Advertisement

ಗಂಗೊಳ್ಳಿ ಮಹಾಂಕಾಳಿ ದೇಗುಲದ ಚಿನ್ನಾಭರಣ ಕಳವು?

10:49 AM Sep 22, 2024 | |

ಗಂಗೊಳ್ಳಿ: ಇಲ್ಲಿನ ಇತಿಹಾಸ ಪ್ರಸಿದ್ಧ ಶ್ರೀಮಹಾಂಕಾಳಿ ದೇವಸ್ಥಾನದ ದೇವರಿಗೆ ಹಾಕಲಾದ ಚಿನ್ನಾಭರಣ ಕಳವು ಆಗಿರುವುದಾಗಿ ತಿಳಿದು ಬಂದಿದೆ.

Advertisement

ದೇವರಿಗೆ ಹಾಕಲಾದ ಚಿನ್ನಾಭರಣದಲ್ಲಿ ನೈಜ ಚಿನ್ನ ಕದ್ದು, ನಕಲಿ ಆಭರಣ ಹಾಕಲಾಗಿದೆ ಎನ್ನುವ ಮಾಹಿತಿಯಿದೆ.

ಶನಿವಾರ ನವರಾತ್ರಿ ಹಿನ್ನೆಲೆಯಲ್ಲಿ ಸಮಿತಿಯವರು ದೇವರ ಮೂರ್ತಿ, ಆಭರಣಗಳನ್ನು ಸ್ವಚ್ಚ ಮಾಡಬೇಕು, ತೆಗೆದು ಕೊಡಿ ಎಂದು ಅರ್ಚಕರಿಗೆ ಕೇಳುವಾಗ ಈ ವಿಚಾರ ಬೆಳಕಿಗೆ ಬಂದಿದೆ.

ದೇವಸ್ಥಾನದ ಅರ್ಚಕರನ್ನು ಪೊಲೀಸರು ವಶಕ್ಕೆ ಪಡೆದು, ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗುತ್ತಿದೆ.

Advertisement

ಸುಮಾರು 30 ಪವನ್ ಗೂ ಮಿಕ್ಕಿ ಚಿನ್ನಾಭರಣ ಕಳವಾಗಿದೆ ಎನ್ನಲಾಗುತ್ತಿದ್ದು, ಅಂದಾಜು 20 ಲಕ್ಷ ರೂ. ಗೂ ಮಿಕ್ಕಿ ಮೌಲ್ಯದದ್ದಾಗಿದೆ. ಆದರೆ ಎಷ್ಟು ಚಿನ್ನಾಭರಣ ಕಳ್ಳತನವಾಗಿದೆ, ಯಾರು ಭಾಗಿಯಾಗಿದ್ದರೆ ಅನ್ನುವ ಮಾಹಿತಿ ಪೊಲೀಸ್ ತನಿಖೆಯಿಂದಷ್ಟೇ ತಿಳಿದು ಬರಬೇಕಿದೆ. ಸುದ್ದಿ ತಿಳಿಯುತ್ತಿದ್ದಂತೆ ಶನಿವಾರ ರಾತ್ರಿಯೇ ದೇವಸ್ಥಾನದಲ್ಲಿ ಅಪಾರ ಸಂಖ್ಯೆಯ ಭಕ್ತರು ಜಮಾಯಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next