Advertisement
ಅವರು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮಾಜಿ ಸಚಿವ ಗಾಲಿ ಜನಾರ್ದನರೆಡ್ಡಿ ಗಂಗಾವತಿ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವ ಉದ್ದೇಶದಿಂದ ಇಲ್ಲಿ ಮನೆ ಮಾಡಿ ನೂತನ ಪ್ರಾದೇಶಿಕ ಪಕ್ಷ ಸ್ಥಾಪಿಸಿ ರಾಜ್ಯದ ಗಮನ ಸೆಳೆದಿದ್ದಾರೆ. ಆದರೆ ಸ್ಥಳೀಯವಾಗಿ ಕಳೆದ 40 ವರ್ಷಗಳಿಂದ ಗಂಗಾವತಿ ಜನತೆಯ ಕಷ್ಟ ಸುಖಗಳಿಗೆ ತಾವು ನೆರವಾಗಿದ್ದು ನನ್ನ ಕಷ್ಟಸುಖಗಳಿಗೆ ಜನರು ಸಹ ಆಶ್ರಯವಾಗಿದ್ದಾರೆ. ಎಲ್ಲಿಂದಲೋ ಬಂದು ಕೋಟಿಗಟ್ಟಲೇ ಬಣ್ಣದ ಮಾತನಾಡುವವರಿಗೆ ಜನರ ಆಶೀರ್ವಾದ ಸಿಗಲು ಹೇಗೆ ಸಾಧ್ಯ. ವಿಶ್ವ ನಾಯಕ ಪ್ರಧಾನಿ ಮೋದಿ ಹಾಗೂ ಗೃಹ ಸಚಿವಅಮಿತ್ ಷಾ ಅವರು ಗಂಗಾವತಿ ಕ್ಷೇತ್ರವನ್ನು ವಿಶೇಷವಾಗಿ ಪರಿಗಣಸಿದ್ದು ಇಲ್ಲಿರುವ ಐತಿಹಾಸಿಕ ಕಿಷ್ಕಿಂದಾ ಕ್ಷೇತ್ರವನ್ನು ವಿಶ್ವದ ಪವಿತ್ರ ಕ್ಷೇತ್ರಗಳಲ್ಲಿ ಗುರುತಿಸುವಂತೆ ಅಭಿವೃದ್ಧಿ ಪಡಿಸುವ ನೀಲನಕ್ಷೆ ಸಿದ್ಧವಾಗಿದೆ. ತಾವು ಶಾಸಕರಾದ ಎರಡು ಅವಧಿಯಲ್ಲಿ ಇಡೀ ಕ್ಷೇತ್ರ ಸಮಗ್ರ ಶಿಕ್ಷಣ, ಆರೋಗ್ಯ. ಕೃಷಿ, ರಸ್ತೆ ಸೇರಿ ಮೂಲಸೌಕರ್ಯಗಳಿಗೆ ಸಾವಿರಾರು ಕೋಟಿ ಅನುದಾನ ತಂದು ಅಭಿವೃದ್ಧಿ ಮಾಡಿದ್ದು ಇದಕ್ಕೆ ಪರಿಹಾರವಾಗಿ ಚುನಾವಣೆಯಲ್ಲಿ ತಮಗೆ ಮತ ನೀಡುವಂತೆ ಕೂಲಿ ಕೇಳಲಿದ್ದು ಎಲ್ಲಿಂದಲೋ ಬಂದು ಬಣ್ಣದ ಮಾತಾಡಿ ಕೋಟಿಗಟ್ಟಲೇ ಹಣ ನೀಡುವ ಭರವಸೆ ನೀಡುವವರನ್ನು ಜನರು ಹೇಗೆ ಸ್ವಾಗತ ಮಾಡಲು ಸಾಧ್ಯ. ತಾವು ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯ ನೆಪದಲ್ಲಿ ಕ್ಷೇತ್ರದ ಜನರನ್ನು ಭೇಟಿಯಾದ ಸಂದರ್ಭದಲ್ಲಿ ಪ್ರತಿಯೊಬ್ಬರೂ ನಾವೆಲ್ಲ ನಿಮ್ಮೊಂದಿಗಿದ್ದೇವೆ ಧೈರ್ಯದಿಂದ ಚುನಾವಣೆ ಎದುರಿಸುವಂತೆ ಅಭಯ ನೀಡುತ್ತಿದ್ದಾರೆ. ಬಿಜೆಪಿಯಲ್ಲಿ ಗಟ್ಟಿ ಮುಖಂಡರು ಕಾರ್ಯಕರ್ತರಿದ್ದು ಜೊಳ್ಳು ಗಾಳಿಗೆ ತೂರಿ ಹೋಗಿದೆ ಎಂದು ಹೇಳಿದರು.