Advertisement

ಗಂಗೊಳ್ಳಿ: ಇನ್ನೂ ದುರಸ್ತಿಯಾಗಿಲ್ಲ ಕುಸಿದ ಸ್ಲ್ಯಾಬ್ 

12:30 AM Feb 17, 2019 | |

ಗಂಗೊಳ್ಳಿ: ಇಲ್ಲಿನ ಬಂದರಿನಲ್ಲಿರುವ ಸ್ಲ್ಯಾಬ್ ಎರಡು ಕಡೆಗಳಲ್ಲಿ ಕುಸಿದು ಹಲವು ತಿಂಗಳುಗಳೇ ಕಳೆದರೂ ಇನ್ನೂ ಇದರ ದುರಸ್ತಿಗೆ ಕಾಲವೇ ಕೂಡಿ ಬಂದಿಲ್ಲ. ಇದರಿಂದ ಮೀನುಗಾರರು ಸಂಬಂಧಪಟ್ಟ ಇಲಾಖೆ, ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

Advertisement

ಕಳೆದ ವರ್ಷದ ಅ. 13ರಂದು ಎರಡನೇ ಹರಾಜು ಪ್ರಾಂಗಣದಲ್ಲಿರುವ ಜೆಟ್ಟಿಯ ಸ್ಲ್ಯಾಬ್  ಮೊದಲ ಬಾರಿಗೆ ಕುಸಿದಿತ್ತು. ಆ ಬಳಿಕ ಮತ್ತೆ ಅದೇ ಹರಾಜು ಪ್ರಾಂಗಣದ ಮತ್ತೂಂದು ಕಡೆಯ ಸ್ಲ್ಯಾಬ್  ಡಿ. 7ರಂದು ಕುಸಿದು ಬಿದ್ದಿದೆ. ಇದಾಗಿ ಸುಮಾರು ಎರಡು ತಿಂಗಳುಗಳೇ ಕಳೆದಿವೆ.
 
ಶೀಘ್ರ ದುರಸ್ತಿಗೆ ಮುಂದಾಗಲಿ
ಈ ಬಗ್ಗೆ ಇಲ್ಲಿಗೆ ಭೇಟಿ ಕೊಟ್ಟ ಇಲಾಖೆಯ ಬೆಂಗಳೂರಿನ ಅಧಿಕಾರಿಗಳಿಗೂ ಮನವಿ ಸಲ್ಲಿಸಲಾಗಿದೆ. ಪ್ರತಿ ಬಾರಿ ಕೇಳಿದಾಗಲೂ ಯೋಜನೆ ಸಿದ್ಧವಾಗಿದೆ ಅಂತ ಹೇಳುತ್ತಾರೆ ಅಷ್ಟೇ. ಈಗ ಮತ್ಸéಕ್ಷಾಮದಿಂದ ಬಂದರಿ ನಲ್ಲಿ ಅಷ್ಟೇನೂ ಮೀನುಗಾರಿಕಾ ಚಟುವಟಿಕೆಯಿಲ್ಲ. ಈ ಸಂದರ್ಭ ದುರಸ್ತಿಗೆ ಮುಂದಾದರೆ ಪ್ರಯೋಜನ ವಾಗಲಿದೆ. ಆದಷ್ಟು ಬೇಗ ಇದರ ದುರಸ್ತಿಗೆ ಮುಂದಾಗಲಿದೆ ಎನ್ನುವುದು ಹಸಿ ಮೀನು ವ್ಯಾಪಾರಸ್ಥರ ಸಂಘದ ರವಿಶಂಕರ್‌ ಖಾರ್ವಿ ಅವರ ಆಗ್ರಹ. 

ಅಂದಾಜು ಪಟ್ಟಿ ಕಳುಹಿಸಲಾಗಿದೆ
ಗಂಗೊಳ್ಳಿ ಬಂದರಿನ ಎರಡು ಕಡೆಗಳಲ್ಲಿ ಕುಸಿದ ಸ್ಲ್ಯಾಬ್ ನ ದುರಸ್ತಿಗೆ ಈಗಾಗಲೇ ಯೋಜನೆ ಸಿದ್ಧಪಡಿಸಿ, ಬೆಂಗಳೂರಿನಲ್ಲಿರುವ ಇಲಾಖೆಯ ಮುಖ್ಯ ಕಚೇರಿಗೆ ಕಳುಹಿಸಲಾಗಿದೆ. ಸುಮಾರು 1.96 ಕೋ.ರೂ. ಅಂದಾಜು ಪಟ್ಟಿ ಸಿದ್ದಪಡಿಸಲಾಗಿದೆ. ಅಲ್ಲಿಂದ ಅನುದಾನ ಬಿಡುಗಡೆಗೊಂಡ ತತ್‌ಕ್ಷಣ ದುರಸ್ತಿ ಕಾಮಗಾರಿ ಕೈಗೊಳ್ಳುತ್ತೇವೆ.
– ಎಂ.ಎಲ್‌. ದೊಡ್ಮಣಿ, ಜಂಟಿ ನಿರ್ದೇಶಕ (ಪ್ರಭಾರ) ಮೀನುಗಾರಿಕಾ ಇಲಾಖೆ, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next