Advertisement
12 ಕೋ.ರೂ. ಅನುದಾನಇದರ ಸಂಪೂರ್ಣ ಪುನರ್ ನಿರ್ಮಾಣಕ್ಕಾಗಿ ಸಂಸದ ಬಿ.ವೈ. ರಾಘವೇಂದ್ರ, ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಅವರ ಶಿಫಾರಸಿನಂತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ಮುತುವರ್ಜಿಯಲ್ಲಿ 12 ಕೋ.ರೂ. ಮಂಜೂರಾತಿಗೆ ಫೆ. 16ರ ಸಂಪುಟ ಸಭೆಯು ಆಡಳಿ ತಾತ್ಮಕ ಅನುಮೋದನೆ ನೀಡಿತ್ತು. ಆದರೆ ಮುಂದಿನ ಒಂದು ತಿಂಗಳಲ್ಲಿ ಲಾಕ್‌ಡೌನ್
ಜಾರಿಯಾಗಿ, ಎಲ್ಲ ಕಾರ್ಯ ಚಟುವಟಿಕೆಗೆ ಅಡ್ಡಿಯಾಯಿತು. ಇದರಿಂದ ಬೇಸಗೆ ಯಲ್ಲಿ ನಡೆಯಲಿದ್ದ ಜೆಟ್ಟಿಯ ಕಾಮಗಾರಿ ಮುಂದಕ್ಕೆ ಹೋಯಿತು.
ಇಲ್ಲಿ 300ಕ್ಕೂ ಅಧಿಕ ಪರ್ಸಿನ್ ಬೋಟ್‌ಗಳು, 600ಕ್ಕೂ ಹೆಚ್ಚು ಇತರ ಬೋಟ್‌ಗಳು, 500ಕ್ಕೂ ಅಧಿಕ ನಾಡ ದೋಣಿಗಳಿದ್ದು, ಸಾವಿರಾರು ಮೀನು ಗಾರರು ಇದನ್ನು ಅವಲಂಬಿಸಿದ್ದಾರೆ. ಆದರೆ ಸುಮಾರು 405 ಮೀ. ಉದ್ದದ ಮೀನುಗಾರಿಕೆ ಜೆಟ್ಟಿಯಲ್ಲಿ ಈಗ ಕೇವಲ 150 ಮೀ. ಮಾತ್ರ ಉಪಯೋಗಕ್ಕೆ ಸಿಗುತ್ತಿದೆ. ಇದರಿಂದ ಬೋಟ್, ದೋಣಿಗಳನ್ನು ನಿಲ್ಲಿಸಲು ನಿತ್ಯ ಸಮಸ್ಯೆಯಾಗುತ್ತಿದೆ. ಮುಂದಿನ ತಿಂಗಳು ಟೆಂಡರ್
ಪುನರ್ ನಿರ್ಮಾಣ ಕಾಮಗಾರಿಯ ಅಂದಾಜು ಪಟ್ಟಿಯನ್ನು ತಾಂತ್ರಿಕ ಅನುಮೋದನೆಗಾಗಿ ಮುಖ್ಯ ಕಾರ್ಯನಿರ್ವಾಹಕ ಅಭಿಯಂತರರಿಗೆ ಕಳುಹಿಸಲಾಗಿದೆ. ಮುಂದಿನ ತಿಂಗಳಲ್ಲಿ ಕಾಮಗಾರಿಯ ಟೆಂಡರ್ ಕರೆಯಲಾಗುವುದು.
-ಮಂಚೇ ಗೌಡ , ಕಾರ್ಯಪಾಲಕ ಎಂಜಿನಿಯರ್, ಬಂದರು ಮತ್ತು ಮೀನುಗಾರಿಕೆ ಇಲಾಖೆ, ಉಡುಪಿ