Advertisement
ಮುಂಗಾರು ಸುಗ್ಗಿ ಬೆಳೆಗೆ ಸೂಕ್ತ ಬೆಲೆ ಸಿಗದೇ ಬಹುತೇಕ ರೈತರು ಇನ್ನೂ ಭತ್ತವನ್ನು ಮಾರಾಟ ಮಾಡದೇ ಸಂಗ್ರಹ ಮಾಡಿದ್ದಾರೆ. ಬೇಸಿಗೆ ಹಂಗಾಮಿನಲ್ಲಿ ಅಚ್ಚುಕಟ್ಟು ಪ್ರದೇಶದ ರೈತರು 90-120 ದಿನಗಳಲ್ಲಿ ಕಟಾವಿಗೆ ಬರುವ ಭತ್ತವನ್ನು ನಾಟಿ ಮಾಡುತ್ತಾರೆ. ನಾಟಿ ಮಾಡಿದ 25 ದಿನಗಳು ಪೂರ್ಣಗೊಳ್ಳುವ ಮುನ್ನವೇ ಬಹುತೇಕ ಭತ್ತದ ಬೆಳೆ ತೆನೆ ಬಿಚ್ಚುವ ಮೂಲಕ ರೈತರನ್ನು ಆತಂಕಕ್ಕೀಡು ಮಾಡಿದೆ.
Related Articles
Advertisement
ಬೇಸಿಗೆ ಭತ್ತದ ಬೆಳೆ ನಾಟಿ ಮಾಡಿದ 25 ದಿನಗಳಲ್ಲಿ ತೆನೆ ಬಿಚ್ಚಿದ್ದು, ಇದರಿಂದ ರೈತರು ಕಂಗಾಲಾಗಿದ್ದಾರೆ. ಹವಾಮಾನ ವೈಪರಿತ್ಯ ಅಥವಾ ನಕಲಿ ಬೀಜ ಎಂಬ ಕಾರಣ ತಿಳಿಯದಾಗಿದೆ. ಕೂಡಲೇ ಕೃಷಿ ಇಲಾಖೆಯ ಕೃಷಿ ವಿವಿ ಮತ್ತು ಕೃಷಿ ವಿಜ್ಞಾನ ಕೇಂದ್ರದ ಅಧಿಕಾರಿಗಳು ಮತ್ತು ವಿಜ್ಞಾನಿಗಳು ಬೇಗನೆ ತೆನೆ ಬಿಚ್ಚಿದ ಕುರಿತು ಸಂಶೋಧನೆ ನಡೆಸಿ ಪರಿಹಾರ ಕಲ್ಪಿಸಬೇಕಾಗಿದೆ.ವಿ. ಪ್ರಸಾದ,
ರೈತ ಕಲ್ಗುಡಿ ಗ್ರಾಮ ರಾಯಚೂರು, ಕೊಪ್ಪಳ, ಬಳ್ಳಾರಿ ಜಿಲ್ಲೆಯಲ್ಲಿ ರಾತ್ರಿ ಚಳಿ ಕಡಿಮೆಯಾಗಿ ಉಷ್ಣಾಂಶ ಹೆಚ್ಚಾಗಿರುವುದರಿಂದ ಭತ್ತದ ಬೆಳೆ ಬೇಗ ತೆನೆ ಬಿಚ್ಚಿದೆ. ಹತ್ತು ವರ್ಷಗಳ ಹಿಂದೆ ಇಂತಹ ಪರಿಸ್ಥಿತಿಯುಂಟಾಗಿತ್ತು. ಈಗ ಪುನಃ ಇಂತಹ ಸ್ಥಿತಿಯುಂಟಾಗಿದೆ. ರಾತ್ರಿ-ಹಗಲಿನ ಅವ ಧಿಯಲ್ಲಿ 10-15 ನಿಮಿಷಗಳ ವ್ಯತ್ಯಾಸ ಹಾಗೂ ಫೆಬ್ರವರಿ ಮೊದಲ ವಾರ ಇಬ್ಬನ್ನಿ ಬಿದ್ದ ಪರಿಣಾಮ ಬೇಗನೆ ತೆನೆ ಬಿಚ್ಚಲು ಕಾರಣವಾಗಿದೆ. ರಾತ್ರಿ ವೇಳೆ 18 ಡಿಗ್ರಿ ಉಷ್ಣಾಂಶ ಹಗಲಿನಲ್ಲಿ 36 ಡಿಗ್ರಿ ಉಷ್ಣಾಂಶ ಇದ್ದ ಪರಿಣಾಮ ಬೇಗನೆ ತೆನೆ ಬಂದಿದೆ. ಭತ್ತದ ಇಳುವರಿ ಕಡಿಮೆ ಬರುವ ಸಾಧ್ಯತೆ ಇದೆ.
ಡಾ| ಮಹಾಂತ ಶಿವಯೋಗಿ,
ತಳಿ(ಭತ್ತ) ಕೃಷಿ ಸಂಶೋಧನಾ ಕೇಂದ್ರ ಕೆ. ನಿಂಗಜ್ಜ