Advertisement

ರಾಮ ಇಲ್ಲ, ಹನುಮಂತ ಇಲ್ಲ ಎಂಬ ಸ್ಟೇಟಸ್ :ಕೋಮು ಘರ್ಷಣೆ,ಇಬ್ಬರಿಗೆ ಚೂರಿ ಇರಿತ,10 ಜನರಿಗೆ ಗಾಯ

03:41 PM Jan 03, 2022 | Team Udayavani |

ಗಂಗಾವತಿ : ರಾಮ ಇಲ್ಲ, ಹನುಮಂತ ಇಲ್ಲ ಎಂದು ಅನ್ಯಕೋಮಿನ ಯುವಕ ಸೋಷಿಯಲ್ ಮೀಡಿಯಾದಲ್ಲಿ ಸ್ಟೇಟಸ್ ಹಾಕಿದ್ದರಿಂದ ಎರಡು ಕೋಮುಗಳ ನಡುವೆ ಸಂಘರ್ಷ ಉಂಟಾಗಿ ಇಬ್ಬರಿಗೆ ಚೂರಿ ಇರಿತವಾಗಿ ಹತ್ತು ಜನರು ಗಾಯಗೊಂಡ ಘಟನೆ ನಾಗೇನಹಳ್ಳಿಯ ಚಿಕ್ಕಜಂತಕಲ್ ನಲ್ಲಿ ಸೋಮವಾರ ಬೆಳಿಗ್ಗೆ ನಡೆದಿದೆ.

Advertisement

ನಾಗೇನಹಳ್ಳಿ ಗ್ರಾಮದ ನೂರ್ ಅಹ್ಮದ್ ಎಂಬ ಯುವಕ ತನ್ನ ವಾಟ್ಸ್ ಅಪ್ ಫೇಸ್ ಬುಕ್ ಸೋಷಿಯಲ್ ಮೀಡಿಯಾದಲ್ಲಿ ರಾಮ ಇಲ್ಲ ಹನುಮಂತನಿಲ್ಲ, ಇರುವ ಗುಡಿಗಳನ್ನು ಕಿತ್ತು ಬಿಡಬೇಕು ಎಂದು ಸ್ಟೇಟಸ್ ಹಾಕಿದ್ದಾನೆ. ಇದನ್ನು ಪ್ರಶ್ನಿಸಿದ ಇನ್ನೊಂದು ಕೋಮಿನ ಯುವಕರ ಮಧ್ಯೆ ವಾಗ್ವಾದ ಉಂಟಾಗಿದೆ. ಗ್ರಾಮದ 2 ಕೋಮಿನ ನಡುವೆ ಪರಸ್ಪರ ಹೊಡಿಬಡಿ ನಡೆದು ಇಬ್ಬರು ಯುವಕರಿಗೆ ಚೂರಿ ಇರಿತವಾಗಿ ಹತ್ತಕ್ಕೂ ಹೆಚ್ಚು ಜನರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಗಂಗಾವತಿಯ ಸರಕಾರಿ ಉಪವಿಭಾಗೀಯ ಆಸ್ಪತ್ರೆ ಮತ್ತು ಕೊಪ್ಪಳ ಆಸ್ಪತ್ರೆಗೆ ಗಾಯಾಳುಗಳನ್ನು ದಾಖಲಿಸಲಾಗಿದೆ .

ಅಜಯ್ (20),ವಿರುಪಣ್ಣ (45) ಇವರು ಚೂರಿ ಇರಿತಕ್ಕೆ ಒಳಗಾದವರು. ಸೋಮನಾಥ್, ಬಸವರಾಜ, ವಿರುಪಣ್ಣ ಕುರುಬರ್ ,ಕಾರ್ತಿಕ್ ಹಾಗೂ ವೆಂಕಿ ಇವರಿಗೆ ತೀವ್ರತರವಾದ ಗಾಯಗಳಾಗಿದ್ದು ಗಂಗಾವತಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ನೂರ್ ಅಹ್ಮದ್ ಎಂಬ ವ್ಯಕ್ತಿಗೆ ತಲೆಗೆ ಪೆಟ್ಟಾಗಿದ್ದು ಇವರನ್ನು ಕೊಪ್ಪಳದ ಉಪವಿಭಾಗೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ನಾಗೇನಹಳ್ಳಿ ಗ್ರಾಮಕ್ಕೆ ಡಿಎಸ್ ಪಿ ರುದ್ರೇಶ್ ಉಜ್ಜನಕೊಪ್ಪ, ಸಿಪಿಐ ಉದಯರವಿ, ಪಿಎಸ್ಐ ಶಾರದಮ್ಮ ವೆಂಕಟೇಶ್ ಚವಾಣ್ ಸೇರಿದಂತೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದಾರೆ .

ಇದನ್ನೂ ಓದಿ : ಪಾದಯಾತ್ರೆ ಮೂಲಕ ಕಾಂಗ್ರೆಸ್ ಕೋವಿಡ್ ವಿಸ್ತಾರ ಮಾಡಲು ನೋಡುತ್ತಿದೆ: ನಳಿನ್ ಕುಮಾರ್ ಕಟೀಲ್

ಎರಡೂ ಕೋಮಿನ ಪ್ರಮುಖರ ಮೇಲೆ ಈ ಪ್ರಕರಣದಲ್ಲಿ ಕೇಸ್ ದಾಖಲು ಮಾಡಲಾಗಿದೆ. ನಾಗೇನಹಳ್ಳಿ ಗ್ರಾಮದಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಮೀಸಲು ಪೊಲೀಸ್ ವ್ಯವಸ್ಥೆ ಮಾಡಲಾಗಿದೆ.

Advertisement

Advertisement

Udayavani is now on Telegram. Click here to join our channel and stay updated with the latest news.

Next