ಕುಂದಾಪುರ: ಗಂಗೊಳ್ಳಿ ಗ್ರಾಮದ ಕೊಡೇರಿಮನೆ ಬ್ಯಾಲಿಹಿತ್ಲುವಿನಲ್ಲಿ ನಿರಂತರ ಸುರಿದ ಮಳೆಯಿಂದಾಗಿ ಶುಕ್ರವಾರ ಮುಂಜಾನೆ ಜಲಜ ಪೂಜಾರ್ತಿ ಅವರ ಮನೆ ಛಾವಣಿ ಹಾರಿಹೋಗಿದ್ದು ಕುಟುಂಬ ಅಪಾಯದಲ್ಲಿದೆ.
ಮನೆ ಸಂಪೂರ್ಣ ಜಖಂಗೊಂಡಿದ್ದು ಯಾವುದೇ ಜೀವ ಹಾನಿಯಾಗಿಲ್ಲ. ಬಡಕಾರ್ಮಿಕರ ಕುಟುಂಬ ಅತಂತ್ರವಾಗಿದೆ. ಮಳೆ ಮುಂದುವರಿಯುವ ಸಾಧ್ಯತೆ ಇರುವುದರಿಂದ ಕುಟುಂಬವು ಭಯದಲ್ಲಿ ಬದುಕುತ್ತಿದೆ. ಸ್ಥಳೀಯ ಜನಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ ಘಟನೆ ವಿಚಾರ ತಿಳಿಸಿದರೂ ಮಧ್ಯಾಹ್ನದವರೆಗೂ ಭೇಟಿ ನೀಡಿಲ್ಲ ಎಂದು ಆರೋಪಿಸಲಾಗಿದೆ.
ಘಟನೆ ನಡೆದ ಸ್ಥಳಕ್ಕೆ ಸಿಪಿಎಂ ಪಕ್ಷದ ನಿಯೋಗವು ಭೇಟಿ ನೀಡಿತು. ಸ್ಥಳೀಯ ಗ್ರಾಮ ಪಂಚಾಯತ್ ಸಂಪರ್ಕಿಸಿದಾಗ ಸರಿಯಾಗಿ ಸ್ಪಂದಿಸಿಲ್ಲ ಎಂದು ನಿಯೋಗ ತಿಳಿಸಿದೆ. ನಿಯೋಗದಲ್ಲಿ ಬಾಲಕೃಷ್ಣ ಶೆಟ್ಟಿ, ಕೆ. ಶಂಕರ್, ಸುರೇಶ್ ಕಲ್ಲಾಗರ, ಸಂತೋಷ ಹೆಮ್ಮಾಡಿ, ಸ್ಥಳೀಯ ಮುಖಂಡರಾದ ಅರುಣ್ ಕುಮಾರ್, ಅಭಿನಂದನ, ವಿವೇಕ್, ಚಿಕ್ಕಮೊಗವೀರ ಇದ್ದರು.
ಭೇಟಿ
ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಪ್ರೇಮಾ ಪೂಜಾರಿ, ಸ್ಥಳೀಯ ಸದಸ್ಯರಾದ ಸುಮಿತಾ, ಕಂದಾಯ ಇಲಾಖೆ ಗ್ರಾಮಕರಣಿಕರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.