Advertisement

ಕಾಲುವೆ ದುರಸ್ಥಿ ವೇಳೆ ಕಲ್ಲು ಸ್ಪೋಟ :ಅರಣ್ಯ ಇಲಾಖೆಯಿಂದ ಕಂಪ್ರೆಸ್ಸರ್, ಟ್ರ್ಯಾಕ್ಟರ್ ಸೀಜ್

07:33 PM May 31, 2022 | Team Udayavani |

ಗಂಗಾವತಿ: ತಾಲೂಕಿನ ಆನೆಗೊಂದಿ ಸಾಣಾಪೂರ ಭಾಗದಲ್ಲಿ ವಿಜಯನಗರ ಕಾಲುವೆ ದುರಸ್ಥಿ ಕಾಮಗಾರಿಯಲ್ಲಿ ನಿಯಮ ಉಲ್ಲಂಘಿಸಿ ಕಲ್ಲುಗುಂಡಿಗಳನ್ನು ಸ್ಫೋಟ ಮಾಡುತ್ತಿದ್ದ ಸ್ಥಳದ ಮೇಲೆ ಅರಣ್ಯ ಇಲಾಖೆಯ ದಾಳಿ ಮಾಡಿ ಕಲ್ಲುಗುಂಡುಗಳಿಗೆ ತೂತು ಹಾಕುತ್ತಿದ್ದ ಕಂಪ್ರೈಜರ್ ಟ್ರಾಕ್ಟರ್‌ನ್ನು ವಶಕ್ಕೆ ಪಡೆದು ಕೇಸ್ ದಾಖಲಿಸಿದ್ದಾರೆ.

Advertisement

ಸಾಣಾಪೂರದಿಂದ ಸಂಗಾಪೂರದ ವರೆಗೆ ಇರುವ ವಿಜಯನಗರ ಕಾಲುವೆ ದುರಸ್ಥಿ ಕಾರ್ಯ ನಡೆಯುತ್ತಿದೆ. ಸಾಣಾಪೂರದ ಸರ್ವೇ ನಂಬರ್ 1 ರಲ್ಲಿ ಕಾಲುವೆ ಸುಮಾರು ಒಂದು ಕಿ.ಮೀ. ಅರಣ್ಯ ಇಲಾಖೆಯಲ್ಲಿದ್ದು ಕಾಲುವೆಯಲ್ಲಿ ಅಲ್ಲಲ್ಲಿ ಬೃಹತ್ ಗಾತ್ರದ ಕಲ್ಲುಗುಂಡುಗಳಿವೆ. ಈ ಹಿಂದೆ ಕಾಲುವೆ ನಿರ್ಮಾಣದ ಸಂದರ್ಭದಲ್ಲಿ ನೈಸರ್ಗಿಕವಾಗಿ ಕಲ್ಲು ಗುಂಡುಗಳಿಗೆ ಯಾವುದೇ ಧಕ್ಕೆಯಾಗದಂತೆ ಕಾಲುವೆಯನ್ನು ನಿರ್ಮಿಸಲಾಗಿತ್ತು. ಸುಮಾರು 500 ಕ್ಕೂ ಹೆಚ್ಚು ವರ್ಷಗಳಿಂದ ಇಲ್ಲಿ ಶಾಶ್ವತ ದುರಸ್ಥಿ ಕಾರ್ಯ ನಡೆದಿರಲಿಲ್ಲ. ಇದೀಗ ಏಷ್ಯನ್ ಅಭಿವೃದ್ದಿ ಬ್ಯಾಂಕ್ ಆರ್ಥಿಕ ನೆರವಿನೊಂದಿಗೆರ ದುರಸ್ಥಿ ಕಾರ್ಯ ನಡೆಯುತ್ತಿದೆ. ಈ ಪ್ರದೇಶದ ಹಂಪಿ ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಗೆ ಬರುತ್ತಿರುವುದರಿಂದ ಪ್ರಾಧಿಕಾರದ ಅಗತ್ಯ ಪರವಾನಿಗೆ ತೆಗೆದುಕೊಂಡಿದ್ದು ಕಾಲುವೆ ಮಧ್ಯೆ ಬರುವ ಕಲ್ಲುಗುಂಡುಗಳನ್ನು ಒಡೆಯಲು ಸ್ಪೋಟಕ ವಸ್ತು ಬಳಸುವ ಕುರಿತು ಅರಣ್ಯ ಇಲಾಖೆಯಿಂದ ಪರವಾನಿಗೆ ಪಡೆಯದೇ ಜಲಸಂಪನ್ಮೂಲ ಇಲಾಖೆಯ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ.ಇದರಿಂದ ಕಾಲುವೆ ದುರಸ್ಥಿ ಕಾರ್ಯ ನಿಲುಗಡೆಯಾಗಿದೆ. ಜಲಸಂಪನ್ಮೂಲ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳ ಪ್ರತಿಷ್ಠೆಯ ಪರಿಣಾಮ ಕಾಲುವೆ ಕಾಮಗಾರಿ ನಿಲುಗಡೆಯಾಗಿದೆ.

ಇದನ್ನೂ ಓದಿ : ದೇವನಹಳ್ಳಿ: ಕಾರು,ಟ್ರ್ಯಾಕ್ಟರ್ ಗೆ ಬಸ್ ಢಿಕ್ಕಿ; ಪ್ರಯಾಣಿಕರು ಪಾರು, ಚಾಲಕ ಗಂಭೀರ

ಸಾಣಾಪೂರ ಸರ್ವೇನಂಬರ್ 1 ರಲ್ಲಿ ವಿಜಯನಗರ ಕಾಲುವೆ ಅರಣ್ಯ ಇಲಾಖೆಯ ವ್ಯಾಪ್ತಿಯಲ್ಲಿದ್ದು ಪರವಾನಿಗೆ ಪಡೆಯದೇ ಸ್ಪೋಟಕಗಳ ಮೂಲಕ ಕಲ್ಲುಗುಂಡುಗಳನ್ನು ಸ್ಪೋಟಿಸಲಾಗುತ್ತಿದೆ. ಇದರಿಂದ ಅರಣ್ಯ ಪ್ರದೇಶ ಮತ್ತು ಇಲ್ಲಿ ಅಪೂರ್ಣ ಕಲ್ಲುಗುಂಡುಗಳಿಗೆ ಹಾನಿಯಾಗುವ ಸಂಭವ ಇರುವುದರಿಂದ ಕಂಪ್ರೈಸರ್ ಟಾಕ್ಟರ್‌ನ್ನು ಸೀಜ್ ಮಾಡಲಾಗಿದೆ. ಕಲ್ಲುಗುಂಡು ಸ್ಪೋಟಿಸಿದವರ ವಿರುದ್ಧ ಕೇಸ್ ದಾಖಲು ಮಾಡಲಾಗುತ್ತದೆ ಎಂದು ತಾಲೂಕು ಅರಣ್ಯ ಸಂರಕ್ಷಣಾಧಿಕಾರಿ ಶಿವರಾಜ್ ಮೇಟಿ ಉದಯವಾಣಿಗೆ ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next