Advertisement

ಗಂಗಾವತಿ : ಪ್ರಾಣಿಗಳನ್ನು ಹಿಂಸಿಸದಂತೆ ಬೆಳ್ಳಂಬೆಳಗ್ಗೆ ಬೀದಿಗಿಳಿದ ಪ್ರಾಣಿಪ್ರಿಯರು

09:05 AM Sep 04, 2022 | Team Udayavani |

ಗಂಗಾವತಿ : ಪ್ರಾಣಿಗಳನ್ನು ಹಿಂಸಿಸಬೇಡಿ ಪ್ರಾಣಿಗಳ ಬಗ್ಗೆ ದಯೆ ಇರಲಿ, ಮಾಂಸ ಆಹಾರವನ್ನು ತ್ಯಾಗ ಮಾಡಿ ಸಾತ್ವಿಕ ಆಹಾರ ಸೇವಿಸುವ ಘೋಷಣೆಗಳೊಂದಿಗೆ ಪ್ರಾಣಿಪ್ರೀಯರು ಬೆಳ್ಳಂ ಬೆಳಿಗ್ಗೆಯೇ ಬೀದಿಗಿಳಿದು ಜನಜಾಗೃತಿ ಮೂಡಿಸುವ ಕಾರ್ಯಕ್ರಮ ನಗರದ ಮಳೆ ಮಲ್ಲೇಶ್ವರ(ಪಂಪಾನಗರ) ವೃತ್ತದ ಬಳಿ ಜರಗಿತು.

Advertisement

ಈ ಸಂದರ್ಭದಲ್ಲಿ ಜನಜಾಗೃತಿ ಸಂಘಟಕರಾದ ಲಲಿತಾ ನಾರಾಯಣ ಕಂದಗಲ್ ಮಾತನಾಡಿ ಮನುಷ್ಯ ಜನಿಸಿದಾಗ ಸಾತ್ವಿಕ ಆಹಾರದ ಮೇಲೆ ಅವಲಂಬನೆಯಾಗಿದೆ ನಂತರದ ದಿನಗಳಲ್ಲಿ ಮಾಂಸಾಹಾರ ಸೇವಿಸುವ ಪದ್ಧತಿ ರೂಢಿಸಿಕೊಂಡಿದ್ದಾರೆ .ಇದರಿಂದ ಪ್ರಾಣಿ ಹಿಂಸೆಯಾಗುತ್ತದೆ ಮಹಾತ್ಮಾಗಾಂಧಿ, ಮಹಾವೀರ, ಅಬ್ದುಲ್ ಕಲಾಂ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ವಿಶ್ವದ ಮಹಾನ್ ವ್ಯಕ್ತಿಗಳು ಸಾತ್ವಿಕವಾದ ಆಹಾರವನ್ನು ಸೇವಿಸುವ ರಾಯಭಾರಿಗಳಾಗಿದ್ದಾರೆ ಆದ್ದರಿಂದ ಪ್ರತಿಯೊಬ್ಬರೂ ಪ್ರಾಣಿ ಹಿಂಸೆ ಮಾಡದೆ ಸಸ್ಯಹಾರದ ಮೇಲೆ ಅವಲಂಬನೆ ಹಾಕಬೇಕು .ಸಾತ್ವಿಕ ಆಹಾರದಿಂದ ಮನುಷ್ಯನ ದೇಹವು ಪ್ರತಿಕ್ಷಣವೂ ಜಾಗೃತವಾಗಿದೆ.ಪಿರಾಮಿಡ್ ಹಾಗೂ ಎಲ್ಲಾ ಧ್ಯಾನಾಸಕ್ತ ಸಂಸ್ಥೆಗಳ ಸದಸ್ಯರು ಪ್ರತಿ ಭಾನುವಾರ ಸಸ್ಯಾಹಾರದ ಬಗ್ಗೆ ಜನಜಾಗೃತಿ ಮೂಡಿಸುವ ಮೆರವಣಿಗೆಯನ್ನು ನಗರದ ಪ್ರತಿ ವಾರ್ಡ್ ಗಳಲ್ಲಿ ಆಯೋಜನೆ ಮಾಡಲಾಗುತ್ತಿದೆ. ಮಾಂಸಾಹಾರದ ದುಷ್ಪರಿಣಾಮಗಳ ಬಗ್ಗೆ ಜನರಿಗೆ ಮನವರಿಕೆ ಮಾಡುವ ಸಣ್ಣ ಪ್ರಯತ್ನವಾಗಿದೆ. ಪ್ರತಿಯೊಬ್ಬರು ಮಾಂಸವನ್ನು ತ್ಯಾಗಮಾಡಿ ಸಸ್ಯಾಹಾರಿಗಳಾಗಬೇಕು ಎಂದರು.

ಈ ಸಂದರ್ಭದಲ್ಲಿ ನಾಗರಾಜ್ ಖಾದಿ, ಲಲಿತಾ ನಾರಾಯಣ್ ಕಂದಗಲ್, ಲಲಿತಾ ನಾರಾಯಣ ವಗ್ಗಾ, ರಾಜಗೋಪಾಲ ಗುರುಮೂರ್ತಿ, ಚಂದ್ರಪ್ಪ ಸೇರಿ ಅನೇಕರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next