ಗಂಗಾವತಿ: ಕೇಂದ್ರ ಹಾಗೂ ರಾಜ್ಯ ಸರಕಾರ ವಿವಿಧ ಹುದ್ದೆಗಳಿಗೆ ನೇಮಕಾತಿ ಪರೀಕ್ಷೆಯಲ್ಲಿ ವೆಬ್ ಕಾಸ್ಟಿಂಗ್ ಪದ್ಧತಿ ಜಾರಿಗೆ ತರುವ ಮೂಲಕ ನೇಮಕಾತಿಯನ್ನು ಪಾರದರ್ಶಕವಾಗಿಸುವಂತೆ ಸರ್ವಾಂಗೀಣ ಅಭಿವೃದ್ಧಿ ಹೋರಾಟ ಸಮಿತಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ ತಹಶೀಲ್ದಾರ್ ಮೂಲಕ ಪ್ರಧಾನಮಂತ್ರಿ ಹಾಗೂ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
Advertisement
ಜಿಲ್ಲಾಧ್ಯಕ್ಷ ಬಸವರಾಜ ಮ್ಯಾಗಳಮನಿ ಮಾತನಾಡಿ, ಕೆಪಿಎಸ್ಸಿ, ಯುಪಿಎಸ್ಸಿ, ರೈಲ್ವೇ, ಬ್ಯಾಂಕಿಂಗ್ ಸೇರಿ ಕೇಂದ್ರ ಹಾಗೂ ರಾಜ್ಯಸರಕಾರದ ನೇಮಕಾತಿ ಮಾಡುವ ಸಂದರ್ಭದಲ್ಲಿ ನಡೆದ ಪರೀಕ್ಷೆಯಲ್ಲಿ ಅಕ್ರಮ ನಿರಂತರವಾಗಿ ನಡೆದಿದ್ದು, ಸರಕಾರ ವೆಬ್ ಕಾಸ್ಟಿಂಗ್ ಮೂಲಕ ಪರೀಕ್ಷೆ ನಡೆದರೆ ಪಾರದರ್ಶಕ ಸಾಧ್ಯವಾಗುತ್ತದೆ.
ತಪ್ಪಿಸಿ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಾಗೂ ಬಡ ವಿದ್ಯಾರ್ಥಿಗಳಿಗೆ ನೇಮಕಾತಿಯಲ್ಲಿ ನ್ಯಾಯ ದೊರಕಿಸಿ ಕೊಟ್ಟಂತಾಗುತ್ತದೆ. ಆದ್ದರಿಂದ ಈ ಪದ್ಧತಿಯನ್ನು ಮುಂಬರುವ ಪರೀಕ್ಷೆಗಳಲ್ಲಿ ಅಳವಡಿಸುವುದರ ಮೂಲಕ ಈ ಪದ್ಧತಿ ಜಾರಿಗೆ ತರಬೇಕೆಂದು ಮ್ಯಾಗಳಮನಿ ಮನವಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಜಡಿಯಪ್ಪ ಹಂಚಿನಾಳ, ಕೃಷ್ಣ ಮೆಟ್ರಿ ಚಂದ್ರು ನಿಸರ್ಗ, ಪಂಪಾಪತಿ ಕುರಿ, ಮಂಜು ಗುಡಿ ಗೌಡ್ರ, ಮುತ್ತು ಹೊಸಳ್ಳಿ, ಹುಲಗಪ್ಪ ಕೊಜ್ಜಿ, ಪರಮೇಶ್ ಗಾಂಧಿ ನಗರ, ನರಸಪ್ಪ ಭಟ್, ಬಸವರಾಜ ಗಾಂಧಿ ನಗರ, ಚಿದಾನಂದ, ರಾಘು ಕಡೆಬಾಗಿಲು, ರಾಮಣ್ಣ ರುದ್ರಾಕ್ಷಿ ಮತ್ತಿತರರು ಇದ್ದರು.