Advertisement

Gange Gowri Movie: ಟೀಸರ್‌ನಲ್ಲಿ ಗಂಗೆ-ಗೌರಿ; ಮುಂದಿನ ತಿಂಗಳು ತೆರೆಗೆ

10:28 AM Mar 06, 2024 | Team Udayavani |

ಗಣೇಶ್‌ ರಾವ್‌ ಕೇಸರ್‌ಕರ್‌ ನಟಿಸುತ್ತಿರುವ 333ನೇ “ಗಂಗೆ-ಗೌರಿ’ ಭಕ್ತಿಪ್ರಧಾನ ಸಿನಿಮಾ ಚಿತ್ರೀಕರಣ ಮುಗಿಸಿ ಈಗ ಬಿಡುಗಡೆಯ ಹಂತಕ್ಕೆ ಬಂದಿದೆ.

Advertisement

ಇತ್ತೀಚೆಗೆ ಈ ಚಿತ್ರದ ಟೀಸರ್‌ ಬಿಡುಗಡೆಯಾಗಿದೆ. ಬಿ.ಎ.ಪುರುಷೋತ್ತಮ್‌ ಈ ಚಿತ್ರದ ನಿರ್ದೇಶಕರು. ಗಣೇಶ್‌ ಕೇಸರ್‌ಕರ್‌ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿರುವ ಸಿನಿಮಾ ಇದಾಗಿದ್ದು, ರೂಪಾಲಿ, ನಿಖಿತಾ ಸ್ವಾಮಿ, ಶೋಭರಾಜ್‌, ಎಸ್ಕರ್ಟ್‌ ಶ್ರೀನಿವಾಸ್‌, ಜಯಸಿಂಹ ಮುಸುರಿ ಸೇರಿದಂತೆ ಅನೇಕರು ನಟಿಸುತ್ತಿದ್ದಾರೆ. ಹಾಡುಗಳಿಗೆ ರಾಜ್‌ ಭಾಸ್ಕರ್‌ ಸಂಗೀತ, ಗೌರಿ ವೆಂಕಟೇಶ್‌ ಛಾಯಾಗ್ರಹಣ ಚಿತ್ರಕ್ಕಿದೆ.

ಚಿತ್ರದ ಬಗ್ಗೆ ಮಾತನಾಡುವ ನಿರ್ದೇಶಕ ಪುರುಷೋತ್ತಮ “ಶಿವರಾತ್ರಿ ಹತ್ತಿರ ಬರುತ್ತಿರುವ ಹಿನ್ನೆಲೆಯಲ್ಲಿ ನಮ್ಮ ಸಿನಿಮಾ ಟೀಸರ್‌ ಬಿಡುಗಡೆ ಮಾಡುತ್ತಿದ್ದೇವೆ. ಈಗಾಗಲೇ ಚಿತ್ರೀಕರಣ ಮುಗಿದಿದ್ದು, ಮುಂದಿನ ತಿಂಗಳು ಬಿಡುಗಡೆ ಮಾಡುವ ಯೋಚನೆ ಇದೆ. ಪೌರಾಣಿಕ ಸಿನಿಮಾ ಮಾಡುವಾಗ ಸಾಕಷ್ಟು ಎಚ್ಚರಿಕೆ ವಹಿಸಬೇಕು. ಕಥೆಗೆ ಧಕ್ಕೆಯಾಗದಂತೆ ಹಾಗೂ ಅಂದಿನ ಕಾಲಘಟ್ಟವನ್ನು ಸೃಷ್ಟಿಸಬೇಕು. ಈ ನಿಟ್ಟಿನಲ್ಲಿ ನಮ್ಮ ತಂಡ ಸಾಕಷ್ಟು ಶ್ರಮವಹಿಸಿದೆ. ಗಣೇಶ್‌ ರಾವ್‌ ಕೇಸರ್‌ಕರ್‌ ತುಂಬಾ ಚೆನ್ನಾಗಿ ನಟಿಸಿದ್ದು, ಈ ಚಿತ್ರ ಅವರಿಗೆ ಹೆಸರು ತಂದುಕೊಡಲಿದೆ’ ಎಂದರು.

ಅಂದಹಾಗೆ, ಪುರಷೋತ್ತಮ್‌ ನಿರ್ದೇಶನದ 27ನೇ ಸಿನಿಮಾ ಇದಾಗಿದೆ. 24 ಪೌರಾಣಿಕ ಸಿನಿಮಾಗಳನ್ನು ನಿರ್ದೇಶಿಸಿರುವ ಖ್ಯಾತಿ ಇವರದು. ಇನ್ನು, ಗಣೇಶ್‌ ರಾವ್‌ ಕೂಡಾ ಸಿನಿಮಾದ ಆರಂಭ, ಕಲಾವಿದರ ಆಯ್ಕೆ, ನಿರ್ಮಾಣದಲ್ಲಿ ಸಾಥ್‌ ನೀಡಿದ ಸ್ನೇಹಿತರ ಕುರಿತು ಮಾತನಾಡಿದರು. ಉಳಿದಂತೆ ಸಿನಿಮಾದಲ್ಲಿ ನಟಿಸಿದ ಕಲಾವಿದರು ಸಿನಿಮಾದ ಅನುಭವ ಹಂಚಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next