Advertisement

Gangavathi: ಕಾಲುಬಾಯಿ ರೋಗ… ಒಂದೇ ವಾರದಲ್ಲಿ 30ಕ್ಕೂ ಹೆಚ್ಚು ಕುರಿ-ಮೇಕೆಗಳ ಸಾವು

11:34 AM Oct 28, 2024 | Team Udayavani |

ಗಂಗಾವತಿ: ಕಾಲುಬಾಯಿ ರೋಗದಿಂದ ಒಂದೇ ವಾರದಲ್ಲಿ ತಾಲೂಕಿನ ತಿರುಮಲಾಪೂರ ಗ್ರಾಮದಲ್ಲಿ 30ಕ್ಕೂ ಹೆಚ್ಚು ಕುರಿ-ಮೇಕೆಗಳು ಸಾವನ್ನಪ್ಪಿರುವ ಘಟನೆ ನಡೆದಿದೆ.

Advertisement

ಕುರಿಗಾರರಿಗೆ ಲಕ್ಷಾಂತರ ರೂ.ನಷ್ಟವಾಗಿದ್ದು ಜಿಲ್ಲಾಡಳಿತ ಮುನ್ನೆಚ್ಚರಿಕೆ ಕ್ರಮವಾಗಿ ಪಶುಗಳಿಗೆ ಲಸಿಕೆ ಹಾಕುವ ಕಾರ್ಯ ಮಾಡುತ್ತಿದ್ದು ಇನ್ನೂ ಬಹುತೇಕ ಗ್ರಾಮೀಣ ಭಾಗಕ್ಕೆ ಲಸಿಕಾ ತಂಡ ಹೋಗಿಲ್ಲ.ಈ ವರ್ಷ ಮಳೆಗಾಲ ಹೆಚ್ಚಾಗಿರುವ ಕಾರಣ ಪಶುಗಳಿಗೆ ಕಾಲುಬಾಯಿ ರೋಗ ವ್ಯಾಪಕವಾಗಿದ್ದು ಇದರಿಂದಾಗಿ ಜಿಲ್ಲೆಯ ಬಹುತೇಕ ಗ್ರಾಮೀಣ ಭಾಗದಲ್ಲಿ ದನ,ಕುರಿ ಮತ್ತು ಮೇಕೆಗಳಿಗೆ ಕಾಲುಬಾಯಿ ರೋಗ ವ್ಯಾಪಕವಾಗಿ ಹರಡಿದೆ.

ಸಿಬ್ಬಂದಿ ಕೊರತೆಯ ನೆಪ: ಪಶುಸಂಗೋಪನೆ ಇಲಾಖೆಯಲ್ಲಿ ವೈದ್ಯರು ಸೇರಿ ಅಗತ್ಯವಾದ ಸಿಬ್ಬಂದಿ ಕೊರತೆ ಇದ್ದು ಪಶುಗಳ ಸಂಖ್ಯೆಗೆ ಹೋಲಿಸಿದರೆ ಸಿಬ್ಬಂದಿ ಬಹಳ ಕಡಿಮೆ ಇದೆ. ಸಿಬ್ಬಂದಿ ಕೊರತೆ ಹಲವು ದಶಕಗಳಿಂದ ಇದ್ದರೂ ಸರಕಾರಗಳು ನಿರ್ಲಕ್ಷ್ಯ ವಹಿಸಿದ್ದರಿಂದ ಪಶುಗಳಿಗೆ ಬರುವ ರೋಗಗಳ ಕುರಿತು ಮುನ್ನೆಚ್ಚರಿಕೆ ವಹಿಸುವಲ್ಲಿ ಪಶುಸಂಗೋಪನೆ ಇಲಾಖೆ ವಿಫಲವಾಗಿದೆ.

ಇದನ್ನೂ ಓದಿ: Bellary: ಕನ್ನಡಿಗರಿಗೆ, ಯಶ್‌ ಅಭಿಮಾನಿಗಳಿಗೆ ಅವಮಾನ ಮಾಡಿಲ್ಲ: ಪುಷ್ಪ 2 ವಿತರಕ

Advertisement

Udayavani is now on Telegram. Click here to join our channel and stay updated with the latest news.

Next