ಗಂಗಾವತಿ: ನಗರಸಭೆ ಮತ್ತು ನೋಂದಣಿ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯದ ಪರಿಣಾಮ ಆಸ್ತಿ ನೋಂದಣಿ ಮಾಡಲು ಆಗಮಿಸುವ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ.
ನಗರ ಪ್ರದೇಶದಲ್ಲಿ ಮನೆ ನಿವೇಶನ ಖರೀದಿಸಿ ನೋಂದಣಿ ಮಾಡಿಸಿಕೊಳ್ಳಲು ಮತ್ತು ನಗರಸಭೆಯಲ್ಲಿ ಮ್ಯಟೇಶನ್ ಮಾಡಿಸಿಕೊಳ್ಳಲು ಜನರಿಗೆ ಅಧಿಕಾರಿಗಳ ನಿರ್ಲಕ್ಷ್ಯದ ಪರಿಣಾಮ ನಿತ್ಯವೂ ನೋಂದಣಿ ಇಲಾಖೆ ಮತ್ತು ನಗರಸಭೆ ಕಚೇರಿಗೆ ಅಲೆಯುವಂತಾಗಿದೆ.
ಇದನ್ನೂ ಓದಿ:ಸಿಎಂ ವಿರುದ್ಧ ಟೀಕೆ: ಬಸನಗೌಡ ಪಾಟೀಲ್ ಯತ್ನಾಳ್ ಗೆ ಶೋಕಾಸ್ ನೋಟಿಸ್ ನೀಡಿದ ಬಿಜೆಪಿ ಹೈಕಮಾಂಡ್
ನಗರಸಭೆ ವ್ಯಾಪ್ತಿಯಲ್ಲಿ ಮಾಡಲಾದ ಹೊಸ ಲೇಔಟ್ ಅನ್ ಸೈಜ್ ನಿವೇಶನಗಳ ಮಾಹಿತಿ ನೋಂದಣಿ ಕಚೇರಿಯಲ್ಲಿ ಲಭ್ಯವಿಲ್ಲದ ಕಾರಣ ರಿಜಿಸ್ಟ್ರಾರ್ ಮಾಡಿಸಿಕೊಳ್ಳಲು ತೊಂದರೆಯಾಗಿದೆ.
ನೋಂದಣಿ ಇಲಾಖೆಯ ನಿಯಮದಂತೆ ಪ್ರತಿನಿತ್ಯ ನೋಂದಣಿ ಆಗಿರುವ ಆಸ್ತಿಯ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ ಲೋಡ್ ಮಾಡಬೇಕಿದ್ದು ಗಂಗಾವತಿಯಲ್ಲಿ ಮರುದಿನ ಸ್ಕ್ಯಾನ್ ಮತ್ತು ಅಪ್ ಲೋಡ್ ಮಾಡಲಾಗುತ್ತಿದೆ. ಮೂರನೇ ದಿನಕ್ಕೆ ಆಸ್ತಿ ಖರೀದಿದಾರರಿಗೆ ದಾಖಲೆಗಳನ್ನು ಲಭ್ಯವಾಗುವುದರಿಂದ ಹೊಸ ನೋಂದಣಿದಾರರು ಎರಡು ಮೂರು ದಿನ ಕ್ಯೂನಲ್ಲಿ ನೋಂದಣಿ ಮಾಡಿಸಿಕೊಳ್ಳಬೇಕಾಗಿದೆ. ಇದರಿಂದ ಸಾರ್ವಜನಿಕರಿಗೆ ತೊಂದರೆ ಉಂಟಾಗಿದೆ.
ಇದನ್ನೂ ಓದಿ:ಬಾದಾಮಿ: ಒಂದೇ ವೇದಿಕೆಯಲ್ಲಿ ಸಿದ್ದರಾಮಯ್ಯ- ಶ್ರೀರಾಮುಲು
ಕ್ರಮಕ್ಕೆ ಆಗ್ರಹ: ನೋಂದಣಿ ಕಚೇರಿಯಲ್ಲಿ ಕೆಲಸ ಕಾರ್ಯಗಳು ವಿಳಂಭವಾಗುತ್ತಿದ್ದು ಜನರಿಗೆ ತೊಂದರೆಯಾಗುತ್ತಿದೆ. ನೋಂದಣಿ ಇಲಾಖೆಯ ಆಯುಕ್ತರು ಸೂಕ್ತ ಕ್ರಮ ಜರುಗಿಸುವಂತೆ ತಾ.ಪಂ.ಸ್ಥಾಯಿ ಸಮಿತಿ ಅಧ್ಯಕ್ಷ ವೈ.ರಮೇಶ್ ಆಗ್ರಹಿಸಿದ್ದಾರೆ.