Advertisement

ಪ್ರೇಕ್ಷಕರಿಲ್ಲದೇ ಐಪಿಎಲ್ ನಡೆಯುವುದು ಬಹುತೇಕ ಖಚಿತ: ಸುಳಿವು ನೀಡಿದ ಗಂಗೂಲಿ

03:02 PM Jun 11, 2020 | keerthan |

ಮುಂಬೈ: ಕೋವಿಡ್-19 ಲಾಕ್ ಡೌನ್ ಕಾರಣದಿಂದ ಮುಂದೂಡಲ್ಪಟ್ಟಿರುವ ವರ್ಣರಂಜಿತ ಕ್ರೀಡಾಕೂಟ ಐಪಿಎಲ್ ಈ ವರ್ಷ ನಡೆಯುವುದು ಬಹುತೇಕ ಖಚಿತ ಎನ್ನಲಾಗಿದೆ. ಆದರೆ ಪ್ರೇಕ್ಷಕರಿಲ್ಲದೆ ಮುಚ್ಚಿದ ಬಾಗಿಲಿನಲ್ಲಿ ಕೂಟ ನಡೆಯಲಿದೆ.

Advertisement

ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಈ ಬಗ್ಗೆ ರಾಜ್ಯ ಕ್ರಿಕೆಟ್ ಸಂಸ್ಥೆಗಳಿಗೆ ಪತ್ರ ಬರೆದಿದ್ದು, ಪ್ರೇಕ್ಷಕರಿಲ್ಲದೇ ಐಪಿಎಲ್ ನಡೆಸುವ ಬಗ್ಗೆ ಯೋಚಿಸಲಾಗುತ್ತಿದೆ ಎಂದಿದ್ದಾರೆ.

ಅಭಿಮಾನಿಗಳು, ತಂಡಗಳು, ಆಟಗಾರರು, ಜಾಹೀರಾತುದಾರರು, ನೇರಪ್ರಸಾರದ ಚಾನೆಲ್ ಹೀಗೆ ಎಲ್ಲರೂ ಈ ವರ್ಷದ ಐಪಿಎಲ್ ನಡೆಸುವ ಕುರಿತು ಉತ್ಸುಕರಾಗಿದ್ದಾರೆ. ಭಾರತ ಮತ್ತು ಹಲವು ವಿದೇಶಿ ಆಟಗಾರರು ಇದೇ ವರ್ಷ ಐಪಿಎಲ್ ನಲ್ಲಿ ಆಡುವ ಬಗ್ಗೆ ವಿಶ್ವಾಸ ಮತ್ತು ಕಾತುರತೆ ವ್ಯಕ್ತಪಡಿಸಿದ್ದಾರೆ ಎಂದು ಗಂಗೂಲಿ ಬರೆದಿದ್ದಾರೆ.

ಮಾರ್ಚ್  29ರಂದು ಐಪಿಎಲ್ ನಡೆಯಬೇಕಿತ್ತು. ಆದರೆ ಕೋವಿಡ್-19 ಕಾರಣದಿಂದ ಅನಿರ್ಧಿಷ್ಟಾವಧಿಗೆ ಮುಂದೂಡಿಕೆಯಾಗಿದೆ. ಅಕ್ಟೋಬರ್ ನಲ್ಲಿ ಆಸೀಸ್ ನಲ್ಲಿ ನಡೆಯಬೇಕಿರುವ ಟಿ20 ವಿಶ್ವಕಪ್ ನಡೆಯದೇ ಇದ್ದಲ್ಲಿ ಐಪಿಎಲ್ ನಡೆಯಬಹುದು ಎನ್ನಲಾಗಿದೆ. ಐಪಿಎಲ್ ಆತಿಥ್ಯ ವಹಿಸಲು ಶ್ರೀಲಂಕಾ, ದುಬೈ ಕ್ರಿಕೆಟ್ ಮಂಡಳಿಗಳೂ ಉತ್ಸಾಹ ತೋರಿವೆ.

Advertisement

Udayavani is now on Telegram. Click here to join our channel and stay updated with the latest news.

Next