Advertisement

Back to Jail: ಜೈಲಿನಿಂದ ಬಿಡುಗಡೆಯಾದ ಖುಷಿಯಲ್ಲಿ ರ್‍ಯಾಲಿ… ಮತ್ತೆ ಜೈಲುಪಾಲಾದ Gangster

05:04 PM Jul 26, 2024 | Team Udayavani |

ಮುಂಬೈ: ದರೋಡೆ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ದರೋಡೆಕೋರನೊಬ್ಬ ಜೈಲಿನಿಂದ ಬಿಡುಗಡೆಗೊಂಡ ಕೆಲವೇ ದಿನದಲ್ಲಿ ಮತ್ತೆ ಜೈಲು ಪಾಲಾಗಿರುವ ವಿಚಿತ್ರ ಘಟನೆಯೊಂದು ಬೆಳಕಿಗೆ ಬಂದಿದೆ. ಅಂದಹಾಗೆ ಈ ದರೋಡೆಕೋರನನ್ನು ಸುಖಾಸುಮ್ಮನೆ ಜೈಲಿಗೆ ಹಾಕಿಲ್ಲ ಇದರ ಹಿಂದೆ ಒಂದು ಕತೆ ಇದೆ.

Advertisement

ಮಹಾರಾಷ್ಟ್ರದ ನಾಸಿಕ್‌ ಮೂಲದ ದರೋಡೆಕೋರನಾಗಿರುವ ಹರ್ಷದ್ ಪಾಟಂಕರ್ ದರೋಡೆ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ಇದೆ ಜುಲೈ 23 ರಂದು ಜೈಲಿನಿಂದ ಬಿಡುಗಡೆಯಾಗಿದ್ದ ಇತ್ತ ಜೈಲಿನಿಂದ ಬಿಡುಗಡೆಗೊಳ್ಳುತ್ತಿರುವ ವಿಚಾರ ಆತನ ಬೆಂಬಲಿಗರಿಗೆ ಗೊತ್ತಾಗುತ್ತಿದ್ದಂತೆ ದರೋಡೆಕೋರನನ್ನು ಮೆರವಣಿಗೆ ಮೂಲಕ ಮನೆಗೆ ಕರೆದೊಯ್ಯುವ ಆಲೋಚನೆ ಮಾಡಿದ್ದರು ಅದರಂತೆ ಜುಲೈ 23 ರಂದು ಜೈಲಿನಿಂದ ಹರ್ಷದ್ ಹೊರಬಂದಿದ್ದಾನೆ ಈ ವೇಳೆ ಆತನ ಸಹಚರರು ಬೈಕ್ ಹಾಗೂ ಕಾರಿನ ಮೂಲಕ ಮೆರವಣಿಗೆ ನಡೆಸಿದ್ದಾರೆ ಅಲ್ಲದೆ ಮೆರವಣಿಗೆ ವೇಳೆ ಸಾರ್ವಜನಿಕರಿಗೂ ತೊಂದರೆಯಾಗಿದೆ ಜೊತೆಗೆ ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಪೊಲೀಸರು ಹರ್ಷದ್ ವಿರುದ್ಧ ಸಾರ್ವಜನಿಕರಿಗೆ ತೊಂದರೆ ನೀಡಿದ ಆರೋಪ, ಜೊತೆಗೆ ಅನುಮತಿ ಪಡೆಯದೆ ರ್‍ಯಾಲಿ ನಡೆಸಿರುವುದು ಸೇರಿದಂತೆ ಅಪಾಯಕಾರಿ ಚಟುವಟಿಕೆಗಳ ತಡೆ ಕಾಯ್ದೆ (ಎಂಪಿಡಿಎ) ಅಡಿಯಲ್ಲಿ ಹರ್ಷದ್ ಪಾಟಂಕರ್ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮತ್ತೆ ಬಂಧಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಪೊಲೀಸ್ ಅಧಿಕಾರಿಗಳು ದರೋಡೆ ಪ್ರಕರಣದಲ್ಲಿ ಜೈಲುವಾಸ ಅನುಭವಿಸುತ್ತಿದ್ದ ಹರ್ಷದ್ ಪಾಟಂಕರ್ ಇತ್ತೀಚಿಗೆ ಬಿಡುಗಡೆಗೊಂಡಿದ್ದ ಈ ವೇಳೆ ಆತನ ಬೆಂಬಲಿಗರು ಸುಮಾರು 15 ದ್ವಿಚಕ್ರ ವಾಹನಗಳೊಂದಿಗೆ ಬೆತೆಲ್ ನಗರದಿಂದ ಅಂಬೇಡ್ಕರ್ ಚೌಕ್ ವರೆಗೆ ರ್‍ಯಾಲಿ ನಡೆಸಿದ್ದಾರೆ ಅಲ್ಲದೆ ರ್‍ಯಾಲಿಗೆ ಸಂಬಂಧಿಸಿದ ವಿಡಿಯೋ ಮಾಡಿದ್ದೂ ಅದರಲ್ಲಿ ಪಾಟಂಕರ್ ಕಾರಿನ ಸನ್ ರೂಫ್ ನಿಂದ ಹೊರಬಂದು ಬೆಂಬಲಿಗರಿಗೆ ಕೈಬೀಸುತ್ತಾ ರಸ್ತೆಯುದ್ದಕ್ಕೂ ಸಾಗುತ್ತಿರುವುದು ಕಂಡುಬಂದಿದೆ. ಜೊತೆಗೆ ರ್‍ಯಾಲಿಗೆ ಯಾವುದೇ ಅನುಮತಿಯನ್ನು ಪಡೆದಿಲ್ಲ, ಅಲ್ಲದೆ ರ್‍ಯಾಲಿ ವೇಳೆ ಸಾರ್ವಜನಿಕರಿಗೆ ತೊಂದರೆ ಉಂಟು ಮಾಡಿದ್ದಕ್ಕಾಗಿ ಪಾಟಂಕರ್ ಮತ್ತು ಅವರ ಆರು ಬೆಂಬಲಿಗರನ್ನು ಮತ್ತೆ ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ ಎಂದು ಹೇಳಿದರು.

ಪೊಲೀಸರು ಆತನ ವಿರುದ್ಧ ಕೊಲೆ ಯತ್ನ, ಕಳ್ಳತನ ಮತ್ತು ಹಿಂಸಾಚಾರ ಸೇರಿದಂತೆ ಹಲವು ಪ್ರಕರಣಗಳನ್ನು ದಾಖಲಿಸಿದ್ದಾರೆ.

ಇದನ್ನೂ ಓದಿ: US; ಅದ್ಭುತ ಅಧ್ಯಕ್ಷೆಯಾಗುತ್ತಾರೆ: ಕಮಲಾ ಹ್ಯಾರಿಸ್‌ಗೆ ಒಬಾಮಾ ಸಂಪೂರ್ಣ ಬೆಂಬಲ

Advertisement
Advertisement

Udayavani is now on Telegram. Click here to join our channel and stay updated with the latest news.

Next