Advertisement

ರಾಜ್ಯಕ್ಕೆ ಮಾದರಿಯಾದ ಗಂಗಾವತಿ ಆನ್ ಲೈನ್ ಕ್ಲಾಸ್

09:28 AM May 31, 2020 | keerthan |

ಗಂಗಾವತಿ: ಕೊವಿಡ್-19 ಲಾಕ್ ಡೌನ್ ಹಿನ್ನೆಲೆಯಲ್ಲಿ ರಾಜ್ಯದ ಶಾಲೆ ಕಾಲೇಜು ವಿಶ್ವವಿದ್ಯಾಲಯಗಳ ಕಾರ್ಯ ಸ್ಥಗಿತಗೊಂಡಿದ್ದು ಬಹುತೇಕ ಆನ್ ಲೈನ್ ಮೂಲಕ ಪಾಠಪ್ರವಚನಗಳು ನಡೆಯುತ್ತಿವೆ.  ನಗರದ ಕೊಲ್ಲಿ ನಾಗೇಶ್ವರ ರಾವ್ ಸರಕಾರಿ ಮಹಾವಿದ್ಯಾಲಯದ ವಾಣಿಜ್ಯ ವಿಭಾಗ ಈ ಆನ್ ಲೈನ್ ತರಗತಿ ಯೋಜನೆಯಲ್ಲಿ ಉತ್ತಮ ಸಾಧನೆ ಮಾಡಿದ್ದು, ಉನ್ನತ ಶಿಕ್ಷಣ ಸಚಿವ ಮತ್ತು ಮುಖ್ಯಮಂತ್ರಿಗಳ ಗಮನ ಸೆಳಿದದೆ. ಜತೆಗೆ ರಾಜ್ಯದಲ್ಲಿ ಗಂಗಾವತಿ ಮಾದರಿ ಅನುಸರಿಸಲು ಉನ್ನತ ಶಿಕ್ಷಣ ಇಲಾಖೆಗೆ ಸರಕಾರ ಆದೇಶ ನೀಡಿದೆ.

Advertisement

ಆನ್ ಲೈನ್ ಪಾಠ ಎಂದರೆ ಪ್ರಾಧ್ಯಾಪಕರು ಪಾಠ ಮಾಡಿದ್ದನ್ನು ವಿದ್ಯಾರ್ಥಿಗಳು ಕೇಳಿ ನೋಟ್ಸ್ ಮಾಡಿಕೊಳ್ಳುವುದು ಎಂದು ತಿಳಿಯಲಾಗಿತ್ತು. ನಗರದ ಎಸ್ ಕೆ ಎನ್ ಜಿ ಕಾಲೇಜು ವಾಣಿಜ್ಯ ವಿಭಾಗದ ಮುಖ್ಯಸ್ಥ ಪ್ರೋ.ಕರಿಗೂಳಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ಆನ್ ಲೈನ್ ನಲ್ಲಿ ಪಾಠ ಕೇಳಿ ನಂತರ ಸ್ವತಃ ವಿದ್ಯಾರ್ಥಿಗಳು ನೋಟ್ಸ್ ತಯಾರಿಸಿಕೊಂಡು ಪಠ್ಯ ವಿಷಯದ ಕುರಿತು ಸೆಮಿನಾರ್ ರೂಪದಲ್ಲಿ ವಿಡಿಯೋ ತಯಾರಿಸಿ ಗುರುಗಳಿಗೆ ಪಾಠ ಒಪ್ಪಿಸಬೇಕು. ಈ ಮೂಲಕ ವಿಷಯದ ಕುರಿತು ಮನನ ಮಾಡಿಕೊಂಡಿರುವುದನ್ನು ಸಾಬೀತುಪಡಿಸುತ್ತಾರೆ.

ವಲಯವಾರು ಇಂತಹ ನಾಲ್ಕೈದು ವಿಡಿಯೋಗಳ ಪೈಕಿ ಗಂಗಾವತಿ ಕಾಲೇಜಿನ ವಿದ್ಯಾರ್ಥಿಗಳ ವಿಡಿಯೋವನ್ನು ಪ್ರಥಮವಾಗಿ ಉನ್ನತ ಶಿಕ್ಷಣ ಸಚಿವ ಮತ್ತು ಸಿಎಂ ವೀಕ್ಷಣೆ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿ ಕಾಲೇಜಿನ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಇಲಾಖೆ ಮೆಚ್ಚುಗೆ ಪ್ರಮಾಣ ಪತ್ರ ನೀಡಲಾಗಿದೆ.

ಅಭಿನಂದನೆಗಳು: ನಮ್ಮೂರಿನ ಪ್ರಾಧ್ಯಾಪಕರು ವಿದ್ಯಾರ್ಥಿಗಳು ಸಿದ್ದಪಡಿಸಿದ ಆನ್ ಲೈನ್ ಪಾಠದ ಮಾದರಿ ಸರಕಾರದ ಮೆಚ್ಚುಗೆ ಪಡೆದಿರುವುದು ಸಂತೋಷದ ಸಂಗತಿ. ಕಾರ್ಯಸಾಧನೆ ಮಾಡಿದ ಪ್ರಾಧ್ಯಾಪಕರು ವಿದ್ಯಾರ್ಥಿಗಳಿಗೆ ಕಾಲೇಜು ಸಮಿತಿ ಅಧ್ಯಕ್ಷ ಹಾಗೂ ಶಾಸಕ ಪರಣ್ಣ ಮುನವಳ್ಳಿ ಅಭಿನಂದಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next