Advertisement

Goldy Brar: ಸಿಧು ಮೂಸೆವಾಲಾ ಹತ್ಯೆಯ ಮಾಸ್ಟರ್‌ ಮೈಂಡ್; ಗೋಲ್ಡಿ ಬ್ರಾರ್‌ ಶೂಟೌಟ್ – ವರದಿ

05:29 PM May 01, 2024 | Team Udayavani |

ನವದೆಹಲಿ: ಪಂಜಾಬಿ ಗಾಯಕ ಸಿಧು ಮೊಸೆವಾಲಾ ಹತ್ಯೆ ಪ್ರಕರಣದ ಪ್ರಮುಖ ರೂವಾರಿ ಗೋಲ್ಡಿ ಬ್ರಾರ್ ಗುಂಡಿನ ದಾಳಿಯಲ್ಲಿ ಹತ್ಯೆಗೀಡಾಗಿದ್ದಾನೆ ಎಂದು ವರದಿ ಆಗಿದೆ.

Advertisement

ಯುಎಸ್‌ನ ಕ್ಯಾಲಫೋರ್ನಿಯಾದ ಹೋಟೆಲ್ ಫೇರ್‌ಮೌಂಟ್‌ನಲ್ಲಿ ಗೋಲ್ಡಿ ಬ್ರಾರ್‌ ನನ್ನು ಗುಂಡಿಕ್ಕೆ ಹತ್ಯೆ ಮಾಡಲಾಗಿದೆ ಎಂದು ವರದಿಯಾಗಿದೆ.

ಈ ಕೃತ್ಯವನ್ನು ದಲ್ಲಾ ಲಖ್ಬೀರ್ ಗ್ಯಾಂಗ್‌ನ ಸದಸ್ಯರು ಮಾಡಿದ್ದಾರೆ ಎಂದು ʼನ್ಯೂಸ್‌ 18ʼ ವರದಿ ತಿಳಿಸಿದೆ.

ಆದರೆ ಈ ಬಗ್ಗೆ ಗುಪ್ತಚರ ಸಂಸ್ಥೆಗಳು ಮತ್ತು ಭದ್ರತಾ ಅಧಿಕಾರಿಗಳಿಂದ ಅಧಿಕೃತ ಮಾಹಿತಿ ಇದುವರೆಗೆ ಹೊರಬಿದ್ದಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಗೋಲ್ಡಿ ಹತ್ಯೆ ವಿಚಾರ ಹಬ್ಬಿದೆ.

ಲಾರೆನ್ಸ್‌ ಬಿಷ್ಣೋಯಿ ಸಿಧು ಮೂಸೆವಾಲಾ ಹತ್ಯೆ ಹಿಂದಿನ ಮಾಸ್ಟರ್‌ ಮೈಂಡ್‌ ಆಗಿದ್ದಾನೆ. ಇದೇ ಗ್ಯಾಂಗ್‌ ನಲ್ಲಿರುವ ಗೋಲ್ಡಿ ಬ್ರಾರ್‌ ಸಿಧು ಹತ್ಯೆಯ ರೂವಾರಿ ಆಗಿದ್ದ. ಕೆನಾಡದಲ್ಲಿದ್ದುಕೊಂಡೇ ಅಪರಾಧವನ್ನು ಕೃತ್ಯವನ್ನು ಮಾಡುತ್ತಿದ್ದ ಈತನನ್ನು ಭಾರತ ಸರ್ಕಾರ ವರ್ಷದ ಆರಂಭದಲ್ಲಿ ಭಯೋತ್ಪಾದಕ ಎಂದು ಘೋಷಿಸಿತ್ತು .

Advertisement

ಮೂಲತಃ ಪಂಜಾಬ್‌ ನವನಾಗಿದ್ದು, ಈತನ ನಿಜವಾದ ಹೆಸರು ಸತೀಂದರ್ಜೀತ್ ಸಿಂಗ್. ಈತ ಪಂಜಾಬ್‌ನ ಮಾಜಿ ಪೊಲೀಸ್‌ ಅಧಿಕಾರಿಯ ಮಗ. ಪಂಜಾಬ್‌ನಲ್ಲಿ ಸ್ಥಳೀಯ ಗ್ಯಾಂಗ್ ನಲ್ಲಿ ಭಾಗಿಯಾಗಿ ಅಪರಾಧ ಜಗತ್ತಿಗೆ ಕಾಲಿಟ್ಟ ಈತ ಮುಂದೆ ಹತ್ತಾರು ಕೃತ್ಯಗಳನ್ನು ಮಾಡಿ ಪಂಜಾಬ್‌ನ ಮೋಸ್ಟ್ ವಾಂಟೆಡ್‌ ಕ್ರಿಮಿನಲ್‌ ಆದ. ಅಕ್ರಮವಾಗಿ ಬಂದೂಕುಗಳನ್ನು ಪೂರೈಸುವುದು, ಹತ್ಯೆ, ಕೋಮು ಸೌಹಾರ್ದತೆಗೆ ಭಂಗ ತರುವುದು, ಧಮ್ಕಿ, ವಿಧ್ವಂಸಕ ಕೃತ್ಯಕ್ಕೆ ಪಿತೂರಿ ಹೀಗೆ ಹತ್ತಾರು ಪ್ರಕರಣಗಳು ಈತನ ಮೇಲಿದೆ.

2019 ರಲ್ಲಿ ವಿದ್ಯಾರ್ಥಿ ವೀಸಾದಲ್ಲಿ ಕೆನಡಾಕ್ಕೆ ತೆರಳಿದ್ದ. ಇಂದು ಕೆನಡಾದ 25 ಮೋಸ್ಟ್ ವಾಂಟೆಡ್‌ಗಳಲ್ಲಿ ಗೋಲ್ಡಿ ಒಬ್ಬನಾಗಿದ್ದಾನೆ.

Advertisement

Udayavani is now on Telegram. Click here to join our channel and stay updated with the latest news.

Next