Advertisement

ಆನೆಗೊಂದಿ ಉತ್ಸವ ಮರೆತ ಸರಕಾರ

10:58 AM Jan 16, 2019 | |

ಗಂಗಾವತಿ: ವಿಜಯನಗರ ಸಾಮ್ರಾಜ್ಯದ ಮೂಲ ರಾಜಧಾನಿಯಾಗಿದ್ದ ಆನೆಗೊಂದಿ ಪ್ರದೇಶವನ್ನು ಸರಕಾರ ನಿರ್ಲಕ್ಷ್ಯ ಮಾಡುತ್ತಿದೆ. ಮೂಲ ರಾಜಧಾನಿ ಆನೆಗೊಂದಿಯನ್ನು ಮರೆತು ಸರಕಾರ ಹಂಪಿ-ಕನಕಗಿರಿ ಉತ್ಸವ ಆಚರಣೆಗೆ ಆದ್ಯತೆ ನೀಡಿ ಅನುದಾನ ಸಹ ಬಿಡುಗಡೆ ಮಾಡುವ ಸಿದ್ಧತೆಯಲ್ಲಿದೆ. ಕೊಪ್ಪಳ ಹಾಗೂ ಬಳ್ಳಾರಿ ಜಿಲ್ಲಾಡಳಿತಕ್ಕೆ ಪೂರ್ವಭಾವಿ ಸಭೆ ನಡೆಸಿ ಹಂಪಿ ಹಾಗೂ ಕನಕಗಿರಿ ಉತ್ಸವ ಆಚರಣೆಗೆ ಸಿದ್ಧತೆ ಕೈಗೊಳ್ಳುವಂತೆ ಸರಕಾರ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದೆ.

Advertisement

ಹಂಪಿ ಉತ್ಸವದ ರುವಾರಿ ಮಾಜಿ ಉಪಮುಖ್ಯಮಂತ್ರಿ ದಿವಂಗತ ಎಂ.ಪಿ. ಪ್ರಕಾಶ ಅವರು ಹಂಪಿ ಉತ್ಸವ ಆಚರಣೆಗೆ ನಾಂದಿ ಹಾಡಿ, ಹಂಪಿ ಉತ್ಸವದ ಜತೆ ಆನೆಗೊಂದಿ ಉತ್ಸವವನ್ನು ನಡೆಸುತ್ತಿದ್ದರು. ಕೆಲ ರಾಜಕಾರಣಿಗಳ ಕುಮ್ಮಕ್ಕಿನಿಂದ ಹಂಪಿ ಆನೆಗೊಂದಿ ಉತ್ಸವ ಪ್ರತೇಕವಾಗಿ ಆಚರಿಸಲಾಯಿತು. ನಂತರ ಆನೆಗೊಂದಿ ಉತ್ಸವ ಸರಕಾರ ನಿರ್ಧಾರ ಮಾಡಿದಾಗ ಮಾತ್ರ ಆಚರಿಸಲಾಗುತ್ತಿತ್ತು. ಕಳೆದ ನಾಲ್ಕೈದು ವರ್ಷಗಳಿಂದ ಬರ, ಮತ್ತಿತರ ಕಾರಣಕ್ಕೆ ಆನೆಗೊಂದಿ ಉತ್ಸವ ನೆಪತ್ಯಕ್ಕೆ ಸರಿಯಿತು.

ನಾಡಿನಲ್ಲಿ ಜರುಗುವ ಉತ್ಸವ ಹಾಗೂ ನಾಡಿನ ಹಬ್ಬಗಳಿಂದ ದೇಶ ವಿದೇಶಗಳ ಪ್ರವಾಸಿಗರ ಸಂಖ್ಯೆ ಹೆಚ್ಚಳವಾಗುತ್ತದೆ. ಪ್ರತಿ ವರ್ಷ ಆಯೋಜಿಸುವ ಹಂಪಿ, ಬನವಾಸಿ, ಚಾಲುಕ್ಯ ಉತ್ಸವದ ಸಂದರ್ಭದಲ್ಲಿ ಸಾವಿರಾರು ಪ್ರವಾಸಿಗರು ಆಗಮಿಸುತ್ತಾರೆ. ಜಿಲ್ಲಾಡಳಿತ ಉತ್ಸವದ ಕುರಿತು ಸಾಮಾಜಿಕ ಜಾಲತಾಣಗಳ ಮೂಲಕ ಪ್ರಚಾರ, ಬರಗಾಲ ನೆಪದಲ್ಲಿ ಹಂಪಿ-ಕನಕಗಿರಿ ಉತ್ಸವ ಆಚರಿಸದಿರಲು ತೀರ್ಮಾನಿಸಿತ್ತು. ಕಲಾವಿದರು, ಸಾಹಿತಿಗಳು ಮತ್ತು ಬಳ್ಳಾರಿ ಜಿಲ್ಲೆಯ ಸಂಘ ಸಂಸ್ಥೆಗಳು ಬುದ್ಧಿ ಜೀವಿಗಳು ಹೋರಾಟ ನಡೆಸಿದ್ದರಿಂದ ಎಚ್ಚೆತ್ತುಕೊಂಡ ಸರಕಾರ ತರಾತುರಿಯಲ್ಲಿ ಹಂಪಿ-ಕನಕಗಿರಿ ಉತ್ಸವವನ್ನು ಸರಳವಾಗಿ ಆಚರಣೆ ಮಾಡಲು ಸಿದ್ಧತೆ ನಡೆಸಿದೆ. ಆನೆಗೊಂದಿ ಉತ್ಸವವನ್ನು ಮರೆಯುವ ಮೂಲಕ ವಿಜಯನಗರದ ಮೂಲ ರಾಜಧಾನಿಯನ್ನು ಸಂಪೂಣವಾಗಿ ನಿರ್ಲಕ್ಷ ್ಯ ಮಾಡುವ ಹುನ್ನಾರು ನಡೆಯುತ್ತಿದೆ. ಹಂಪಿ-ಆನೆಗೊಂದಿ ಪ್ರದೇಶಗಳು ಒಂದೇ ಸಾಮ್ರಾಜ್ಯಕ್ಕೆ ಸೇರಿದ್ದರೂ ಸರಕಾರ ಮತ್ತು ಕೆಲ ಅಧಿಕಾರಿಗಳು ಹಂಪಿಗೆ ನೀಡುವ ಆದ್ಯತೆಯನ್ನು ಆನೆಗೊಂದಿ ಭಾಗಕ್ಕೆ ನೀಡದಿರುವುದು ಕಂಡು ಬರುತ್ತಿದೆ. ವಿಶ್ವದ 52 ಖ್ಯಾತ ಪ್ರವಾಸಿತಾಣಗಳಲ್ಲಿ ಹಂಪಿಗೆ 2ನೇ ಸ್ಥಾನ ಸಿಗುವಲ್ಲಿ ಆನೆಗೊಂದಿ ಅಂಜನಾದ್ರಿಬೆಟ್ಟ, ವಿರೂಪಾಪುರಗಡ್ಡಿ, ಪಂಪಾಸರೋವರ ಮತ್ತು ಕಿಷ್ಕಿಂದಾ ಪ್ರದೇಶದ ಕೊಡುಗೆಯೂ ಅಪಾರವಾಗಿದೆ. ಹಂಪಿಗೆ ಆಗಮಿಸುವ ಪ್ರತಿಯೊಬ್ಬ ಪ್ರವಾಸಿ ಆನೆಗೊಂದಿ ಕಿಷ್ಕಿಂದಾ ಪ್ರದೇಶಕ್ಕೆ ಭೇಟಿ ನೀಡದೇ ಹೋಗುವುದಿಲ್ಲ. ಪ್ರವಾಸೋದ್ಯಮ, ಕನ್ನಡ ಸಂಸ್ಕೃತಿ ಇಲಾಖೆ ಮತ್ತು ಪ್ರಾಚ್ಯವಸ್ತು ಇಲಾಖೆ ಮಾತ್ರ ಹಂಪಿಗೆ ಆದ್ಯತೆ ನೀಡಿ ಆನೆಗೊಂದಿಯನ್ನು ನಿರ್ಲಕ್ಷ್ಯ  ಮಾಡುತ್ತಿದೆ.

ಆನೆಗೊಂದಿ ಉತ್ಸವವನ್ನು ಬಜೆಟ್‌ನಲ್ಲಿ ಸೇರ್ಪಡೆ ಮಾಡಿ, ಪ್ರತಿ ವರ್ಷ ಅನುದಾನ ದೊರಕುವಂತೆ ಮಾಡುವ ಮೂಲಕ ಉತ್ಸವ ಶಾಶ್ವತವಾಗಿ ನಡೆಯಲು ಸ್ಥಳೀಯರು ಜನಪ್ರತಿನಿಧಿಗಳು, ಅಕಾರಿಗಳಿಗೆ ಮನವಿ ಮಾಡಿಕೊಂಡಿದ್ದಾರೆ. ಆದರೂ ಸ್ಥಳೀಯರ ಬೇಡಿಕೆಯನ್ನು ನಿರ್ಲಕ್ಷ್ಯ ಮಾಡಲಾಗುತ್ತಿದೆ.

•ಕೆ.ನಿಂಗಜ್ಜ

Advertisement
Advertisement

Udayavani is now on Telegram. Click here to join our channel and stay updated with the latest news.

Next