Advertisement
ಮೇನಲ್ಲಿ ಮೀನುಗಾರಿಕೆ ಮುಗಿಸಿದಡದಲ್ಲಿ ಲಂಗರು ಹಾಕಿದ್ದ ಬೋಟು ಗಳು ಈಗ ಮತ್ತೆ ಕಡಲಿಗಿಳಿಯಲು ಸಜ್ಜಾಗುತ್ತಿದ್ದು, ಗಂಗೊಳ್ಳಿ ಬಂದರಿನಲ್ಲಿ ಇವರು ಕೊನೆಯ ಕ್ಷಣದ ಸಿದ್ಧತೆ ನಡೆಸುತ್ತಿದ್ದಾರೆ. ಇಲ್ಲಿನ ಮ್ಯಾಂಗನೀಸ್ ವಾರ್ಫ್ ಬಳಿ ದಡದಲ್ಲಿ ನಿಲ್ಲಿಸಲಾಗಿದ್ದ ಬೋಟ್‌ಗಳನ್ನು ಒಂದೊಂದಾಗಿಯೇ ಸಮುದ್ರಕ್ಕಿಳಿಸಿ, ಮೀನುಗಾರಿಕೆಗೆ ತೆರಳಲು ತಯಾರಿ ನಡೆಸಿದ್ದಾರೆ. ಮಂಗಳೂರಿನಲ್ಲಿ ಈಗಾಗಲೇ ಆರಂಭಗೊಂಡಿದ್ದರೆ, ಮಲ್ಪೆಯಲ್ಲಿ ಇನ್ನೊಂದೆ ರಡು ದಿನಗಳಲ್ಲಿ ಆರಂಭವಾಗುವ ಸಾಧ್ಯತೆಯಿದೆ.
ಹರ್ಷದಾಯಕ ಋತುವಿನ ನಿರೀಕ್ಷೆ ಕಳೆದ ವರ್ಷ ಹವಾಮಾನ ವೈಪರೀತ್ಯ, ಚಂಡಮಾರುತ, ಲೈಟ್ ಫಿಶಿಂಗ್ ನಿಷೇಧ, ಇಲ್ಲಿನ ಮೀನುಗಳಿಗೆ ಗೋವಾ ರಾಜ್ಯದಲ್ಲಿ ನಿಷೇಧ ಸೇರಿದಂತೆ ಅನೇಕ ಸಮಸ್ಯೆ ಎದುರಿಸಿದ್ದರು. ಆ.10ರ ಅನಂತರ ಆರಂಭ
ಗಂಗೊಳ್ಳಿಯಲ್ಲಿ ಈಗಾಗಲೇ ಮೀನು ಗಾರರು ಸಮುದ್ರಕ್ಕಿಳಿಯಲು ಎಲ್ಲ ಸಿದ್ಧತೆ ಮಾಡಿಕೊಂಡಿದ್ದಾರೆ. ಆದರೆ ಸಮುದ್ರದ ಅಲೆಗಳ ಅಬ್ಬರ ಹೆಚ್ಚಾಗಿರುವುದರಿಂದ ಈಗ ಮೀನುಗಾರಿಕೆಗೆ ತೊಂದರೆ ಯಾಗುವುದರಿಂದ ಆ. 10 ಅಥವಾ 11 ನಂತರ ಆರಂಭವಾಗಬಹುದು. ಇನ್ನೂ ಕೂಡ ಬಂದರಿನ ಜೆಟ್ಟಿ ದುರಸ್ತಿ ಮಾಡದೇ ಇರುವುದು, ಕೋಡಿ ಹಾಗೂ ಗಂಗೊಳ್ಳಿಯ ಬ್ರೇಕ್ ವಾಟರ್‌ಗಳನ್ನು ಸ್ವಲ್ಪ ದೂರದವರೆಗೆ ವಿಸ್ತರಿಸದೇ ಇರುವುದು ಹಾಗೂ ಅಳಿವೆ ಭಾಗದಲ್ಲಿ ತುಂಬಿರುವ ಹೂಳನ್ನು ತೆಗೆಯದೇ ಇರುವುದ ರಿಂದ ಮೀನುಗಾರರಿಗೆ ಸಮಸ್ಯೆಯಾಗಲಿದೆ. -ರಮೇಶ್ ಕುಂದರ್,
ಅಧ್ಯಕ್ಷರು, ಪಸೀìನ್‌ಮೀನುಗಾರರ ಸಹಕಾರ ಸಂಘ, ಗಂಗೊಳ್ಳಿ
Related Articles
ಇಲ್ಲಿನ ಬಂದರಿನ ಎರಡನೇ ಹರಾಜು ಪ್ರಾಂಗಣದ ಜೆಟ್ಟಿ ಕುಸಿದು ಹಲವು ಸಮಯ ಕಳೆದಿದ್ದು, ಇದರ ದುರಸ್ತಿಗೆ ಕಳೆದ ಜೂನ್‌ನಲ್ಲಿ ಬಂದರು ಮತ್ತು ಮೀನುಗಾರಿಕೆ ಇಲಾಖೆಯಂದ ಅನುದಾನ ಮಂಜೂರಾಗಿದೆ. ಆದರೆ ನಿಷೇಧ ಅವಧಿ ಮುಕ್ತಾಯಗೊಂಡು, ಯಾಂತ್ರೀಕೃತ ಮೀನುಗಾರಿಕೆ ಆರಂಭಗೊಳ್ಳುತ್ತಿದ್ದರೂ, ಇಲ್ಲಿ ಯಾವುದೇ ಮೀನುಗಾರಿಕಾ ಚಟುವಟಿಕೆ ನಡೆಸಲು ಸಾಧ್ಯವಿಲ್ಲ. ಇದರಿಂದ ಬಂದರಲ್ಲಿ ಈಗ ಮೀನುಗಾರಿಕೆ ಮುಗಿಸಿ ಬರುವ ಬೋಟ್‌ಗಳಿಂದ ಮೀನು ಇಳಿಸಲು ಜಾಗದ ಸಮಸ್ಯೆ ಇದ್ದು, ಅದಕ್ಕೂ ಮೊದಲು ದುರಸ್ತಿ ಮಾಡಿದ್ದರೆ ಅನುಕೂಲವಾಗುತ್ತಿತ್ತು ಎನ್ನುವುದು ಮೀನುಗಾರರ ಅಭಿಪ್ರಾಯ.
Advertisement
– ಪ್ರಶಾಂತ್‌ಪಾದೆ