ಗಂಗಾವತಿ: ಕೋವಿಡ್-19 ಸೋಂಕಿತ ವ್ಯಕ್ತಿಗಳು ಪತ್ತೆಯಾಗಿ ನಗರದ ಎರಡು ಪ್ರದೇಶ ಸೀಲ್ ಡೌನ್ ಪ್ರದೇಶವಾಗಿದ್ದರಿಂದ ಪ್ರತಿ ಭಾನುವಾರ ಜುಲೈ ನಗರದ ರಸ್ತೆಯುದ್ದಕ್ಕೂ ಇರುವ ಗ್ಯಾರೇಜ್ ಗಳಲ್ಲಿ ಹಳೆಯ ಬೈಕ್ ಗಳ ಮಾರಾಟ ನಿಷೇಧವಿದ್ದರೂ ಅವ್ಯಾಹತವಾಗಿ ಬೈಕ್ ಮಾರಾಟ ನಡೆಯುತ್ತಿದೆ. ಬೈಕ್ ಖರೀದಿಸಲು ಬಳ್ಳಾರಿ ರಾಯಚೂರು ಗದಗ, ಬಾಗಲಕೋಟ ಜಿಲ್ಲೆಗಳಿಂದ ಜನರು ಬರುವುದರಿಂದ ತಾಲ್ಲೂಕು ಆಡಳಿತವು ಸಂಡೇ ಬೈಕ್ ಮಾರ್ಕೆಟ್ ನಿಲ್ಲಿಸುವಂತೆ ಜನತೆ ಒತ್ತಾಯಿಸಿದ್ದಾರೆ.
ಕೋವಿಡ್-19 ರೋಗ ಬರುವ ಮೊದಲು ಜುಲೈನಗರದ ಖಾಸಗಿ ಜಾಗದಲ್ಲಿ ಪ್ರತಿ ಭಾನುವಾರ ಸಂಡೇ ಮಾರ್ಕೆಟ್ ಮೂಲಕ ಹಳೆಯ ಬೈಕ್ ಮಾರಾಟ ನಡೆಯುತ್ತಿತ್ತು. ಕೋವಿಡ್-19 ಹಿನ್ನೆಲೆಯಲ್ಲಿ ನಗರಸಭೆ ಪೊಲೀಸ್ ಇಲಾಖೆ ಸಂಡೇ ಮಾರ್ಕೆಟ್ ವ್ಯವಹಾರ ನಿಷೇಧ ಮಾಡಿತ್ತು. ಲಾಕ್ ಡೌನ್ ನಿಯಮ ಸಡಿಲವಾದ ನಂತರ ಗ್ಯಾರೇಜ್ ಗಳಲ್ಲಿಪ್ರತಿ ಭಾನುವಾರ ಬೈಕ್ ಗಳ ಮಾರಾಟ ನಡೆಸಲಾಗುತ್ತಿದೆ.
ಕ್ರಮಕ್ಕೆ ಆಗ್ರಹ: ಕೋವಿಡ್-19 ಹಿನ್ನೆಲೆಯಲ್ಲಿ ಸಂಡೇ ಮಾರ್ಕೆಟ್ ಬೈಕ್ ಮಾರಾಟಕ್ಕೆ ನಿಷೇಧವಿದ್ದರೂ ಪ್ರತಿವಾರ ಜುಲೈ ನಗರದ ರಸ್ತೆಯಲ್ಲಿ ಅಕ್ರಮವಾಗಿ ಬೈಕ್ ಗಳ ಮಾರಾಟ ನಡೆಯುತ್ತಿದ್ದು ಇದನ್ನು ನಿಲ್ಲಿಸುವಂತೆ ಬಿಎಸ್ಪಿತಾಲೂಕು ಅಧ್ಯಕ್ಷ ಶಂಕರ ಸಿದ್ದಾಪುರ ಜಿಲ್ಲಾಧಿಕಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.
ಅನ್ಯ ಊರುಗಳಿಂದ ಬೈಕ್ ಗಳ ಖರೀದಿಗೆ ಜನರು ಬರುವುದರಿಂದ ಸೋಂಕು ಭೀತಿಯುಂಟಾಗಿದೆ. ಸಂಡೇ ಮಾರ್ಕೆಟ್ ತಡೆಯುವಂತೆ ಮನವಿ ಮಾಡಿದ್ದಾರೆ.