ಗಂಗಾವತಿ:ತಾಲೂಕಿನ ಕಿಷ್ಕಿಂಧಾ ಅಂಜನಾದ್ರಿ ಶ್ರೀ ಆಂಜನೇಯ ಸ್ವಾಮಿ ಭಕ್ತರ ಕಾಣಿಕೆ ಸಂಗ್ರಹ ಹುಂಡಿ ಎಣಿಕೆ ಕಾರ್ಯ ಶುಕ್ರವಾರ ಜರುಗಿತು.
17ದಿನಗಳಲ್ಲಿ ಒಟ್ಟು 27,71,761 ರೂ. ಸಂಗ್ರಹವಾಗಿದೆ. ಡಿ.23,24 ರಂದು ಹನುಮಮಾಲಾ ವಿಸರ್ಜನೆ ಕಾರ್ಯಕ್ರಮ ಹಾಗೂ ಜನವರಿ ಮೊದಲ ದಿನ ಹೊಸ ವರ್ಷದ ಸಂದರ್ಭದಲ್ಲಿ ಲಕ್ಷಾಂತರ ಹನುಮಭಕ್ತರು ಹಾಗೂ ಮಾಲಾಧಾರಿಗಳು ಆಗಮಿಸಿದ್ದರು. ಶಾಲಾ ಶೈಕ್ಷಣಿಕ ಪ್ರವಾಸದ ಹಿನ್ನೆಲೆಯಲ್ಲಿ ರಾಜ್ಯದ ನಾನಾ ಭಾಗದಿಂದ ನಿತ್ಯವೂ ಸಾವಿರಾರು ಶಾಲಾವಿದ್ಯಾರ್ಥಿಗಳು ಮತ್ತು ಪ್ತವಾಸಿಗರು ಆಗಮಿಸುತ್ತಿದ್ದಾರೆ. ಆದ್ದರಿಂದ ಕಾಣಿಕೆ ಹುಂಡಿಯನ್ನು ಈ ಭಾರಿ 16 ದಿನಗಳಲ್ಲಿ ಎಣಿಕೆ ಮಾಡಲಾಯಿತು. ಡಿ.14ರಂದು ಹುಂಡಿ ಎಣಿಕೆಯ ಸಂದರ್ಭದಲ್ಲಿ 20.36 ಲಕ್ಷ ರೂ.ಸಂಗ್ರಹವಾಗಿತ್ತು.
ಶುಕ್ರವಾರ ಹುಂಡಿ ಎಣಿಕೆಯಲ್ಲಿ ನೇಪಾಳ ಸೇರಿ ವಿದೇಶದ ನಾಣ್ಯಗಳು ನೋಟುಗಳನ್ನು ಭಕ್ತರು ಕಾಣಿಕೆಯಾಗಿ ಹಾಕಿದ್ದಾರೆ.
ಹುಂಡಿ ಎಣಿಕೆಯ ಸಂದರ್ಭದಲ್ಲಿ ತಹಸೀಲ್ದಾರ್ ವಿಶ್ವನಾಥ ಮುರಡಿ,ಗ್ರೇಡ್ 2 ತಹಸೀಲ್ದಾರ್ ಮಹಾಂತಗೌಡ ಗೌಡರ,ಕಂದಾಯ ಇಲಾಖೆಯ ಮೈಬೂಬಅಲಿ, ಕೃಷ್ಣವೇಣಿ, ನರ್ಮದಾ ಬಾಯಿ, ಮಂಜುನಾಥ ಹಿರೇಮಠ್ ,ಮಹೇಶ್ ದಲಾಲ, ಶ್ರೀಕಂಠ, ಗುರುರಾಜ ಅನ್ನಪೂರ್ಣ ಮಹ್ಮದ್ ರಫೀಕ್ , ಸುಧಾ, ಶ್ರಿರಾಮ ಜೋಷಿ ಗಾಯತ್ರಿ ಕವಿತಾ ಹನುಮೇಶ ಪೂಜಾರ ಮಂಜುನಾಥ ದಮ್ಮಾಡಿ ವ್ಯವಸ್ಥಾಕ ಎಂ.ವೆಂಕಟೇಶ ಹಾಗೂ ಪಿ ಕೆ ಜಿ ಬಿ ಬ್ಯಾಂಕ್,ಪೊಲೀಸ್ ಇಲಾಖೆಯ ಸಿಬ್ಬಂದಿಗಳಿದ್ದರು.
ಹುಂಡಿ ಎಣಿಕೆ ಕಾರ್ಯವನ್ನು ಸಿಸಿ ಟಿವಿ ಕ್ಯಾಮೆರಾ ಹಾಗೂ ವಿಡಿಯೋ ಕಣ್ಗಾವಲಿನಲ್ಲಿ ನಡೆಸಲಾಯಿತು.