Advertisement
ಗಂಗೊಳ್ಳಿಯಲ್ಲಿ ಶಾರದಾ ವಿಗ್ರಹವನ್ನು ಪ್ರಥಮ ಬಾರಿಗೆ ಎಸ್.ವಿ ಜೂನಿಯರ್ ಕಾಲೇಜ್‌ನಲ್ಲಿ ಇಡಲಾಗಿತ್ತು. ಅಲ್ಲಿಂದ ಡಾಕ್ ತನಕ ಮೆರವಣಿಗೆ ಹೊರಡುತ್ತಿತ್ತು. ಅಂದಿನ ಶಾರದೋತ್ಸವ ಸಮಿತಿಯ ಸದಸ್ಯ ಆಶಾ ಸೌಂಡ್ ಸಿಸ್ಟಮ್‌ನ ಜಿ. ನಾರಾಯಣ ಖಾರ್ವಿಯವರ ನೆನಪಿನಂತೆ, ಪೈಂಟರ್ ಜಗ್ಗಣ್ಣ, ಬಾಷಾ ಸಾಹೇಬರು ಹುಲಿಗೆ ಬಣ್ಣ ಬಳಿಯುತ್ತಿದ್ದರು. ಟಪ್ಪಾಲ್ ನಾರಾಯಣ ದೇವಾಡಿಗ, ರಾಮ ದೇವಾಡಿಗ, ಜಗನ್ನಾಥ ದೇವಾಡಿಗ, ಮುತ್ತ ದೇವಾಡಿಗ ಅವರ ಹೆಜ್ಜೆ ನೃತ್ಯ ತಾಳಕ್ಕೆ ಸರಿಯಾಗಿ ಇರುತ್ತಿತ್ತು. ಮುಸಲ್ಮಾನರ ಫೀರ್ ಹಬ್ಬದಲ್ಲಿ ಬಾಷಾ ಸಾಹೇಬರು ಮತ್ತು ಗಫೂರ್ ಸಾಹೇಬರು ಹುಲಿವೇಷ ಹಾಕಿ ಕುಣಿಯುತ್ತಿದ್ದುದನ್ನು ಪ್ರತಿಯೊಬ್ಬರೂ ಇಷ್ಟಪಡುತ್ತಿದ್ದರು.
Related Articles
Advertisement
ಜಿ.ಎಸ್.ಬಿ. ಸಮುದಾಯದ ವಾಮನ ಪೈ, ವಂಕ್ಷೆ ಶಾಂತಾರಾಂ ಶೆಣೈ, ಪ್ರಭಾಕರ ಪೈ, ಡಾ| ಎಸ್.ವಿ. ಪೈ ಇವರ ಸಹಕಾರ ಅಭೂತಪೂರ್ವ. 1973ರಲ್ಲಿ ಗಂಗೊಳ್ಳಿಯಲ್ಲಿ ಸೇವಾಸಂಘ ಹುಟ್ಟು ಹಾಕಿ ಸೇವೆ ನೀಡಿದರು. ಎಲ್ಲ ಜಾತಿಯವರು ಸೇರಿ ಶಾರದಾ ಮೂರ್ತಿ ಇಟ್ಟು ಶಾರದೋತ್ಸವ ಆರಂಭಿಸಲಾಯಿತು ಎನ್ನುತ್ತಾರೆ ವಾಮನ್ ಪೈ. ಈ ಬಾರಿ ಸುವರ್ಣ ಮಹೋತ್ಸವ ಸಡಗರದಲ್ಲಿ ಗಂಗೊಳ್ಳಿ ನವರಾತ್ರಿ ಶಾರದಾ ಸುವರ್ಣ ಮಹೋತ್ಸವ-2024 ರಲ್ಲಿ 13ಕ್ಕೂ ಮಿಕ್ಕಿ ಹಳೆ ಮತ್ತು ನೂತನ ಹುಲಿ ವೇಷಧಾರಿಗಳಿಗೆ ಸಮ್ಮಾನ ನಡೆಯಲಿದೆ. ಹುಲಿವೇಷಗಳ ಚಂದವೇ ಬೇರೆ
ಗಂಡು ಮಕ್ಕಳು ಮಾತ್ರ ಅಲ್ಲ ಹೆಣ್ಣು ಮಕ್ಕಳು ಕೂಡ ಮೆರವಣಿಗೆಯಲ್ಲಿ ವೇಷ ಇಲ್ಲದೇ ಹುಲಿ ನೃತ್ಯ ಮಾಡಿ ನವಿಲುಗರಿ ಮೂಡಿಸಿದ್ದಾರೆ. ಗಂಗೊಳ್ಳಿ ಕುಂದಾಪುರ ಕಡೆಯ ಹುಲಿನೃತ್ಯದ ಚೆಂದವೇ ಬೇರೆ. ಇಂದಿಗೂ ಆ ಗತ್ತು ಉಳಿಸಿಕೊಂಡಿದೆ.
-ರವಿ ಕುಮಾರ್ ಗಂಗೊಳ್ಳಿ, ನ್ಯಾಯವಾದಿ ಗಂಗೊಳ್ಳಿಯ ಹುಲಿ ತಂಡಗಳು
- ಶಾರದ-ಪಂಜುರ್ಲಿ ಹುಲಿ ಬಳಗ
- ಸಂಪಿಗೆ ಜಟ್ಟಿಗ ಹುಲಿ ತಂಡ
- ಬಾವಿಕಟ್ಟೆ ಮಹಾಸತಿ ಹುಲಿವೇಷ ಬಳಗ
- ಸೀತಾಳೆ ಕಳೆಹಿತ್ಲು ಹುಲಿ ಬಳಗ
- ಬೇಲಿಕೇರಿ ನಾಗಶಕ್ತಿ ಹುಲಿ ಬಳಗ
- ಸ್ವಾಮಿ ಕೊರಗಜ್ಜ ಹುಲಿ ತಂಡ ಮತ್ತು ಮಕ್ಕಳ ತಂಡಗಳು.