Advertisement

Gangolli fire: ಸಂತ್ರಸ್ತ ಮೀನುಗಾರರಿಗೆ ಪರಿಹಾರಕ್ಕೆ ಗುರುರಾಜ್‌ ಗಂಟಿಹೊಳೆ ಆಗ್ರಹ

11:15 PM Dec 12, 2023 | Team Udayavani |

ಬೆಳಗಾವಿ: ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಗಂಗೊಳ್ಳಿ ಮ್ಯಾಂಗನೀಸ್‌ ಮಾಫ್ìನಲ್ಲಿ ಸಂಭವಿಸಿದ ಅಗ್ನಿ ದುರಂತದಿಂದ ಸಾಕಷ್ಟು ಮೀನುಗಾರರಿಗೆ ನಷ್ಟ ಉಂಟಾಗಿದ್ದು, ಅದಕ್ಕೆ ಪರಿಹಾರ ಕೊಡಬೇಕು ಹಾಗೂ ಗಂಗೊಳ್ಳಿ ಜಟ್ಟಿಯಲ್ಲಿ ಸಂಭವಿಸಬಹುದಾದ ದುರಂತದ ಬಗ್ಗೆ ಮುನ್ನೆಚ್ಚರಿಕೆ ವಹಿಸುವಂತೆ ಬೈಂದೂರಿನ ಬಿಜೆಪಿ ಶಾಸಕ ಗುರುರಾಜ್‌ ಗಂಟಿಹೊಳೆ ಅವರು ಒತ್ತಾಯಿಸಿದರು.

Advertisement

ಮಂಗಳವಾರ ವಿಧಾನಸಭೆಯ ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾವಿಸಿದ ಅವರು, ನ. 13ರಂದು ಗಂಗೊಳ್ಳಿಯಲ್ಲಿ ದೋಣಿಗಳಿಗೆ ಬೆಂಕಿ ಬಿದ್ದು, ಮೀನುಗಾರಿಕೆಗೆ ಸಂಬಂಧಿಸಿದ ಬಲೆ ಇತ್ಯಾದಿ ಪರಿಕರಗಳು, ದೋಣಿ ಎಲ್ಲವೂ ನಾಶವಾಗಿತ್ತು. ಈ ಬಗ್ಗೆ ಎಚ್ಚರಿಸಿದ್ದರೂ ಸರಕಾರ ಎಚ್ಚೆತ್ತುಕೊಳ್ಳದೆ ಅನಾಹುತ ಸಂಭವಿಸಿದೆ. ಪರಿಹಾರವನ್ನೇ ಕೊಟ್ಟಿಲ್ಲ. ತತ್‌ಕ್ಷಣ ಕೊಡಬೇಕು ಎಂದು ಆಗ್ರಹಿಸಿದರು. ಅಷ್ಟೇ ಅಲ್ಲದೆ, ಗಂಗೊಳ್ಳಿ ಜಟ್ಟಿಯಲ್ಲಿ ಮತ್ತೂಂದು ದುರಂತ ಸಂಭವಿಸುವ ಅಪಾಯ ಇದ್ದು, ಈಗಲೇ ಮುನ್ನೆಚ್ಚರಿಕೆ ವಹಿಸಬೇಕು. ನಮ್ಮದು ಅರಣ್ಯ ರೋದನ ಆಗಿದೆ. ಸರಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಗಮನ ಸೆಳೆದರು.

ಇದಕ್ಕೆ ಮೀನುಗಾರಿಕ ಸಚಿವ ಮಂಕಾಳ ವೈದ್ಯ ಪರವಾಗಿ ಉತ್ತರಿಸಿದ ಕಾನೂನು ಸಚಿವ ಎಚ್‌.ಕೆ. ಪಾಟೀಲ್‌, ದೋಣಿ ದುರಂತದಿಂದ ಸುಮಾರು 7 ಕೋಟಿ ರೂ. ನಷ್ಟವಾಗಿರುವ ಅಂದಾಜಿದೆ. ಸಚಿವರು ಸ್ಥಳಕ್ಕೆ ಭೇಟಿ ನೀಡಿ ಸಂತ್ರಸ್ತರಿಗೆ ಸಾಂತ್ವನ ಹೇಳಿದ್ದಾರೆ. ಪರಿಹಾರ ಕೊಡುವ ಬಗ್ಗೆ ನಿಯಮಾನುಸಾರ ಪರಿಶೀಲಿಸಿ ಕ್ರಮ ವಹಿಸಲಾಗುತ್ತದೆ ಎಂದು ಭರವಸೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next