ಚಿತ್ರಕೂಟ್: ಉತ್ತರಪ್ರದೇಶದ ಚಿತ್ರಕೂಟ್ ಪ್ರದೇಶದ ರಾಗೌಲಿ ಜಿಲ್ಲೆಯ ಜೈಲಿನೊಳಗೆ ನಡೆದ ಘರ್ಷಣೆಯಲ್ಲಿ ಗುಂಡು ಹಾರಿಸಲ್ಪಟ್ಟು ಗ್ಯಾಂಗ್ ಸ್ಟರ್ ಮುಕೀಮ್ ಕಾಲಾ ಸೇರಿದಂತೆ ಮೂವರು ಕೈದಿಗಳು ಸಾವನ್ನಪ್ಪಿರುವ ಘಟನೆ ಶುಕ್ರವಾರ(ಮೇ 13) ನಡೆದಿದೆ.
ಇದನ್ನೂ ಓದಿ:ಕೋವಿಡ್ 19 “ಅದೃಶ್ಯ ಶತ್ರು”…ಸೋಂಕು ನಿವಾರಣೆಗೆ ಕಠಿಣ ಹೋರಾಟ: ಪ್ರಧಾನಿ ಮೋದಿ
ಜೈಲರ್ ಎಸ್ ಪಿ ತ್ರಿಪಾಠಿ ಅವರ ಮಾಹಿತಿಯಂತೆ, ಜೈಲಿನೊಳಗೆ ಇಬ್ಬರು ಕೈದಿಗಳನ್ನು ಗುಂಡಿಕ್ಕಿ ಕೊಂದ ನಂತರ ಅವರಲ್ಲಿ ಒಬ್ಬ ಕೈದಿ ಜೈಲು ಅಧಿಕಾರಿಗಳ ಜತೆಗಿನ ಗುಂಡಿನ ಚಕಮಕಿಯಲ್ಲಿ ಸಾವನ್ನಪ್ಪಿರುವುದಾಗಿ ತಿಳಿಸಿದ್ದಾರೆ.
ಸಾವನ್ನಪ್ಪಿರುವ ಮೂರು ಕೈದಿಗಳನ್ನು ಅಂಶು ದೀಕ್ಷಿತ್, ಮೀರಾಜುದ್ದೀನ್ ಅಲಿಯಾಸ್ ಮೀರಜ್ ಅಲಿ ಮತ್ತು ಮುಕೀಮ್ ಕಾಲಾ ಎಂದು ಗುರುತಿಸಲಾಗಿದೆ. ಜೈಲಿನೊಳಗೆ ನಡೆದ ಘರ್ಷಣೆಯಲ್ಲಿ ದೀಕ್ಷಿತ್ ಅಲಿ ಮತ್ತು ಮುಕೀಮ್ ನನ್ನು ಗುಂಡಿಟ್ಟು ಹತ್ಯೆಗೈದಿದ್ದ.
ಬಳಿಕ ಕೆಲವು ಕೈದಿಗಳನ್ನು ಗನ್ ಪಾಯಿಂಟ್ ನಲ್ಲಿಟ್ಟು ಕೊಲ್ಲುವುದಾಗಿ ಬೆದರಿಕೆಯೊಡ್ಡಿದ್ದ, ಬಳಿಕ ಪೊಲೀಸರು ಮತ್ತು ದೀಕ್ಷಿತ್ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಹತ್ಯೆಗೀಡಾಗಿರುವುದಾಗಿ ಚಿತ್ರಕೂಟ್ ವಲಯದ ಪೊಲೀಸ್ ನಿರ್ದೇಶಕ ಕೆ.ಸತ್ಯನಾರಾಯಣ್ ತಿಳಿಸಿದ್ದಾರೆ.
ರಾಗೌಲಿ ಜಿಲ್ಲಾ ಕಾರಾಗೃಹದ ಜೈಲರ್ ಎಸ್ ಪಿ ತ್ರಿಪಾಠಿ ಅವರು ಈ ಬಗ್ಗೆ ಮೊದಲು ನೀಡಿದ್ದ ಹೇಳಿಕೆ ಪ್ರಕಾರ, ಜೈಲಿನೊಳಗೆ ಕೈದಿಗಳ ನಡುವೆ ವಾಗ್ವಾದ, ಘರ್ಷಣೆ ನಡೆಯುತ್ತಿದ್ದ ಸಂದರ್ಭದಲ್ಲಿ ಅಧಿಕಾರಿಗಳು ಮಧ್ಯಪ್ರವೇಶಿಸಿದ್ದಾಗ ದೀಕ್ಷಿತ್ ಸರ್ವೀಸ್ ರಿವಾಲ್ವರ್ ಅನ್ನು ಕಿತ್ತುಕೊಂಡು ಗುಂಡು ಹಾರಿಸಿರುವುದಾಗಿ ತಿಳಿಸಿದ್ದರು.