Advertisement

ಗಂಗಾವತಿ: ಹರ್ಷ ಕೊಲೆ, ಕುರಿಗಾಯಿ ಲಕ್ಷ್ಮೀ ಹತ್ಯಾಚಾರ ಖಂಡಿಸಿ ಬೃಹತ್ ಪ್ರತಿಭಟನೆ

02:51 PM Feb 26, 2022 | Team Udayavani |

ಗಂಗಾವತಿ: ಶಿವಮೊಗ್ಗದ ಹರ್ಷ ಹಿಂದೂ ಕೊಲೆ ಹಾಗೂ ಕುರಿಗಾಯಿ ಲಕ್ಷ್ಮೀಯನ್ನು ಆತ್ಯಾಚಾರಗೈದು ಕೊಲೆ ಮಾಡಿದ ಪ್ರಕರಣ ಖಂಡಿಸಿ ಬಜರಂಗದಳ, ಹಿಂದೂಜಾಗರಣಾ ವೇದಿಕೆ ನೇತೃತ್ವದಲ್ಲಿ ವಿವಿಧ ಜಾತಿ ಬಾಂಧವರು ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಮಹಾತ್ಮಗಾಂಧಿ ವೃತ್ತದಲ್ಲಿ ಬಹಿರಂಗ ಸಭೆ ನಡೆಸಿ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

Advertisement

ಈ ಸಂದರ್ಭದಲ್ಲಿ ಶಾಸಕ ಪರಣ್ಣ ಮುನವಳ್ಳಿ ಮಾತನಾಡಿ, ಹರ್ಷ ಕೊಲೆ ಮತ್ತು ಕುರಿಗಾಯಿ ಲಕ್ಷ್ಮೀ ಮೇಲಿನ ಆತ್ಯಾಚಾರ ಕೊಲೆ ಪ್ರಕರಣ ನಡೆದಿರುವುದು ಖಂಡನೀಯವಾಗಿದೆ. ಕೃತ್ಯವೆಸಗಿದವರನ್ನು ಕೂಡಲೇ ಗಲ್ಲಿಗೇರಿಸಬೇಕು. ಕೊಲೆಗೀಡಾದ ಇರ್ವರ ಕುಟುಂಬದ ಜತೆ ಸಮಸ್ತ ಹಿಂದೂ ಸಮಾಜವಿದೆ. ಹಿಂದೂ ಸಮಾಜದ ಯುವಕರು ಇದರ ವಿರುದ್ಧ ಹೋರಾಟ ನಡೆಸಬೇಕು. ಗಂಗಾವತಿಯಲ್ಲಿ ಹಿಂದೂ ಸಮಾಜ ಜಾಗೃತವಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಜಾಗೃತಗೊಂಡು ದೇಶದ್ರೋಹ ನಡೆಸುವವ ಮಾಹಿತಿಯನ್ನು ಪೊಲೀಸ್ ಇಲಾಖೆಗೆ ನೀಡಬೇಕು. ಶಿವಮೊಗ್ಗದ ಹರ್ಷ ಹಾಗೂ ಬೆಳಗಾವಿಯ ಕುರಿಗಾಯಿ ಲಕ್ಷ್ಮೀ ಕುಟುಂಬದವರಿಗೆ ತಲಾ ಒಂದು ಲಕ್ಷ ರೂ.ಗಳ ನೆರವನ್ನು ಸಮಸ್ತ ಗಂಗಾವತಿ ಜನರ ಪರವಾಗಿ ತಾವು  ನೀಡುವುದಾಗಿ ಹೇಳಿದರು.

ಪ್ರತಿಭಟನೆಯಲ್ಲಿ ಹೆಬ್ಬಾಳ ನಾಗಭೂಷಣ ಶಿವಾಚಾರ್ಯ ಸ್ವಾಮೀಜಿ, ಶಿವಮೊಗ್ಗದ ಕಾಳಿ(ರಿಸಿಕೇಶ)ಸ್ವಾಮಿ, ಶಾಸಕ ಪರಣ್ಣ ಮುನವಳ್ಳಿ, ಮುಖಂಡರಾದ ವಿಠಲಾಪೂರ ಯಮನಪ್ಪ, ಸಣ್ಣಕ್ಕಿ ನೀಲಪ್ಪ, ಕೆಲೋಜಿ ಸಂತೋಷ, ಕೆ.ವೆಂಕಟೇಶ ಜಂತಗಲ್, ಆದೋನಿ ಶಿವು, ಮನೋಹರಗೌಡ, ನರಸಿಂಗರಾವ್ ಕುಲಕರ್ಣಿ, ಶ್ರೀನಿವಾಸ ತಾಂದಳೆ, ಸಿದ್ದಲಿಂಗಯ್ಯಸ್ವಾಮಿ, ಭೂಮಿಕಾ, ಕಲ್ಲಪ್ಪ, ಚನ್ನವೀರನಗೌಡ, ನಾಡಗೌಡ, ಹುಸೇನಪ್ಪ ಸ್ವಾಮಿ, ಸಂಗಮೇಶ, ನೀಲಕಂಠ ನಾಗಶೆಟ್ಟಿ, ಸಿದ್ದರಾಮಗೌಳಿ, ಅಯ್ಯನಗೌಡ, ಜಗದೀಶ, ಮಲ್ಲಿಕಾರ್ಜುನ ಸೇರಿ ಸಂಘಪರಿವಾರದ ವಿವಿಧ ಸಂಘಟನೆಗಳ ಮುಖಂಡರು ಕಾರ್ಯಕರ್ತರಿದ್ದರು.

ಹೆಚ್ಚಿನ ಪೊಲೀಸ್ ಬಂದೋಬಸ್ತ್

Advertisement

ಹರ್ಷ ಹಿಂದೂ ಕೊಲೆ ಹಾಗೂ ಕುರಿಗಾಯಿ ಲಕ್ಷ್ಮೀ ಆತ್ಯಾಚಾರ ಕೊಲೆ ಖಂಡಿಸಿ ಬಿಜೆಪಿ ಸಂಘಪರಿವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಯಾವುದೇ ಅಹಿತಕರ ಘಟನೆ ಜರುಗದಂತೆ ಪೊಲೀಸ್ ವರಿಷ್ಠಾಧಿಕಾರಿ ಅರುಣಾಶ್ಯಾಂ ಗಿರಿ ಸ್ಥಳದಲ್ಲಿ ಮೊಕ್ಕಾಂ ಮಾಡಿ ಜಿಲ್ಲೆಯ ಪೊಲೀಸರನ್ನು ಬಂದೋಬಸ್ತಗಾಗಿ ಕರೆಸಿ ಸೂಕ್ತ ಸಂಚಾರ ವ್ಯವಸ್ಥೆ  ಮಾಡಿದ್ದರು. ನೂರಕ್ಕೂ ಹೆಚ್ಚು ಪೊಲೀಸರು ಪ್ರತಿಭಟನಾ ಮೆರವಣಿಗೆ ಸೇರಿ ನಗರದ ವಿವಿಧೆಡೆ ವಿಡಿಯೋ ಕವರೇಜ್ ಮಾಡಿದರು. ಎಲ್ಲೆಲ್ಲೂ ಸಮವಸ್ತ್ರ ಇಲ್ಲದ ಪೊಲೀಸರು ಕಂಡು ಬಂದರು. ಮೆರವಣಿಗೆ ಶ್ರೀಚನ್ನಬಸವಸ್ವಾಮಿ ಗಂಜ್ ನಿಂದ ಶ್ರೀಕೃಷ್ಣದೇವರಾಯ ವೃತ್ತದ ವರೆಗೆ ನಿಗದಿಯಾಗಿದ್ದರೂ ಶಾಂತಿಯ ಹಿತದೃಷ್ಠಿಯಿಂದ ಗಾಂಧಿ ವೃತ್ತಕ್ಕೆ ತಹಸೀಲ್ದಾರ್ ಅವರನ್ನು ಕರೆಸಿ ಮನವಿ ಸ್ವೀಕರಿಸುವಂತೆ ಪೊಲೀಸರು ವ್ಯವಸ್ಥೆ ಮಾಡಿದ್ದರು.

ಹಿಂದೂ ಧರ್ಮದ ಸಂರಕ್ಷಣೆಯ ಕಾರ್ಯ ಮಾಡುತ್ತಿದ್ದ ಹರ್ಷ ಹಿಂದೂ ಅವರನ್ನು ಮುಸ್ಲಿಂ 80 ಜನ ಗೂಂಡಾಗಳು ಕೊಲೆ ಮಾಡಿದ್ದಾರೆ. ಕಾಪೋರೇಟರ್‌ನಿಂದ ಹಿಡಿದು ರಾಜ್ಯದ ಮುಖ್ಯಮಂತ್ರಿವರೆಗೆ ಬಿಜೆಪಿಯವರಿದ್ದರೂ ಒಬ್ಬ ಹರ್ಷನನ್ನು ಉಳಿಸಿಕೊಳ್ಳಲು ಆಗಲಿಲ್ಲ. ಈ ಮೂಲಕ ಮುಖ್ಯಮಂತ್ರಿಗಳಿಗೆ ಎಚ್ಚರಿಕೆ ನೀಡುವುದೇನಂದರೆ ಮುಂದಿನ ದಿನಗಳಲ್ಲಿ ಹಿಂದುಗಳ ಹತ್ಯೆ ನಿಲ್ಲಬೇಕು. ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ ಮುಸ್ಲಿಂ ಗೂಂಡಾಗಳ ಹುಟ್ಟು ಅಡಗಿಸಿದಂತೆ ಕರ್ನಾಟಕದಲ್ಲಿಯೂ ಅವರ ಹುಟ್ಟು ಅಡಗಿಸಬೇಕು. ಮಾಜಿ ಸಿಎಂ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ, ಬಿ.ಕೆ.ಹರಿಪ್ರಸಾದ ಹಾಗು ಯು.ಟಿ.ಖಾದರ್ ಕೂಡಲೇ ಹಿಂದುಗಳನ್ನು ತುಚ್ಛವಾಗಿ ಕಾಣುವುದನ್ನು ಬಿಡಬೇಕು. ಸರಕಾರಿ ಸೌಲಭ್ಯ ಪಡೆಯಲು ಮತ್ತು ಧಾರ್ಮಿಕ ಹಕ್ಕಿನ ವಿಚಾರದಲ್ಲಿ ಸಂವಿಧಾನದ ಆಶಯವೆಂದು ಮಾತನಾಡುವ ಮುಸಲ್ಮಾನರು ಹಿಜಾಬ್ ವಿಷಯದಲ್ಲಿ ಧರ್ಮ ಎಂದು ಹೇಳುವುದು ಸರಿಯಲ್ಲ. ಸರಕಾರ ಯಾವುದೆ ಕಾರಣಕ್ಕೂ ಹಿಜಾಬ್ ಧರಿಸಿ ಶಾಲಾಕಾಲೇಜಿಗೆ ಬರಲು ಅವಕಾಶ ಕಲ್ಪಿಸಬಾರದು. -ಹಾಲಸ್ವಾಮೀಜಿ ಹಿರೇಹಡಗಲಿ

ಹರ್ಷ ಹಿಂದೂ ಕೊಲೆಯಾಗಿ ಒಂದು ವಾರ ಕಳೆದರೂ ಮುಸಲ್ಮಾನ್ ಓಲೈಕೆ ಮಾಡುವ ಮಾಜಿ ಸಿಎಂ ಸಿದ್ದರಾಮಯ್ಯ, ಡಿಕೆ.ಶಿವಕುಮಾರ ಸೇರಿ ಯಾವೊಬ್ಬ ಕಾಂಗ್ರೆಸ್ ಮುಖಂಡರು ಹರ್ಷ ಮನೆಗೆ ತೆರಳಿ ಕುಟುಂಬಕ್ಕೆ ಸಾಂತ್ವಾನ ಹೇಳುವ ಕೆಲಸ ಮಾಡಿಲ್ಲ. ದೇಶ ಇಬ್ಬಾಗವಾಗುವಂತೆ ಮಾಡಿದ ಮಹಾತ್ಮಗಾಂಧಿಯ ಸಂತತಿಯವರಾಗಿದ್ದು ಮುಸಲ್ಮಾನರಿಗೆ ತೊಂದರೆಯಾದ ತಕ್ಷಣ ಅವರ ಮನೆಗೆ ಹೋಗಿ ಸಂವಿಧಾನ ಪ್ರಜಾಪ್ರಭುತ್ವ ಎಂದು ಚೀರಾಟ ನಡೆಸುತ್ತಾರೆ. ಇದು ಹಿಂದೂ ರಾಷ್ಟ್ರ ಯಾವೊಬ್ಬ  ಸಿದ್ದರಾಮಯ್ಯ ಡಿಕೆ. ಶಿವಕುಮಾರ ರಾಹುಲ್ ಗಾಂಧಿ ಹೇಳಿದ ಮಾತ್ರಕ್ಕೆ ನಾವೆಲ್ಲ ಸುಮ್ಮನಿರಬಾರದು. ಧರ್ಮದ ತಂಟೆಗೆ ಬಂದರೆ ಸುಮ್ಮನೆ ಬಿಡಬಾರದು. ಶ್ರೀರಂಗಪಟ್ಟಣದ ಆಂಜೇಯನ ದೇಗುಲವನ್ನು ಮಸೀದಿ ಮಾಡಿದ್ದು ಮುಂದಿನ ವರ್ಷ ಅಲ್ಲಿಗೆ ಪ್ರತಿಯೊಬ್ಬರೂ ಯಾತ್ರೆ ಹೋಗಬೇಕು. ಧರ್ಮ ಜಾತಿ ಸಂರಕ್ಷಣೆ ವಿಚಾರವಾಗಿ ತಾವು ಮಾತನಾಡಿದರೆ ಪೊಲೀಸರು ಬಂಧಿಸುತ್ತಾರೆ. ಇದು ಹಿಂದೂಗಳ ಸರಕಾರ ಹೌದೋ ಅಲ್ಲವೋ ಎಂಬ ಅನುಮಾನ ಮೂಡುತ್ತಿದೆ. ಗಂಗಾವತಿಯಲ್ಲಿ ಜಾಗೃತಿ ಹಿಂದೂ ಸಮಾಜವಿದ್ದು ಇದನ್ನು ಸಂರಕ್ಷಣೆ ಮಾಡಿಕೊಂಡು ಹೋಗಬೇಕು. ಶಾಸಕ ಪರಣ್ಣ ಮುನವಳ್ಳಿ ಗಂಗಾವತಿಯ ಮಹಾರಾಜ ಇದ್ದಂತೆ. -ಕಾಳಿ(ರಿಷಿಕೇಶ)ಸ್ವಾಮೀಜಿ ಮಹಾಕಾಳಿ ಮಠ ಶಿವಮೊಗ್ಗ

Advertisement

Udayavani is now on Telegram. Click here to join our channel and stay updated with the latest news.

Next