲ್ಪಟ್ಟ ಸಂಘದಲ್ಲಿ ನಮ್ಮ ಸಮಾಜ ಕಾರ್ಯಗಳನ್ನು ಮುಂದುವರಿಸಿಕೊಂಡು ಹೋಗು ವಂತಹ ಅದೃಷ್ಟ ನಮ್ಮ ಪಾಲಿಗೆ ಒದಗಿದ್ದು, ಕಳೆದ ಸುಮಾರು ಎರಡು ದಶಮಾನಗಳಿಂದ ಅಧ್ಯಕ್ಷನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಎಲ್ಲರ ವಿಶ್ವಾಸ ಹಾಗೂ ಸಹಾಯದಿಂದ ಈ ಸಂಸ್ಥೆಯು ಬಹಳಷ್ಟು ಸಾಧಿಸುವಲ್ಲಿ ಸಫಲವಾಗಿದೆ. ಮುಂದೆ ಕೂಡ ಇಂತಹ ಸಹಕಾರವನ್ನು ಬಯಸುತ್ತೇನೆ ಎಂದು ನುಡಿದು ಶುಭಹಾರೈಸಿದರು.
Related Articles
Advertisement
ಸಮಾರಂಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಸೋಮ ಕ್ಷತ್ರೀಯ ವೈಷ್ಣವ ಸಮಾಜ ಬೆಂಗಳೂರು ಮಾಜಿ ಕಾರ್ಯದರ್ಶಿ ಪ್ರತಾಪ್‌ಚಂದ್ರ ಕುತ್ಪಾಡಿ, ಸಂಪರ್ಕ ಸುಧಾ ಮಾಸಿಕದ ಮಾಜಿ ಕಾರ್ಯದರ್ಶಿ ಉದಯ ಕುಮಾರ್, ವಿದ್ಯಾದಾಯಿನಿ ಸಭಾ ಇದರ ಜೆ. ಎಂ. ಕೋಟ್ಯಾನ್, ಮತ್ತಿತರ ಗಣ್ಯರು ಉಪಸ್ಥಿತರಿದ್ದರು. ಹೊಟೇಲ್ ರತ್ನಪಾರ್ಕ್ ಥಾಣೆ ಇದರ ಮಾಲಕ ರತ್ನಾಕರ ಜಿ. ಶೆಟ್ಟಿ, ಸಂಸ್ಥೆಯ ಗೌರವಾಧ್ಯಕ್ಷ ಜಗನ್ನಾಥ ಎಂ. ಗಾಣಿಗ, ವಿದ್ಯೋದಯ ಸಮಿತಿಯ ಕಾರ್ಯಾಧಕ್ಷ ವಿಜಯೇಂದ್ರ ಗಾಣಿಗ ಮಾತನಾಡಿ ಸಮಾಜದ ಏಳಿಗೆಗೆ ಶುಭಹಾರೈಸಿದರು.
ವೇದಿಕೆಯಲ್ಲಿ ಉಪಾಧ್ಯಕ್ಷ ಭಾಸ್ಕರ ಎಂ. ಗಾಣಿಗ, ಕೋಶಾಧಿಕಾರಿ ಜಯಂತ್ ಪಿ. ಗಾಣಿಗ, ಮಹಿಳಾಧ್ಯಕ್ಷೆ ತಾರಾ ಎನ್. ಭಟ್ಕಳ್, ಯುವ ವಿಭಾಗಾಧ್ಯಕ್ಷ ಗಣೇಶ್ ಆರ್. ಕುತ್ಪಾಡಿ ಹಾಗೂ ಅತಿಥಿಗಳು ವಿವಿಧ ಸ್ಪರ್ಧಾ ವಿಜೇತರಿಗೆ ಪದಕ, ಸ್ಮರಣಿಕೆಯನ್ನಿತ್ತು ಮತ್ತು ಪ್ರತಿಭಾನ್ವಿತ ಮಕ್ಕಳಿಗೆ ಪ್ರತಿಭಾಪುರಸ್ಕಾರ ವಿತರಿಸಿ ಶುಭ ಹಾರೈಸಿದರು.
ವೀಣಾ ದಿನೇಶ್ ಗಾಣಿಗ ಪ್ರಾರ್ಥನೆಗೈದರು. ನ್ಯಾಯವಾದಿ ಯು. ಬಾಲಚಂದ್ರ ಕಟಪಾಡಿ ಸ್ವಾಗತಿಸಿದರು. ಜೊತೆ ಕಾರ್ಯದರ್ಶಿ ಬಿ. ಜಗದೀಶ್ ಗಾಣಿಗ, ಕಾರ್ಯಕಾರಿ ಸಮಿತಿಯ ಸದಸ್ಯರುಗಳಾದ ಗೋಪಾಲಕೃಷ್ಣ ಗೋವಿಂದ ಗಾಣಿಗ, ರಮೇಶ್ ಎನ್. ಗಾಣಿಗ, ಸದಾನಂದ ಕಲ್ಯಾಣು³ರ, ನಾಗರತ್ನ ಜಗನ್ನಾಥ್ ಅವರು ಅತಿಥಿಗಳನ್ನು ಪುಷ್ಪಗುತ್ಛವನ್ನಿತ್ತು ಗೌರವಿಸಿದರು. ವೀಣಾ ದಿನೇಶ್ ಗಾಣಿಗ, ಆರತಿ ದಿನೇಶ್ ಗಾಣಿಗ ಸಮ್ಮಾನ ಪತ್ರ ವಾಚಿಸಿದರು. ಮಾಜಿ ಕಾರ್ಯದರ್ಶಿ ಬಿ. ವಿ. ರಾವ್ ಶ್ಲೋಕ ಪಠಿಸಿ ಅತಿಥಿಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ಆರ್. ಗಾಣಿಗ ವಂದಿಸಿದರು.
ನಮ್ಮ ಸಮಾಜ ಬಾಂಧವರು ಇಷ್ಟೊಂದು ಸಂಖ್ಯೆಯಲ್ಲಿ ಈ ಸಮಾರಂಭದಲ್ಲಿ ಭಾಗವಹಿಸುತ್ತಿರುವುದು ತುಂಬಾ ಸಂತೋಷ ತಂದಿದ್ದು, ಇದು ಸಮುದಾಯದ ಭವಿಷ್ಯವನ್ನು ತೋರ್ಪಡಿಸುತ್ತಿದೆ. ಹಿಂದೆ ನಮ್ಮ ಸಮಾಜ ಕೀಳರಿಮೆಗೆ ಗುರಿಯಾಗಿದ್ದರೂ, ಈಗ ಸಮಾಜದ ಎಲ್ಲರೂ ವಿದ್ಯಾವಂತರಾಗಿ ದೊಡ್ಡ ದೊಡ್ಡ ಅಧಿಕಾರಿಗಳಾಗಿದ್ದಾರೆ. ಉದ್ಯಮಿಗಳಾಗಿ ತಮ್ಮ ಸ್ವಂತ ಪ್ರತಿಭೆಯಿಂದ ಮುಂದುವರಿಯುತ್ತಿದ್ದಾರೆ. ನಾವೆಲ್ಲರೂ ಈ ಸಂಘಟನೆಯ ಮೂಲಕ ಜಾತಿಗಿಂತಲೂ ಹೆಚ್ಚಾಗಿ ಸುಸಂಸ್ಕೃತ ಮನುಷ್ಯರಾಗಿ, ದೇಶ ಪ್ರೇಮಿಗಳಾಗಿ ಈ ಸಮಾಜಕ್ಕೆ ಸೇವೆ ಸಲ್ಲಿಸುವ ಮನೋಭಾವನೆ ಹೊಂದಬೇಕಾದ ಆವಶ್ಯಕತೆ ಇದೆ
– ಕುತ್ಪಾಡಿ ರಾಮಚಂದ್ರ ಗಾಣಿಗ (ಅಧ್ಯಕ್ಷರು : ಗಾಣಿಗ ಸಮಾಜ ಮುಂಬಯಿ) ಚಿತ್ರ-ವರದಿ : ರೋನ್ಸ್ ಬಂಟ್ವಾಳ್