Advertisement

ಗಂಗಾವತಿ: ಮತ ಚಲಾಯಿಸಿ ಬ್ಯಾಲೆಟ್ ಪೇಪರ್ ಹರಿದು ಹಾಕಿದ ಕುಡುಕರು; ಪ್ರಕರಣ ದಾಖಲು

04:58 PM Dec 27, 2020 | Mithun PG |

ಗಂಗಾವತಿ: ತಾಲೂಕಿನ ಆನೆಗೊಂದಿ ಗ್ರಾಪಂ ಚುನಾವಣೆ ವಾರ್ಡ್  01 ಮತ್ತು 03 ರ ಮತಗಟ್ಟೆ ಕೇಂದ್ರದಲ್ಲಿ ಮದ್ಯ ಸೇವಿಸಿ ಆಗಮಿಸಿದ್ದ ಇಬ್ಬರು ಮತದಾರರು, ಮತ ಚಲಾವಣೆಯ ನಂತರ‌ ಬ್ಯಾಲೆಟ್ ಪೇಪರ್ ಹರಿದು ಹಾಕಿದ ಘಟನೆ ಜರುಗಿದೆ.

Advertisement

ಪರಿಣಾಮ ಒಂದು ಗಂಟೆಗೂ ಹೆಚ್ಚು ಕಾಲ ಮತದಾನ ಸ್ಥಗಿತಗೊಂಡಿದ್ದು,  ಸ್ಥಳಕ್ಕೆ ತಹಸೀಲ್ದಾರ್ ಎಂ.ರೇಣುಕಾ, ಇಒ ಡಾ.ಮೋಹನಕುಮಾರ‌, ಡಿಎಸ್ಪಿ ರುದ್ರೇಶ ಉಜ್ಜನಕೊಪ್ಪ, ಗ್ರಾಮೀಣ ಸಿಪಿಐ ಉದಯರವಿ, ಪಿಎಸ್ ಐ ಜೆ.ದೊಡ್ಡಪ್ಪ ಭೇಟಿ ನೀಡಿ ಪರಿಶೀಲಿಸಿದರು.

ಬ್ಯಾಲೆಟ್ ಪೇಪರ್ ಹರಿದು ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತಿಮ್ಮಪ್ಪ ಹಾಗೂ ನಂದಕುಮಾರ ಎಂಬವರನ್ನು  ಪೊಲೀಸರು ವಶಕ್ಕೆ ಪಡೆದಿದ್ದು,  ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೊಪ್ಪಳ : ಮಧ್ಯಾಹ್ನ 3ಕ್ಕೆ ಶೇ.67.14 ರಷ್ಟು ಮತದಾನ

Advertisement

ಕೊಪ್ಪಳ ಜಿಲ್ಲೆಯಲ್ಲಿ ಎರಡನೇ ಹಂತದಲ್ಲಿ 76 ಗ್ರಾಪಂಗೆ ನಡೆದ ಚುನಾವಣೆಯ ಮತದಾನದಲ್ಲಿ ಮಧ್ಯಾಹ್ನ 3 ಗಂಟೆ ವೇಳೆಗೆ ಶೇ.67.14 ರಷ್ಟು ಮತದಾನವಾಗಿದೆ. ಕುಷ್ಟಗಿ ತಾಲೂಕಿನಲ್ಲಿ ಶೇ.64.90, ಕನಕಗಿರಿ ತಾಲೂಕಿನಲ್ಲಿ ಶೇ. 72.26, ಕಾರಟಗಿ ತಾಲೂಕಿನಲ್ಲಿ ಶೇ. 68.51 ಹಾಗೂ ಗಂಗಾವತಿ ತಾಲೂಕಿನಲ್ಲಿ ಶೇ. 67.75 ರಷ್ಟು ಮತದಾನ ಸೇರಿದಂತೆ ಒಟ್ಟಾರೆ ಜಿಲ್ಲೆಯಾದ್ಯಂತ ಮಧ್ಯಾಹ್ನ 3 ಗಂಟೆ ವೇಳೆಗೆ ಶೇ. 67.14 ರಷ್ಟು ಮತದಾನ ನಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next