Advertisement

ರಾಯರ 350ನೇ ಆರಾಧನಾ ಕಾರ್ಯಕ್ರಮಕ್ಕೆ ಗಂಗಾವತಿಯಲ್ಲಿ ಚಾಲನೆ

01:59 PM Aug 23, 2021 | Team Udayavani |

ಗಂಗಾವತಿ: ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ 350ನೇ ಆರಾಧನೆ ನಿಮಿತ್ತ ಇಂದು ಪೂರ್ವಾರಾಧನೆ ಕಾರ್ಯಕ್ರಮ ಗಂಗಾವತಿಯ ರಾಯರ ಮಠದಲ್ಲಿ ಚಾಲನೆ ನೀಡಲಾಯಿತು.

Advertisement

ಪೂರ್ವಾರಾಧನೆ ನಿಮಿತ್ತ ರಾಯರ ಬೃಂದಾವನಕ್ಕೆ ನೈರ್ಮಲ್ಯ ವಿಸರ್ಜನೆ ಪಂಚಾಮೃತ ಅಭಿಷೇಕ ಹಾಗೂ ವಿವಿಧ ಹೂವುಗಳ ಮೂಲಕ ಬೃಂದಾವನವನ್ನು ಅಲಂಕರಿಸಲಾಗಿತ್ತು .ಬೆಳಿಗ್ಗೆ ಏಳರಿಂದ ರಾತ್ರಿ ಎಂಟರವರೆಗೆ ರಾಯರ ಅಷ್ಟೋತ್ತರ ಕಾರ್ಯಕ್ರಮ ಹಸ್ತೋದಕ  ಮತ್ತು ವಿವಿಧ ಧಾರ್ಮಿಕ ಕಾರ್ಯಕ್ರಮಗಳು  ಜರುಗಲಿವೆ.

ಇದನ್ನೂ ಓದಿ:ಮಹಾನಗರ ಪಾಲಿಕೆ ಚುನಾವಣೆ: ಯಾದಿ ಬೆನ್ನಲ್ಲೇ ಅಸಮಾಧಾನ

ಕೊರೋನಾ ಮಾರ್ಗಸೂಚಿ ಅನ್ವಯ ಮಠದಲ್ಲಿ ಎಲ್ಲಾ ಕಾರ್ಯಕ್ರಮಗಳು ನೆರವೇರಲಿವೆ.  ಮಠದ ವ್ಯವಸ್ಥಾಪಕರಾದ ಜಿ ಸುರೇಶ್ ಅರ್ಚಕರಾದ ಪ್ರಹ್ಲಾದಾಚಾರ್ ಕಟ್ಟಿ ಸೇರಿದಂತೆ ರಾಯರ ಭಕ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next