Advertisement

Tragedy: ಆಟವಾಡುತ್ತಿದ್ದಾಗ ಚರಂಡಿಗೆ ಬಿದ್ದು ಒಂದೂವರೆ ವರ್ಷದ ಹೆಣ್ಣು ಮಗು ಸಾವು

07:36 PM Feb 27, 2024 | Team Udayavani |

ಗಂಗಾವತಿ: ಚರಂಡಿಗೆ ಬಿದ್ದು ಒಂದುವರೆ ವರ್ಷದ ಮಗುವೊಂದು ಸಾವನ್ನಪ್ಪಿದ ಹೃದಯ ವಿದ್ರಾವಕ ಪ್ರಕರಣ ನಗರದ ಎಪಿಎಂಸಿ ಹಮಾಲರ ಕ್ವಾಟ್ರಸ್ ನಲ್ಲಿ ಮಂಗಳವಾರ ಬೆಳ್ಳಿಗ್ಗೆ ಜರುಗಿದೆ.

Advertisement

ಹಮಾಲರ ಕ್ವಾಟ್ರಸ್‌ನ ಪವಿತ್ರ ತಾಯಿ ಅಕ್ಕಮ್ಮ ಎಂಬ ಒಂದುವರೆ ವರ್ಷದ ಹೆಣ್ಣುಮಗು ಮನೆ ಹತ್ತಿರ ಆಟವಾಡುತ್ತಿರುವಾಗ ಚರಂಡಿಗೆ ಬಿದ್ದಿದೆ. ಮಧ್ಯಾಹ್ನ 12 ಗಂಟೆ ಸುಮಾರಿನಲ್ಲಿ ಮಗು ಕಾಣೆಯಾಗಿರುವ ಕುರಿತು ಗಮನಕ್ಕೆ ಬಂದ ತಕ್ಷಣ ಇಡೀ ಕ್ವಾಟ್ರಸ್ ಹುಡಿಕಾಡಿದ್ದಾರೆ. ಚರಂಡಿಗಳಲ್ಲಿ ಹುಡಿಕಿದಾಗ ಮಗುವಿನ ಶವ ಚರಂಡಿಯಲ್ಲಿ ಪತ್ತೆಯಾಗಿದೆ.

ಪ್ರತಿಭಟನೆ: ಚರಂಡಿಯನ್ನು ಹಲವು ದಿನಗಳಿಂದ ಸ್ವಚ್ಛ ಮಾಡದೇ ಇರುವ ಕಾರಣ ಹಮಾಲರ ಕ್ವಾಟ್ರಸ್ ಚರಂಡಿಗಳು ತುಂಬಿದ್ದು ಮಗುವಿನ ಸಾವಿಗೆ ನಗರಸಭೆ ಕಾರಣವಾಗಿದೆ ಎಂದು ಆರೋಪಿಸಿ ಮಗುವಿನ ಕುಟುಂಬದವರು ಹಾಗೂ ಸ್ಥಳೀಯರು ನಗರಸಭೆ ಶವದೊಂದಿಗೆ ಆಗಮಿಸಿ ಪ್ರತಿಭಟನೆ ನಡೆಸಿದರು. ಈ ಮಧ್ಯೆ ಪೌರಾಯುಕ್ತ ವಿರೂಪಾಕ್ಷಮೂರ್ತಿ ಸ್ಥಳಕ್ಕೆ ಆಗಮಿಸಿ ಎಪಿಎಂಸಿ ಹಮಾಲರ ಕ್ವಾಟ್ರಸ್ ಪ್ರದೇಶ ನಗರಸಭೆ ವ್ಯಾಪ್ತಿಗೆ ಬರುವುದಿಲ್ಲ. ಎಪಿಎಂಸಿಯವರೇ ಚರಂಡಿ ಸ್ವಚ್ಛ ಮಾಡಿಸಬೇಕಿತ್ತು ಎಂದು ಎಪಿಎಂಸಿ ಕಾರ್ಯದರ್ಶಿ ಎಚ್.ಪತ್ತಾರ ಅವರನ್ನು ಕರೆಸಿಕೊಂಡು ಸಮಸ್ಯೆ ಬಗ್ಗೆ ತಿಳಿಸಿದರು. ಎಪಿಎಂಸಿ ಹಾಗೂ ನಗರಸಭೆ ಅಧಿಕಾರಿಗಳು ವೈಯಕ್ತಿಕವಾಗಿ 30 ಸಾವಿರ ರೂ.ಗಳ ಪರಿಹಾರ ನೀಡಿದ್ದಾರೆ.

ಇದನ್ನೂ ಓದಿ: ಮಹಿಳೆಯ ಆತ್ಯಾಚಾರ ಪ್ರಕರಣ: ಆರೋಪಿಗಳಿಗೆ 20 ವರ್ಷಗಳ ಕಠಿಣ ಶಿಕ್ಷೆ ವಿಧಿಸಿದ ನ್ಯಾಯಾಲಯ

Advertisement

Udayavani is now on Telegram. Click here to join our channel and stay updated with the latest news.

Next