Advertisement
ಪ್ರಕರಣದ ವಿವರಮರವಂತೆಯ ಮನ್ಸೂರ್ ಇಬ್ರಾಹಿಂ ಎಂಬವರಿಂದ ಅಬ್ಟಾಸ್ ಬಡಾಕೆರೆ, ನಾವುಂದದ ಸುಲೈಮಾನ್, ಗುಲ್ವಾಡಿಯ ಉಬೈದುಲ್ಲಾ ಎಂಬವರು ಎರಡು ವರ್ಷಗಳ ಹಿಂದೆ ಮದುವೆ ಕಾರ್ಯಕ್ರಮಕ್ಕೆಂದು ಪತ್ನಿ, ಮಕ್ಕಳ ಚಿನ್ನಾಭರಣ ಕೇಳಿ ಪಡೆದುಕೊಂಡು ಹೋಗಿದ್ದರು. ಒಂದು ದಿನದ ಕಾರ್ಯಕ್ರಮ ಮುಗಿಸಿ ಹಿಂದಿರುಗಿಸುವುದಾಗಿ ತಿಳಿಸಿದ್ದರು. ಅದರಂತೆ ಇಬ್ರಾಹಿಂ ಅವರು ಪತ್ನಿಯ 3 ನೆಕ್ಲೆಸ್, ಮಕ್ಕಳ ಬ್ರಾಸ್ಲೆಟ್, ಚೈನ್, ಬಳೆ, ಮತ್ತೂಂದು ಚೈನ್ ಸಹಿತ ಒಟ್ಟು 4.50 ಲಕ್ಷ ರೂ. ಮೌಲ್ಯದ 12 ಪವನ್ ಚಿನ್ನಾಭರಣವನ್ನು ನೀಡಿದ್ದರು. ಆದರೆ ಅವುಗಳನ್ನು ಹಿಂದಿರುಗಿಸದೆ ವಂಚಿಸಲಾಗಿದೆ ಎಂದು ಮನ್ಸೂರ್ ಇಬ್ರಾಹಿಂ ಪೊಲೀಸರಿಗೆ ದೂರು ನೀಡಿದ್ದಾರೆ.