ಗಂಗಾವತಿ: ರಾಜ್ಯದ ಅತ್ಯಂತ ಹಿಂದುಳಿದ ಪ್ರವರ್ಗ-1 ರಲ್ಲಿ ಬರುವ ಜಾತಿಗಳ ಜನರಿಗೆ ಎಲ್ಲಾ ಸರಕಾರಗಳು ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಮತ್ತು ರಾಜಕೀಯ ಪ್ರಾತಿನಿಧ್ಯ ನೀಡುವಲ್ಲಿ ಅನ್ಯಾಯ ಮಾಡಿವೆ. ಈ ಹಿಂದೆ ಪ್ರವರ್ಗ-1ರಲ್ಲಿ ಬರುವ ಜಾತಿಗಳಿಗೆ ಎಸ್ಸಿ, ಎಸ್ಟಿ ಸಮುದಾಯಗಳಷ್ಟೆ ಮಹತ್ವ ನೀಡಲಾಗುತ್ತಿತ್ತು. 2008 ರಿಂದ ಸಾಮಾನ್ಯ ವರ್ಗಗಳ ವಿದ್ಯಾರ್ಥಿಗಳಂತೆ ಶಾಲಾಕಾಲೇಜು ಪೀಜು ಪಾವತಿಸಬೇಕಿದ್ದು ಪ್ರವರ್ಗ-1ರ ಈಗಿರುವ ಶೇ.4 ಮೀಸಲಾತಿಯಿಂದ ಶೇ.12ಕ್ಕೆ ಹೆಚ್ಚಳ ಮಾಡುವಂತೆ ಕರ್ನಾಟಕ ರಾಜ್ಯ ಪ್ರವರ್ಗ-1 ಜಾತಿಗಳ ಒಕ್ಕೂಟದ ಕೊಪ್ಪಳ ಜಿಲ್ಲಾಧ್ಯಕ್ಷ ಧನರಾಜ್ ಒತ್ತಾಯಿಸಿದರು.
ಅವರು ನಗರದ ಶ್ರೀಕೃಷ್ಣ ಹೊಟೇಲ್ ನಲ್ಲಿ ಒಕ್ಕೂಟದ ವತಿಯಿಂದ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,. ಪ್ರವರ್ಗ-1 ರಲ್ಲಿ 91 ಜಾತಿ 302 ಉಪಜಾತಿಗಳಿದ್ದು ಶೇ.4 ಮೀಲಾಸತಿಯಿಂದ ಈ ಸಮುದಾಯಗಳ ಮಕ್ಕಳು ಸಾಮಾಜಿಕ, ಶೈಕ್ಷಣಿಕವಾಗಿ ಮುಂದುವರಿಲು ಆಗುತ್ತಿಲ್ಲ.
ರಾಜಕೀಯವಾಗಿ ಈ ಸಮುದಾಯಗಳ ಉಪಜಾತಿಗಳ 152 ಸಣ್ಣಪುಟ್ಟ ಜಾತಿಯವರಿಗೆ ಅವಕಾಶಗಳು ಇದುವರೆಗೂ ಲಭಿಸಿಲ್ಲ. ಪ್ರವರ್ಗ-1 ರ ಜಾತಿಗಳ ವಿವಿಧ ನಿಗಮಗಳಿಗೆ ಸರಕಾರಗಳು ಅತೀ ಕಡಿಮೆ ಅನುದಾನ ಬಿಡುಗಡೆ ಮಾಡುತ್ತಿದ್ದು ಪ್ರತಿ ವರ್ಷ ಪ್ರತಿ ನಿಗಮಕ್ಕೂ ಸಾವಿರ ಕೋಟಿ ರೂ.ಗಳನ್ನು ಮೀಸಲಿಡಬೇಕು. ಎಲ್ಲಾ ರಾಜಜಕೀಯ ಪಕ್ಷಗಳು ಕನಿಷ್ಠ 50 ಸ್ಥಾನಗಳಲ್ಲಿ ಗೆಲ್ಲುವಂತಾಗಲು ಪಕ್ಷಗಳ ಟಿಕೇಟ್ ನೀಡಬೇಕು. ಮುಂಬರುವ ಜಿ.ಪಂ.ತಾ.ಪಂ. ಚುನಾವಣೆಯಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರಕ್ಕೊಂದರಂತೆ ಜಿ.ಪಂ. ಹಾಗೂ ಜನಸಂಖ್ಯೆಗೆ ಅನುಗುಣವಾಗಿ ತಾ.ಪಂ. ಮೀಸಲಾತಿ ಕಲ್ಪಿಸುವಂತೆ ಮನವಿ ಮಾಡಲಾಗಿದೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಪ್ರವರ್ಗ -1 ರಲ್ಲಿ ಬರುವ ಜಾತಿಗಳ ಸರ್ವೇ ಕಾರ್ಯ ಒಕ್ಕೂಟ ಮಾಡಿದ್ದು ನಮ್ಮ ಸಮುದಾಯಗಳಿಗೆ ಯೋಜನೆಗಳನ್ನು ಪ್ರಣಾಳಿಕೆಯಲ್ಲಿ ಘೋಷಿಸುವ ರಾಜಕೀಯ ಪಕ್ಷಗಳನ್ನು ಬೆಂಬಲಿಸಲಾಗುತ್ತದೆ.115 ಕ್ಷೇತ್ರಗಳಲ್ಲಿ ಪ್ರವರ್ಗ-1 ರಲ್ಲಿರುವ ಜಾತಿ ಮತದಾರರು ನಿರ್ಣಯಕವಾಗಿವೆ. ಪ್ರವರ್ಗ-1 ರಲ್ಲಿ ಬರುವ ಶಾಲಾಕಾಲೇಜು ಮಕ್ಕಳಿಗೆ ಪ್ರತೇಕ ಹಾಸ್ಟೆಲ್ ಪ್ರತಿ ತಾಲೂಕು ಜಿಲ್ಲಾ ಕೇಂದ್ರಗಳಲ್ಲಿ ಮುಂದಿನ ಶೈಕ್ಷಣಿಕ ವರ್ಷ ಆರಂಭಕ್ಕೂ ಮೊದಲು ಸ್ಥಾಪಿಸಲು ಈ ಭಾರಿಯ ಬಜೆಟ್ ನಲ್ಲಿ ಯೋಜನೆ ಘೋಷಣೆ ಮಾಡಬೇಕು. ಪ್ರವರ್ಗ -1 ರಲ್ಲಿರುವ ಹಲವು ಜಾತಿಗಳು ಬುಡಕಟ್ಟು ಆದಿ ಸಂಸ್ಕೃತಿ ಆಚಾರ ವಿಚಾರಗಳನ್ನು ಹೊಂದಿದ್ದು ಇವುಗಳನ್ನು ಎಸ್ಸಿ, ಎಸ್ಟಿ ವರ್ಗಗಳಿಗೆ ಸೇರಿಸಲು ಬೇಡಿಕೆ ಇದ್ದು ರಾಜ್ಯ ಹಾಗೂ ಕೇಂದ್ರ ಸರಕಾರ ಕೂಡಲೇ ಕ್ರಮ ಕೈಗೊಂಡು ಬೇಡಿಕೆ ಈಡೇರಿಸಬೇಕು. 32 ಅಲೆಮಾರಿ ಜನಾಂಗದ ಜಾತಿಗಳು ಈಗಲೂ ಸಾಮಾಜಿಕ, ಶೈಕ್ಷಣಿಕ, ಮತ್ತು ರಾಜಕೀಯ ಪ್ರಾತಿನಿಧ್ಯವಿಲ್ಲದೇ ಇರುವ ಕಾರಣ ಈ ಎಲ್ಲಾ ಜಾತಿಗಳಿಗೆ ಅವರ ಬೇಡಿಕೆಯಂತೆ ಎಸ್ಸಿ ಎಸ್ಟಿ ಮೀಸಲಾತಿ ಕಲ್ಪಿಸುವಂತೆ ಧನರಾಜ್ ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಮಹೇಶ ಸಾಗರ, ಅಮರಜ್ಯೋತಿ ನರಸಪ್ಪ, ಪ್ರಣಾವಾನಂದ, ರ‍್ಹಾಳ ಮುದ್ದಪ್ಪ ಸೇರಿ ಹಲವರಿದ್ದರು. ಇದೇ ಸಂದರ್ಭದಲ್ಲಿ ಪ್ರವರ್ಗ-1 ಜಾತಿಗಳ ಒಕ್ಕೂಟದ ತಾಲೂಕು ಘಟಕದ ನೂತನ ಅಧ್ಯಕ್ಷರನ್ನಾಗಿ ಪ್ರಣಾವಾನಂದ ಕಾರ್ಯದರ್ಶಿಯಾಗಿ ಪತ್ರಕರ್ತ ವೆಂಕಟೇಶ ಹೊಸಳ್ಳಿ ಇವರನ್ನು ಆಯ್ಕೆಯನ್ನು ಘೋಷಣೆ ಮಾಡಲಾಯಿತು.