Advertisement

Gangavati: 32 ವರ್ಷದ ವಿವಾಹಿತನಿಂದ 8 ವರ್ಷದ ಬಾಲಕಿಯ ರೇಪ್ ಯತ್ನ

10:01 PM Sep 04, 2023 | Team Udayavani |

ಗಂಗಾವತಿ:32 ವರ್ಷದ ವಿವಾಹಿತನೊರ್ವ ಪಕ್ಕದ ಮನೆಯ 8ವರ್ಷದ ಬಾಲಕಿಯ ಮೇಲೆ ಆತ್ಯಾಚಾರಕ್ಕೆ ಯತ್ನಿಸಿದ ಪ್ರಕರಣ ನಗರದ ಅಂಗಡಿ ಸಂಗಣ್ಣ ಕ್ಯಾಂಪ್ ಸೋಮವಾರ ಮಧ್ಯಾಹ್ನ ನಡೆದಿದೆ.

Advertisement

ಇಸ್ಲಾಂಪೂರ ಮಸೀದಿಯಲ್ಲಿ ಹೆಲ್ಪರ್ ಆಗಿ ಕೆಲಸ ಮಾಡುತ್ತಿರುವ ಅಂಗಡಿ ಸಂಗಣ್ಣ ಕ್ಯಾಂಪ್ ಅಬ್ದುಲ್ ರಜಾಕ್ (32) ಎಂಬಾತ ಮನೆಯ ಹತ್ತಿರದ 8 ವರ್ಷದ ಬಾಲಕಿಯನ್ನು ಪುಸಲಾಯಿಸಿ ಆತ್ಯಾಚಾರಕ್ಕೆ ಯತ್ನಿಸಿದ್ದಾನೆ.ಕೃತ್ಯವೆಸಗಿದ ಆರೋಪಿಗೆ ವಿವಾಹವಾಗಿದ್ದು ಮೂರು ಜನ ಮಕ್ಕಳಿದ್ದಾರೆ.

ಬಾಲಕಿ ಕಿರುಚಾಡಿದ್ದರಿಂದ ಪಾಲಕರು ಆಗಮಿಸಿ ಆರೋಪಿಯನ್ನು ಹಿಡಿದು ನಗರ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ಪಾಲಕರು ನೀಡಿದ ದೂರಿನ ಅನ್ವಯ ಪೊಕ್ಸೋ ಕಾಯ್ದೆಯಡಿ ಕೇಸ್ ದಾಖಲಿಸಿ ಅಬ್ದುಲ್ ರಜಾಕ್ ನನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next