ಗಂಗಾವತಿ: ಮಹಿಳೆ ಹುಟ್ಟು ಸಾವಿನ ಮಧ್ಯೆ ಹೋರಾಟ ಮಾಡಿ ಇನ್ನೊಂದು ಜೀವಕ್ಕೆ ಜೀವ ಕೊಡುತ್ತಾಳೆ. ಆದ್ದರಿಂದ ಮಹಿಳೆಯರಿಗೆ ಸಮಾಜದಲ್ಲಿ ಗೌರವದ ಸ್ಥಾನ ನೀಡುವ ಮೂಲಕ ಅವಳ ಋಣ ತೀರಿಸುವ ಕಾರ್ಯ ಮಾಡುವಂತೆ ಶಾಸಕ ಪರಣ್ಣ ಮುನವಳ್ಳಿ ಹೇಳಿದರು.
ಅವರು ಶನಿವಾರ ನಗರದ ಸರಕಾರಿ ಆಸ್ಪತ್ರೆಯ ಸಭಾಂಗಣದಲ್ಲಿ ಮಗುವಿಗೆ ಎಚ್‌ಐವಿ ರೋಗ ಹರಡದಂತೆ ಮುನ್ನೆಚ್ಚರಿಕೆಯ ಚಿಕಿತ್ಸಾಂದೋಲದಲ್ಲಿ ಗರ್ಭಿಣೀಯರಿಗೆ ಸೀಮಂತ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಭಾರತೀಯ ಸಂಸ್ಕೃತಿಯಲ್ಲಿ ಮಾತೃದೇವೋ ಭವ ಎಂಬ ನುಡಿ ತಾಯಿ ಅಥವಾ ಮಹಿಳೆಗೆ ಸದಾ ವಂದಿಸು ಗೌರವಿಸು ಎಂದರ್ಥವಾಗುತ್ತದೆ. ಮಹಿಳೆ ಗರ್ಭಿಣಿಯಾದ ಸಂದರ್ಭದಲ್ಲಿ ಹೊಟ್ಟೆಯಲ್ಲಿರುವ ಶಿಶುವಿಗೆ ಎಚ್‌ಐವಿ ರೋಗ ಬರದಂತೆ ಪ್ರಸ್ತುತ ಚಿಕಿತ್ಸೆ ಲಭ್ಯವಿದ್ದು ಮಹಿಳೆಯರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಸೀಮಂತ ಕಾರ್ಯ ನೆಪದಲ್ಲಿ ಜಾಗೃತಿ ಮೂಡಿಸುವ ಆರೋಗ್ಯ ಇಲಾಖೆಯ ಕ್ರಮ ಶ್ಲಾಘನೀಯವಾಗಿದೆ ಎಂದರು.
ವೈಧ್ಯಾಧಿಕಾರಿ ಡಾ|ಈಶ್ವರ ಸವಡಿ ಮಾತನಾಡಿ, ಗರ್ಭಿಣಿಯರ ಆರೈಕೆ ಮತ್ತು ಸುಸೂತ್ರ ಹೆರಿಗೆಗೆಯಿಂದ ಗಂಗಾವತಿ ಸರಕಾರಿ ಆಸ್ಪತ್ರೆ ರಾಜ್ಯ ರಾಷ್ಟçದಲ್ಲಿ ಹೆಸರಾಗಿದ್ದು ಎಲ್ಲರ ಸಹಕಾರದಿಂದ ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮಕ್ಕೆ ಆರೋಗ್ಯ ಇಲಾಖೆಯ ಅಧಿಕಾರಿಗಳು, ಐಎಂಎ, ಮೈತ್ರಿ ಮಹಿಳಾ ಸಂಘ, ಜಯಟೆಕ್ಸಟೈಲ್ ಅಂಗಡಿಯವರು ಸಹಕಾರ ನೀಡಿದ್ದಾರೆಂದರು.
ಕಾರ್ಯಕ್ರಮದಲ್ಲಿ ಕಾಡಾ ಅಧ್ಯಕ್ಷ ತಿಪ್ಪೇರುದ್ರಸ್ವಾಮಿ, ನಗರಯೋಜನಾ ಪ್ರಾಧಿಕಾರದ ಅಧ್ಯಕ್ಷ ಮಹಾಲಿಂಗಪ್ಪ[ ಬನ್ನಿಕೊಪ್ಪ, ಡಾ|ರಾಘವೇಂದ್ರ, ಡಾ|ಸತೀಶ ರಾಯಕರ್, ಡಾ|ಗೌರಿಶಂಕರ, ಡಾ|ರಂಜಿನಿಪ್ರಭಾ ಸೇರಿ ನಗರಸಭೆ ಸದಸ್ಯರಿದ್ದರು.