Advertisement

Gangolli: ವಿದೇಶಿ ಉದ್ಯೋಗ ಹೆಸರಲ್ಲಿ ಲಕ್ಷಾಂತರ ರೂ. ವಂಚನೆ

08:58 PM Jun 04, 2024 | Team Udayavani |

ಗಂಗೊಳ್ಳಿ: ಕೆನಡಾದಲ್ಲಿ ಉದ್ಯೋಗ ನೀಡುವುದಾಗಿ ಹೇಳಿ ಲಕ್ಷಾಂತರ ರೂ. ವಂಚಿಸಿದ ಪ್ರಕರಣ ಗಂಗೊಳ್ಳಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Advertisement

ಗಂಗೊಳ್ಳಿಯ ಅಗಪಿತಾಸ್‌ ಪ್ರಂಕಿ ರೆಬೆರೋ (58) ಅವರು ವಂಚನೆಗೊಳಗಾದವರು. ರೆಬೆರೋ ಅವರ ಜಿ-ಮೇಲ್‌ ಖಾತೆಗೆ ಕಳೆದ ಎ. 20ರಂದು ಕೆನಡಾದಲ್ಲಿ ಕಾನ್‌ಕ್ರಿಜ್‌ (ಇಟncಜಿಛಿrಜಛಿ ಟffಜಿcಛಿr) ಅಧಿಕಾರಿ ಉದ್ಯೋಗಕ್ಕೆ ಆಫರ್‌ ನೀಡುವುದಾಗಿ ಸಂದೇಶ ಬಂದಿತ್ತು. ಅದರಲ್ಲಿ ಪ್ರತೀ ತಿಂಗಳು 6 ಸಾವಿರ ಡಾಲರ್‌ ಸಂಬಳ, ವಾರದಲ್ಲಿ 6 ದಿನ, ಪ್ರತೀ ದಿನ 8 ಗಂಟೆ ಕೆಲಸ, ಊಟ, ವಸತಿಯನ್ನು ಕಂಪೆನಿ ನೀಡಲಿದ್ದು, 2 ವರ್ಷಗಳ ಗುತ್ತಿಗೆ ಇರುವುದಾಗಿ ಅದರಲ್ಲಿತ್ತು.

ಉದ್ಯೋಗ ಪಡೆಯುವ ಉದ್ದೇಶದಿಂದ ರೆಬೆರೋ ಅವರು ಆಸಕ್ತಿಯಿರುವುದಾಗಿ ಮೇಲ್‌ ಮಾಡಿದ್ದಾರೆ. ಮೇ 4ರಂದು ಕೆನಡಾ ಇಮಿಗ್ರೇಶನ್‌ ಹಾಗೂ ವೀಸಾ ಸರ್ವಿಸ್‌ನ ಖಾತೆಯಿಂದ ಮೆಸೇಜ್‌ ಬಂದಿದ್ದು, ವೀಸಾ ಅಸೆಸ್ಮೆಂಟ್‌ ಅರ್ಜಿ ಹಾಗೂ ದಾಖಲೆಗಳು ನೀಡುವಂತೆ ಕೇಳಿದ್ದಾರೆ. ಅದರಂತೆ ಅರ್ಜಿ ಭರ್ತಿ ಮಾಡಿ, ದಾಖಲೆಗಳನ್ನು ಸ್ಕ್ಯಾನ್‌ ಮಾಡಿ ಕಳುಹಿಸಿದ್ದಾರೆ.

ಆ ಬಳಿಕ ಮೇ 9ರಿಂದ ಮೇ 27ರ ವರೆಗೆ ರೆಬೆರೋ ಅವರಿಗೆ ಕೆನಡಾದಲ್ಲಿ ಉದ್ಯೋಗ ನೀಡುವ ಕುರಿತು ಮೇಲ್‌ ಮೂಲಕ ಮೆಸೇಜ್‌ ಕಳುಹಿಸಿ, ರೆಬೆರೋ ಅವರನ್ನು ನಂಬಿಸಿ, ಒಟ್ಟು 2,27,441 ರೂ. ಹಣವನ್ನು ಬೇರೆ ಬೇರೆ ಖಾತೆಗಳಿಗೆ ಆ ವಂಚಕರು ಹಾಕಿಕೊಂಡು ವಂಚಿಸಿರುವುದಾಗಿದೆ. ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next