Advertisement
ಶಾಸಕ ಗಾಲಿ ಜನಾರ್ದನರೆಡ್ಡಿ, ಮಾಜಿ ಸಚಿವ ಇಕ್ಬಾಲ್ ಅನ್ಸಾರಿ, ಮಾಜಿ ಎಂಎಲ್ಸಿ ಎಚ್.ಆರ್.ಶ್ರೀನಾಥ ಮುಸ್ಲಿಂ ಬಾಂಧವರಿಗೆ ಶುಭ ಕೋರಿದರು.
ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ರಂಜಾನ್ ಹಬ್ಬದ ಸಾಮೂಹಿಕ ಪ್ರಾರ್ಥನೆಯ ವೇಳೆ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಅವರು ಮಾಡಿದ ಭಾಷಣವನ್ನು ಚುನಾವಣಾ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿ ಗುರುಪ್ರಸಾದ ನೇತೃತ್ವದ ತಂಡದವರು ವಿಡಿಯೋ ಚಿತ್ರೀಕರಣ ಮಾಡಿದರು.
Related Articles
ಮಾಜಿ ಸಚಿವ, ಕಾಂಗ್ರೆಸ್ ನಾಯಕ ಇಕ್ಬಾಲ್ ಅನ್ಸಾರಿ ಮಾತನಾಡಿ, ಈದ್ಗಾ ಆಡಾಕ್ ಕಮಿಟಿ ಕುರಿತು ನ್ಯಾಯಾಲಯದಲ್ಲಿ ತಡೆಯಾಜ್ಞೆ ತಂದಿರುವ ಸಮಾಜದ ಬದ್ಧ ವೈರಿಗಳು ಸದ್ಯದ ಕಮಿಟಿ ಕಾರ್ಯ ತಡೆಯುವ ಕೃತ್ಯವೆಸಗುತ್ತಿದ್ದು ಸಮಾಜದ ಹಿತ ಮರೆತಿದ್ದಾರೆ. ಮುಸ್ಲಿಂ ಸಮಾಜವನ್ನು ನಮ್ಮ ಸಮಾಜದವರೇ ಒಡೆಯುತ್ತಿದ್ದು ಸಮಾಜದ ಹಿತ ಕಾಪಾಡುವವರು ಯಾರು ಇಲ್ಲ. 2016 ರಲ್ಲಿ ನಗರದಲ್ಲಿ ಜರುಗಿದ ಸಂಘರ್ಷ ಸಣ್ಣ ಮಕ್ಕಳ ಮೇಲೂ ರೌಡಿ ಕೇಸ್ ಹಾಕಲಾಗಿದೆ. ಇದನ್ನೆ ನೆಪಕೊಂಡು ಕಮೀಟಿ ಕುರಿತು ತಡೆಯಾಜ್ಞೆ ತರಲಾಗಿದೆ. ನನ್ನ ಅವಧಿಯಲ್ಲಿ ಈದ್ಗಾ ಮಳಿಗೆಗಳನ್ನು ನಿರ್ಮಿಸಲು ಸಹಕಾರ ನೀಡಿದ್ದೇನೆ. ಸಮಾಜದ ಉದ್ದಾರಕ್ಕೆ ನಾನು ಆಲೋಚನೆ ಮಾಡುತ್ತಿದ್ದು ಕೆಲವರು ಮುಸ್ಲಿಂ ಸಮಾಜವನ್ನು ಒಡೆಯುವ ಕಾರ್ಯ ಮಾಡುತ್ತಿದ್ದಾರೆ. ದೇಶದ ಸದ್ಯ ಸ್ಥಿತಿಯಲ್ಲಿ ಮನೆಗಳು ಸುಡುತ್ತಿದ್ದು ನಾವು ಸುಮ್ಮನೆ ಕುಳಿತು ನಗದೇ ಜವಾಬ್ದಾರಿಯಿಂದ ವರ್ತಿಸಿ ಮುಸ್ಲಿಂ ಸಮಾಜ ಒಗ್ಗೂಡಬೇಕು ಎಂದರು.
Advertisement
ರಾಜಕೀಯ ಭಾಷಣ ಅಗತ್ಯವಿರಲಿಲ್ಲ
ರಂಜಾನ್ ಹಬ್ಬ ಅತ್ಯಂತ ಪವಿತ್ರವಾದದ್ದು ಈ ಸಂದರ್ಭದಲ್ಲಿ ಶುಭಾಶಯವನ್ನು ಮಾತ್ರ ಕೋರಬೇಕು.ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಲೋಕಸಭಾ ಚುನಾವಣ ನೀತಿ ಸಂಹಿತೆ ಇರುವುದನ್ನು ಲೆಕ್ಕಿಸದೇ ಚುನಾವಣ ಭಾಷಣದಂತೆ ದೇಶದ ಸದ್ಯದ ಸ್ಥಿತಿ ಹಾಗೂ ರಾಜಕೀಯ ಧರ್ಮದ ಕುರಿತು ಭಾಷಣ ಮಾಡುವುದು ಅಗತ್ಯವಿರಲಿಲ್ಲ. ಸ್ಥಳದಲ್ಲಿದ್ದ ಚುನಾವಣ ವೀಕ್ಷಕ ತಂಡದ ಅಧಿಕಾರಿಗಳು ಸಹ ಈ ಕುರಿತು ಆಕ್ಷೇಪವೆತ್ತಿಲ್ಲ. ಚುನಾವಣ ನೀತಿ ಸಂಹಿತೆ ಉಲ್ಲಂಘನೆ ಕುರಿತು ರಾಜ್ಯ ಚುನಾವಣಾ ಆಯೋಗಕ್ಕೆ ದೂರು ನೀಡಲಾಗುತ್ತದೆ. ಈದ್ಗಾ ಕಮಿಟಿ ಹಾಗೂ ವಕ್ಫ್ ಇಲಾಖೆಯವರು ಪ್ರೋಟೋಕಾಲ್ ಉಲ್ಲಂಘಿಸಿ ಮಾಜಿ ಸಚಿವರಿಗೆ ಭಾಷಣ ಮಾಡಲು ಅವಕಾಶ ನೀಡಿದ್ದಾರೆ. ತಾವು ಸ್ಥಳಕ್ಕೆ ಭೇಟಿ ನೀಡಿದ್ದೂ ಸೌಜನ್ಯಕ್ಕೂ ತಮಗೆ ಶುಭ ಕೋರಲು ಅವಕಾಶ ನೀಡಲಿಲ್ಲ. ಈ ಕುರಿತು ಸಂಬಂಧಪಟ್ಟವರಿಗೆ ಪತ್ರ ಬರೆದು ಕ್ರಮ ಜರುಗಿಸಲಾಗುತ್ತದೆ. ಸ್ಪೀಕರ್ ಗೂ ಲೆಟರ್ ಕೊಡಲಾಗುತ್ತದೆ ಎಂದು ಶಾಸಕ ಗಾಲಿ ಜನಾರ್ದನರೆಡ್ಡಿ ಹೇಳಿದ್ದಾರೆ.