Advertisement
ಸಾಣಾಪೂರ ಹತ್ತಿರದ ಕಿಷ್ಕಿಂದಾ ಏಳುಗುಡ್ಡ ಪ್ರದೇಶದಲ್ಲಿ ಹರಿಯುವ ತುಂಗಭದ್ರಾ ಎಡದಂಡೆ ಕಾಲುವೆ ನೀರು ಇಕ್ಕಟಾದ ಸ್ಥಳದಲ್ಲಿ ಹೋಗುವಾಗ ನೈಸರ್ಗಿಕವಾಗಿ ಕೆರೆ ನಿಮಾರ್ಣವಾಗುತ್ತಿದ್ದು ಎರಡು ಕಡೆ ಬೃಹತ್ ಪ್ರಮಾಣದ ನೀರು ನಿಂತಿರುವುದರಿಂದ ಎರಡು ಕೆರೆಗಳು ನಿರ್ಮಾಣವಾಗಿವೆ. ಸುತ್ತಲೂ ಗುಡ್ಡ ಕಲ್ಲುಬಂಡೆ ಇರುವುದರಿಂದ ಪ್ರವಾಸಿ ತಾಣವಾಗಿ ಕಳೆದ ಎರಡು ದಶಕಗಳಿಂದ ಆಕರ್ಷಿಣೀಯ ಸ್ಥಳವಾಗಿದೆ. ವಿರೂಪಾಪೂರಗಡ್ಡಿಯಲ್ಲಿ ರೆಸಾರ್ಟ್ ಗಳು ಇದ್ದ ಸಂದರ್ಭದಲ್ಲಿ ವಿದೇಶ ಪ್ರವಾಸಿಗರು ಹಾಗೂ ದೇಶಿಯ ಐಟಿಬಿಟಿ ಉದ್ಯೋಗಿಗಳು ವೀಕ್ ಎಂಡ್ ನೆಪದಲ್ಲಿ ಇಲ್ಲಿಗೆ ಆಗಮಿಸಿ ಇಲ್ಲಿ ತಂಗಿ ನಿತ್ಯವೂ ಸಾಣಾಪೂರ ಕೆರೆಯಲ್ಲಿ ಈಜಾಡಲು ಮತ್ತು ಬೋಟಿಂಗ್(ತೆಪ್ಪ) ಮಾಡುತ್ತಿದ್ದರು. ಪ್ರವಾಸಿಗರನ್ನು ಸ್ಥಳೀಯ ಯುವಕರು ಕೆರೆಯಲ್ಲಿ ಬೋಟಿಂಗ್ (ತೆಪ್ಪ ಅಥವಾ ಹರಿಗೋಲಿನಲ್ಲಿ) ಮಾಡಿಸುತ್ತಿದ್ದರು. ಬೋಟಿಂಗ್ ಮಾಡಿದ ಪೊಟೋ ಮತ್ತು ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದರಿಂದ ಸಾಣಾಪೂರ ಲೇಕ್ ಬೋಟಿಂಗಿಗೆ ಆಗಮಿಸುವವರ ಸಂಖ್ಯೆ ಹೆಚ್ಚಾಗಿದೆ. ಕಿಷ್ಕಿಂದಾಕ್ಕೆ ಬರುವ ಪ್ರವಾಸಿಗರು ಕೆರೆಯ ಬದಿ ಕಲ್ಲು ಬಂಡೆಗಳ ಮೇಲಿಂದ ನೀರಿಗೆ ಧುಮಿಕಿ ಸಂತೋಷಪಡುತ್ತಿದ್ದರು. ಧುಮುಕುವುದನ್ನು ಪ್ರವಾಸಿಗರಿಗೆ ಕಲಿಸಲು ಮತ್ತು ಬೋಟಿಂಗ್ ನಲ್ಲಿ ಸುತ್ತಾಡಿಸಲು ಸ್ಥಳೀಯ ಕೆಲ ಯುವಕರು ಸಾವಿರಾರು ರೂ.ಗಳನ್ನು ಪಡೆಯುತ್ತಾರೆ. ಸರಿಯಾಗಿ ಈಜಲು ಬಾರದ ಪ್ರವಾಸಿಗರು ಕಲ್ಲಿನ ಮೇಲಿಂದ ಧುಮುಕಲು ಹೋಗಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಇತ್ತೀಚೆಗೆ ಕೆರೆಯಲ್ಲಿ ಬೋಟಿಂಗ್ ಮತ್ತು ನೀರಿನಲ್ಲಿ ಜಂಪಿಂಗ್ ಮಾಡುವವರ ಸಂಖ್ಯೆ ಹೆಚ್ಚಾಗಿದ್ದು ನೀರಿನ ಆಳ ಗೊತ್ತಿಲ್ಲದ ಹಲವು ಪ್ರವಾಸಿಗರು ನೀರಿನಲ್ಲಿ ಮುಳುಗಿ ಸಾವನ್ನಪ್ಪುತ್ತಿದ್ದಾರೆ.
Related Articles
Advertisement
ಕಠಿಣ ಕ್ರಮ: ಸಾಣಾಪೂರ ಕೆರೆಯಲ್ಲಿ ಬೋಟಿಂಗ್ ನಿಷೇಧ ಮಾಡಿ ಹಲವು ಸಲ ಅರಿಗೋಲುಗಳನ್ನು ಸೀಜ್ ಮಾಡಲಾಗಿದೆ. ಸ್ಥಳೀಯರು ರಾಜಕಾರಣಿಗಳ ಪ್ರಭಾವ ಬಳಸಿ ಅರಿಗೋಲು ತೆಗೆದುಕೊಂಡು ಹೋಗಿ ಪುನಹ ಕೆರೆಯಲ್ಲಿ ಅರಿಗೋಲು ಹಾಕುತ್ತಿದ್ದಾರೆ. ಇಲ್ಲಿ ಈಜಾಡಲು ನಿಷೇಧ ಅಪಾಯಕಾರಿ ಎಂದು ಹಲವು ಕಡೆ ಬರೆಸಿದ್ದರೂ ಇಲ್ಲಿಗೆ ಬರುವ ಪ್ರವಾಸಿಗರು ಕಲ್ಲುಗಳ ಮೇಲಿಂದ ಜಂಪಿಂಗ್ಗ್ ಮಾಡಿ ಪ್ರಾಣ ಕಳೆದುಕೊಳ್ಳುತ್ತಿದ್ದು ಅರಿಗೋಲು ಹಾಕುವವರ ವಿರುದ್ಧ ಇನ್ನೂ ನಿರ್ದಕ್ಷಿಣ್ಯ ಕ್ರಮ ಜರುಗಿಸಲಾಗುತ್ತದೆ ಎಂದು ಸಾಣಾಪುರ ಗ್ರಾಪಂ ಪಿಡಿಒ ಬಬಸವರಾಜಗೌಡ ನಾಯಕ ಉದಯವಾಣಿ ಗೆ ತಿಳಿಸಿದ್ದಾರೆ.
-ಕೆ.ನಿಂಗಜ್ಜ