Advertisement
ಆ. 23 ರಿಂದ ಗಂಗೊಳ್ಳಿ ಬಂದರಿನಲ್ಲಿ ಮೀನುಗಾರಿಕಾ ಋತು ಆರಂಭ ಗೊಂಡಿ ದ್ದರೂ, ಪ್ರತಿಕೂಲ ಹವಾಮಾನದಿಂದ ಒಂದೆ ರಡು ದಿನ ಮೀನುಗಾರಿಕೆಗೆ ತೆರಳಿರಲಿಲ್ಲ. ಕೆಲವು ಬೋಟುಗಳು ಹೋಗಿದ್ದರೂ, ಅಷ್ಟೇನೂ ಮೀನುಗಳು ಸಿಗದೇ ವಾಪಾಸು ಬಂದಿದ್ದವು. ಕಳೆದ 2-3 ದಿನಗಳಿಂದ ಉತ್ತಮ ಮೀನು ಸಿಗುತ್ತಿದ್ದು, ಗಂಗೊಳ್ಳಿ ಭಾಗದ ಮೀನುಗಾರರಲ್ಲಿ ಹೊಸ ಮಂದಹಾಸ ಮೂಡಿದೆ.
ಬುಲ್‌ಟ್ರಾಲ್ ಮೀನುಗಾರಿಕೆಗೆ ನಿಷೇಧ ಕಾಯ್ದೆ ತಿದ್ದುಪಡಿ ಮಾಡಿ ಬುಲ್‌ಟ್ರಾಲ್ ಮೀನುಗಾರಿಕೆಗೆ ಅವಕಾಶ ನೀಡಬೇಕು ಎಂದು ಆಗ್ರಹಿಸಿ ಗಂಗೊಳ್ಳಿಯಲ್ಲೂ ಕೂಡ ಸುಮಾರು 300 ರಷ್ಟು ಟ್ರಾಲ್‌ಬೋಟ್ (ತ್ರಿಸೆವೆಂಟಿ) ಗಳು ಮೀನುಗಾರಿಕೆಗೆ ತೆರಳದೆ ಬೋಟುಗಳನ್ನು ಬಂದರನಲ್ಲೆ ಲಂಗರು ಹಾಕಿವೆ. ಮಲ್ಪೆಯಲ್ಲೂ ಕೂಡ ಸುಮಾರು 600 ರಷ್ಟು ಟ್ರಾಲ್ ಬೋಟುಗಳು ಕಡಳಿಗಿಳಿದಿಲ್ಲ.
Related Articles
ಮೀನುಗಾರಿಕಾ ವೃತ್ತಿಯನ್ನೇ ಹೆಚ್ಚಾಗಿ ಅವಲಂಬಿಸಿರುವ ಗಂಗೊಳ್ಳಿ ಪೇಟೆಯಲ್ಲಿ ಮೀನುಗಾರಿಕಾ ರಜೆಯಿಂದಾಗಿ ಹೆಚ್ಚಿನ ವಹಿವಾಟು ನಡೆಯುತ್ತಿರಲಿಲ್ಲ. ಈಗ ಮತ್ತೆ ಮೀನುಗಾರಿಕೆ ಆರಂಭಗೊಂಡಿರುವುದರಿಂದ ಗಂಗೊಳ್ಳಿ ಪೇಟೆಗೂ ಮತ್ತೆ ಜೀವಕಳೆ ಬಂದಂತಾಗಿದೆ.
Advertisement