ಗಂಗಾವತಿ: ಇಲ್ಲಿಯ ತಹಸೀಲ್ದಾರ್ ಕಚೇರಿ ಸಿಬ್ಬಂದಿಯೊಬ್ಬರಿಗೆ ಕೋವಿಡ್ ಪಾಸಿಟಿವ್ ಕಂಡು ಬಂದಿದ್ದು, ಇಡೀ ತಹಸೀಲ್ದಾರ್ ಕಚೇರಿಗೆ ಬೀಗ ಹಾಕಿ ಸೀಲ್ ಡೌನ್ ಮಾಡಲಾಗಿದೆ. ಇದರಿಂದ ನೋಂದಣಿ ಕಚೇರಿ, ಆಹಾರ ಇಲಾಖೆ, ಚುನಾವಣಾ ಕಚೇರಿ, ಸರ್ವೇ ಇಲಾಖೆಯ ಕಚೇರಿಯನ್ನು ಸೋಮವಾರ ಒಂದು ದಿನದ ಮಟ್ಟಿಗೆ ಮುಚ್ಚಲಾಗಿದೆ.
ಸಾರ್ವಜನಿಕ ಪರವಾನಿಗೆ ಕೊಡುವ ಪ್ರಥಮ ದರ್ಜೆ ಸಹಾಯಕನೋರ್ವನಿಗೆ ಕೋವಿಡ್ ಪಾಸಿಟಿವ್ ಬಂದಿದೆ. ಸೋಂಕು ಸಂದರ್ಭದಲ್ಲಿ ಪರವಾನಿಗೆ ಕೊಡುವ ವಿಭಾಗದಲ್ಲಿ ನಿತ್ಯವೂ ಹಲವು ಜನರು ಬಂದು ಹೋಗಿದ್ದು ಯಾರಿಂದ ಅಥವಾ ಯಾವಾಗ ಸೋಂಕು ತಗುಲಿದೆ ಎಂದು ತಿಳಿದಿಲ್ಲ. ಸೋಂಕಿತನಿಗೆ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಮನೆಯಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರ ಪತ್ತೆ ಕಾರ್ಯ ನಡೆಯುತ್ತಿದೆ.
ಇದನ್ನೂ ಓದಿ:ಕೆಕೆಆರ್ ತಂಡದ ಇಬ್ಬರಿಗೆ ಕೋವಿಡ್ ಪಾಸಿಟಿವ್: ಆರ್ ಸಿಬಿ ವಿರುದ್ಧದ ಪಂದ್ಯ ಮುಂದೂಡಿಕೆ
ಕಚೇರಿಗೆ ಸೋಂಕು ನಿವಾರಣೆ ಸಿಂಪರಣೆ: ಪ್ರಥಮದರ್ಜೆ ಸಹಾಯಕ ನೊರ್ವನಿಗೆ ಸೋಂಕು ದೃಢವಾಗಿದ್ದು, ಮನೆಯಲ್ಲಿ ಪ್ರತ್ಯೇಕವಾಗಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸೋಮವಾರದ ಮಟ್ಟಿಗೆ ತಹಸೀಲ್ದಾರ್ ಕಚೇರಿ ಸೇರಿ ಇಲ್ಲಿ ಕಾರ್ಯ ನಿರ್ವಹಿಸುವ ಎಲ್ಲಾ ಕಚೇರಿಗಳನ್ನು ಬಂದ್ ಮಾಡಿ ಸೋಂಕು ನಿವಾರಕವನ್ನು ಸಿಂಪಡಣೆ ಮಾಡಲಾಗುತ್ತದೆ ಮಂಗಳವಾರದಿಂದ ಪುನಃ ಯಥಾ ಪ್ರಕಾರ ತಹಸೀಲ್ದಾರ್ ಕಚೇರಿ ಕಾರ್ಯ ನಿರ್ವಹಿಸಲಿದೆ ಎಂದು ತಹಸೀಲ್ದಾರ್ ಯು.ನಾಗರಾಜ
ಉದಯವಾಣಿ ಗೆ ತಿಳಿಸಿದ್ದಾರೆ