ಮಂಜುನಾಥಸ್ವಾಮಿ ಭೋಗಾವತಿ ಹಾಗೂ ರಾಜು.
ಗಂಗಾವತಿ: ಅಕ್ರಮವಾಗಿ ಮರಂ ಸಾಗಾಣಿಕೆ ಮಾಡಲು ಹಣ ಪಡೆದು ಡೀಲ್ ಮಾಡಿಕೊಂಡು 50 ಸಾವಿರ ಪಡೆದ ಆರೋಪದಲ್ಲಿ ಗಂಗಾವತಿ ತಹಶೀಲ್ದಾರ್ ಮಂಜುನಾಥ ಸ್ವಾಮಿ ಭೋಗಾವತಿ ಹಾಗೂ ಖಾಸಗಿ ಕಂಪ್ಯೂಟರ್ ಆಪರೇಟರ್ ರಾಜು ಎಂಬುವರನ್ನು ಲೋಕಾಯುಕ್ತ ಪೋಲೀಸರು ನ.18ರ ಶನಿವಾರ ತಡರಾತ್ರಿ ಬಂಧಿಸಿ ಅವರಿಂದ ಹಣ ಹಾಗೂ ಕೆಲ ದಾಖಲೆ ವಶಕ್ಕೆ ಪಡೆದ ಪ್ರಕರಣ ಶನಿವಾರ ರಾತ್ರಿ ನಡೆದಿದೆ.
ತಾಲೂಕಿನ ವೆಂಕಟಗಿರಿ ಭಾಗದಲ್ಲಿ ಮರಂ(ಕೆಂಪುಮಣ್ಣು) ಸಾಗಾಣಿಕೆ ಮಾಡಲು ವ್ಯಕ್ತಿಯೊರ್ವನಿಂದ ಖಾಸಗಿ ಕಂಪ್ಯೂಟರ್ ಆಪರೇಟರ್ ರಾಜು ಎಂಬ ವ್ಯಕ್ತಿ ಒಂದು ಲಕ್ಷ ರೂ.ಡೀಲ್ ಮಾಡಕೊಂಡು ಇದರಲ್ಲಿ 50 ಸಾವಿರ ರೂ.ಗಳನ್ನು ಪಡೆದು ತಹಶೀಲ್ದಾರ್ ಮಂಜುನಾಥ ಸ್ವಾಮಿ ಭೋಗಾವತಿ ಅವರಿಗೆ ಕೊಡುವ ಸಂದರ್ಭದಲ್ಲಿ ದೂರುದಾರ ನೀಡಿದ ದೂರಿನ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸರು ಡಿವೈಎಸ್ಪಿ ಸಲೀಂ ಪಾಷಾ ನೇತೃತ್ವದಲ್ಲಿ ದಾಳಿ ನಡೆಸಿ ಹಣದ ಸಮೇತ ತಹಶೀಲ್ದಾರ್ ಮಂಜುನಾಥ ಸ್ವಾಮಿ ಭೋಗಾವತಿ ಹಾಗೂ ಕಂಪ್ಯೂಟರ್ ಆಪರೇಟರ್ ರಾಜು ಅವರನ್ನು ಬಂಧಿಸಿದ್ದಾರೆ.
ವೆಂಕಟಗಿರಿ ಭಾಗದಲ್ಲಿ ಅಕ್ರಮ ಮರಂ ಸಾಗಾಣಿಕೆ ಮಾಡಲು ವ್ಯಕ್ತಿಯೊರ್ವನಿಂದ ಒಂದು ಲಕ್ಷ ರೂ.ಹಣದ ಬೇಡಿಕೆ ಇಟ್ಟಿದ್ದ ತಹಸೀಲ್ದಾರ್ ಮಂಜುನಾಥ ಸ್ವಾಮಿ ಭೋಗಾವತಿ ಹಾಗೂ ರಾಜು ವಿರುದ್ಧ ವ್ಯಕ್ತಿ ನೀಡಿದ ದೂರಿನ ಹಿನ್ನೆಲೆಯಲ್ಲಿ ಶನಿವಾರ ರಾತ್ರಿ ೫೦ ಸಾವಿರ ಹಣ ಪಡೆಯುವ ಸಂದರ್ಭದಲ್ಲಿ ದಾಳಿ ನಡೆಸಿ ಮಂಜುನಾಥ ಭೋಗಾವತಿ ಹಾಗೂ ರಾಜು ಅವರನ್ನು ಬಂಧಿಸಲಾಗಿದೆ ಎಂದು ಲೋಕಾಯುಕ್ತ ಡಿವೈಎಸ್ಪಿ ಸಲೀಂಪಾಷಾ ಉದಯವಾಣಿ ತಿಳಿಸಿದ್ದಾರೆ.