Advertisement
ಇದು 8 ಅಡಿಯ ಕಂಚಿನ ಪ್ರತಿಮೆಯಾಗಿದ್ದು, ಗಂಗೂಲಿ ಶತಕ ಬಾರಿ ಸಿದ ಬಳಿಕ ಬ್ಯಾಟ್ ಮೇಲೆ ಎತ್ತಿ ಸಂಭ್ರಮಿಸಿದ ಮಾದರಿಯಲ್ಲಿದೆ. 7 ಲಕ್ಷ ರೂ. ಮೌಲ್ಯದ ಈ ಪ್ರತಿಮೆಯನ್ನು ನಿರ್ಮಿಸಿದವರು ಸಿಲಿ ಗುರಿಯ ಶಿಲ್ಪಿ ಸುಸಾಂತ್ ಪಾಲ್. ಈ ಸಮಾರಂಭಕ್ಕಾಗಿ ಗಂಗೂಲಿ ರೈಲಿನಲ್ಲಿ ಆಗಮಿಸಿದ್ದರು. ಸ್ವಲ್ಪ ಹೊತ್ತು ಗೆಸ್ಟ್‌ಹೌಸ್‌ನಲ್ಲಿ ವಿಶ್ರಾಂತಿ ಪಡೆದ ಬಳಿಕ ಅವರು ನೇರವಾಗಿ ಸಮಾರಂಭ ಸ್ಥಳಕ್ಕೆ ಬಂದರು.
ಈ ಸಮಾರಂಭಕ್ಕೆ ಆಗಮಿಸಲು ಗಂಗೂಲಿ ಸೀಲ್ದಾಹ್ ನಿಲ್ದಾಣದಿಂದ “ಪದಾತಿಕ್ ಎಕ್ಸ್‌ಪ್ರೆಸ್’ ರೈಲನ್ನೇರಿ ದ್ದರು. 15 ವರ್ಷಗಳ ಬಳಿಕ ರೈಲು ಪ್ರಯಾಣದ ಸಂಭ್ರಮದಲ್ಲಿದ್ದರು ದಾದಾ. ತಮಗಾಗಿ ಕಾದಿರಿಸಲಾಗಿದ್ದ ಎಸಿ ಫಸ್ಟ್‌ಕ್ಲಾಸ್ ಕಂಪಾರ್ಟ್ ಮೆಂಟ್‌ಗೆ ಆಗಮಿಸಿದಾಗ ಅಚ್ಚರಿ ಯೊಂದು ಕಾದಿತ್ತು. ಅವರ ಜಾಗ ವನ್ನು ಮತ್ತೂಬ್ಬ ಪ್ರಯಾಣಿಕ ಆಕ್ರ ಮಿಸಿಕೊಂಡಿದ್ದ. ಜಾಗ ಬಿಡುವಂತೆ ವಿನಂತಿಸಿಕೊಂಡರೂ ಆತ ಕೇಳಲಿಲ್ಲ. ಗಂಗೂಲಿ ಜತೆ ಜಗಳಕ್ಕೇ ಇಳಿದ. ಅನ್ಯ ಮಾರ್ಗವಿಲ್ಲದೆ ಗಂಗೂಲಿ ರೈಲಿನಿಂದ ಕೆಳಗಿಳಿದರು.
Related Articles
Advertisement