Advertisement
ಕೋಡಿಯಲ್ಲಿ ಸುಮಾರು 900 ಮೀ. ಹಾಗೂ ಗಂಗೊಳ್ಳಿಯಲ್ಲಿ 700 ಮೀ. ಉದ್ದದ 102 ಕೋ.ರೂ. ವೆಚ್ಚದ ಬ್ರೇಕ್ ವಾಟರ್ ಕಾಮಗಾರಿ ಕಳೆದ ವರ್ಷ ಪೂರ್ಣಗೊಂಡಿತ್ತು. ಮೇನಲ್ಲಿ ಗಂಗೊಳ್ಳಿ ಭಾಗದಲ್ಲಿ ಟೆಟ್ರಾಫೈಡ್ ಹಾಗೂ ಕಲ್ಲುಗಳನ್ನು ಹಾಕಿ ನಿರ್ಮಿಸಲಾದ 700 ಮೀ. ಉದ್ದದ ಬ್ರೇಕ್ ವಾಟರ್‌ನ ಕಲ್ಲುಗಳು ಕುಸಿದಿದ್ದು, ಅದು ಈಗ ಮತ್ತಷ್ಟು ಹೆಚ್ಚಾಗುತ್ತಿದೆ.
ಭೇಟಿ ನೀಡಿದ್ದ ವೇಳೆಯೇ ಸದ್ಯಕ್ಕೆ ಕಲ್ಲು ಹಾಕಿ ಕುಸಿಯದಂತೆ ಎಚ್ಚರಿಕೆ ವಹಿಸಲು ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿತ್ತು. ಆದರೆ ಆ ಬಳಿಕ ಮಳೆ ಆರಂಭವಾಗಿದ್ದರಿಂದ ಕಷ್ಟವಾಯಿತು. ಈಗ ಕುಸಿಯುತ್ತಿರುವುದರಿಂದ ಕುಸಿಯದಂತೆ ಕಲ್ಲುಗಳನ್ನು ಹಾಕಲು ಗುತ್ತಿಗೆದಾರರಿಗೆ ಸೂಚನೆ ನೀಡಲಾಗುವುದು.
– ಉದಯಕುಮಾರ್, ಸಹಾಯಕ ಎಂಜಿನಿಯರ್, ಬಂದರು ಮತ್ತು ಮೀನುಗಾರಿಕಾ ಇಲಾಖೆ ಉಡುಪಿ