Advertisement

ಗಂಗಾವತಿ: ಮಸೀದಿ ಸೇರಿ ಧಾರ್ಮಿಕ ಸ್ಥಳಗಳಲ್ಲಿ ರಾಜಕೀಯ ಪ್ರಚಾರ; ಕೇಸ್ ದಾಖಲಿಸಲು ಸೂಚನೆ

02:04 PM Apr 01, 2023 | Team Udayavani |

ಗಂಗಾವತಿ: ಮಸೀದಿ, ಗುಡಿ ಮತ್ತು ಚರ್ಚ್ ಸೇರಿ ಧಾರ್ಮಿಕ ಸ್ಥಳಗಳಲ್ಲಿ ವಿಧಾನಸಭಾ ಚುನಾವಣಾ ಪ್ರಚಾರ ಅಥವಾ ಕರಪತ್ರ ಹಂಚಿಕೆ ಮಾಡಿದರೆ ನೀತಿ ಸಂಹಿತೆ ಉಲ್ಲಂಘನೆ ನಿಯಮದಡಿಯಲ್ಲಿ ಕೇಸ್ ದಾಖಲಿಸಲಾಗುತ್ತದೆ ಎಂದು ಗಂಗಾವತಿ ಕ್ಷೇತ್ರದ ಚುನಾವಣಾಧಿಕಾರಿ ಹಾಗೂ ಸಹಾಯಕ ಆಯುಕ್ತ ಬಸವಣೆಪ್ಪ ಕಲಶೆಟ್ಟಿ ಹೇಳಿದರು.

Advertisement

ಅವರು ನಗರಸಭೆಯಲ್ಲಿ ಮುಸ್ಲಿಂ ಧರ್ಮಗುರುಗಳು ಹಾಗೂ ಮುಖಂಡರ ಸಭೆಯಲ್ಲಿ ಮಾತನಾಡಿದರು.

ಮುಸ್ಲಿಂ, ಹಿಂದೂ ಸೇರಿ ಯಾವುದೇ ಧರ್ಮದ ದೇಗುಲ, ಸಮುದಾಯ ಭವನ, ದರ್ಗಾ ಸೇರಿ ಧಾರ್ಮಿಕ ಸ್ಥಳಗಳಲ್ಲಿ ರಾಜಕೀಯ ಭಾಷಣ, ಅಭ್ಯರ್ಥಿಗಳ ಪರವಾದ ಮನವಿ, ಹೇಳಿಕೆ ಅಥವಾ ಬ್ಯಾನರ್, ಬಂಟಿಂಗ್ಸ್ ಕರಪತ್ರ ಅಂಟಿಸಬಾರದು. ಮಾದರಿ ಚುನಾವಣಾ ನೀತಿ ಸಂಹಿತೆ ಜಾರಿಯಾಗಿದ್ದು ಚುನಾವಣಾ ಆಯೋಗ ನಿಯಮದಂತೆ ಪ್ರತಿಯೊಬ್ಬರೂ ನಡೆಯಬೇಕು. ಪ್ರತಿ ಧರ್ಮದವರ ಸಭೆ ನಡೆಸಿ ಕಟ್ಟುನಿಟ್ಟಾಗಿ ನಿಯಮ ಪಾಲನೆ ಮಾಡುವಂತೆ ಸೂಚನೆ ನೀಡಲಾಗುತ್ತದೆ ಎಂದರು.

ಸಭೆಯಲ್ಲಿ ತಹಸೀಲ್ದಾರ್ ಮಂಜುನಾಥ ಹಿರೇಮಠ, ಪೌರಾಯುಕ್ತ ವಿರೂಪಾಕ್ಷ ಮೂರ್ತಿ, ಡಿಎಸ್ಪಿ ಶೇಖರಪ್ಪ ಸೇರಿ‌ ನಗರದ ಎಲ್ಲಾ ಮಸೀದಿಗಳ ಮುಖ್ಯಸ್ಥರು, ಮುಸ್ಲಿಂ ಸಮಾಜದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next