ಯಳಂದೂರು: ಗ್ರಾಮವೊಂದು ಎರಡು ತಾಲೂಕಿಗೆ ಹಂಚಿಕೆ, ಒಂದೇ ಗ್ರಾಮಕ್ಕೆ ಎರಡು ಗ್ರಾಮ ಪಂಚಾಯಿತಿಗಳು, ಒಂದು ಗ್ರಾಪಂ ವ್ಯಾಪ್ತಿಗೆ ಮತಗಟ್ಟೆ ಇದ್ದರೆ ಇನ್ನೊಂದಕ್ಕೆ ಮತಗಟ್ಟೆಯೇ ಇಲ್ಲ!ಚಾಮರಾಜನಗರ ಹಾಗೂ ಯಳಂದೂರು ಎರಡೂ ತಾಲೂಕುಗಳಿಗೂ ಹಂಚಿ ಹೋಗಿರುವ ಗಂಗವಾಡಿ ಗ್ರಾಮದಲ್ಲಿ ಈ ಸನ್ನಿವೇಶ ಕಂಡ ಬರುತ್ತಿದೆ.
ಗಂಗರ ಕಾಲದ ವೀರಭದ್ರೇಶ್ವರ ದೇಗುಲ ಹೊಂದಿರುವ ಐತಿಹಾಸಿಕ ಗ್ರಾಮ ಇದಾಗಿದೆ. ಆದರೆ,ಆಡಳಿತಾತ್ಮಕವಾಗಿಈ ಗ್ರಾಮವನ್ನುಇಬ್ಭಾಗಮಾಡಲಾಗಿದೆ. ಪರಿಶಿಷ್ಟ ಜಾತಿಯವರು ವಾಸ ಮಾಡುವ ಇಡೀ ಬಡಾವಣೆ ಯಳಂದೂರು ತಾಲೂಕಿಗೆ ಸೇರಿದೆ. ಇನ್ನುಳಿದ ಭಾಗವು ಚಾಮರಾಜನಗರಕ್ಕೆ ಸೇರಿದೆ.
ಮತಗಟ್ಟೆ ತಾರತಮ್ಯ: ಯಳಂದೂರು ವ್ಯಾಪ್ತಿಯಗಂಗವಾಡಿ ಗ್ರಾಮವು ಯರಗಂಬಳ್ಳಿ ಗ್ರಾಪಂ ವ್ಯಾಪ್ತಿಗೆ ಒಳಪಡುತ್ತದೆ. ಇಲ್ಲಿ ಒಟ್ಟು300ಕ್ಕೂ ಹೆಚ್ಚು ಮತದಾರರು ಇದ್ದಾರೆ. ಇಲ್ಲಿಗೆ ಇಬ್ಬರು ಗ್ರಾಪಂ ಸದಸ್ಯರ ಆಯ್ಕೆಗೆ ಅವಕಾಶವಿದೆ. ಆದರೆ, ಇಲ್ಲಿಗೆಯಾವ ಚುನಾವಣೆ ಬಂದರೂ ಮತಗಟ್ಟೆಯೇ ಇರುವುದಿಲ್ಲ. ಇವರು ಇಲ್ಲಿಂದ ಒಂದು ಕಿ.ಮೀ. ದೂರದ ದಾಸನಹುಂಡಿ ಗ್ರಾಮಕ್ಕೆ ನಡೆದು ಕೊಂಡೇ ಹೋಗಿ ಮತಚಲಾಯಿಸುವ ಅನಿವಾರ್ಯತೆ ಇದೆ.
ಮತ್ತೂಂದು ಭಾಗವು ಚಾಮರಾಜನಗರ ತಾಲೂಕಿನ ಇರಸವಾಡಿ ಗ್ರಾಪಂ ವ್ಯಾಪ್ತಿಗೆಒಳಪಡುತ್ತದೆ. ಇಲ್ಲಿ ಈ ಬಾರಿ ಒಟ್ಟು 4 ಗ್ರಾಪಂಅಭ್ಯರ್ಥಿಗಳು ಆಯ್ಕೆಗೆ ಅವಕಾಶವಿದೆ. ಇಲ್ಲಿನ ಶಾಲೆಯಲ್ಲೇ ಮತಗಟ್ಟೆ ಸ್ಥಾಪನೆ ಮಾಡುವುದರಿಂದ ಇಲ್ಲಿನ ಮತದಾರರು ತಮ್ಮ ಸ್ವಗ್ರಾಮದಲ್ಲೇ ಮತ ಚಲಾಯಿಸಲು ಅವಕಾಶವಿದೆ. ಈ ತಾರತಮ್ಯದ ವಿರುದ್ಧ ಹಲವು ಬಾರಿ ಜಿಲ್ಲಾಧಿಕಾರಿ, ತಹಶೀಲ್ದಾರ್ ಗಳಿಗೆ ಮನವಿ ಸಲ್ಲಿಸಿದ್ದರೂ ಕ್ರಮ ವಹಿಸಿಲ್ಲ ಎಂದುಸ್ಥಳೀಯರಾದ ಎಸ್. ನಾರಾಯಣ, ಎನ್.ಮಹದೇವಸ್ವಾಮಿ, ಎನ್. ರೇವಣ್ಣ ಮತ್ತಿತರರು ದೂರಿದ್ದಾರೆ.
ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಕೇವಲ 130 ಮತದಾರರಿರುವ ಕೆ. ದೇವರಹಳ್ಳಿ ಗ್ರಾಮಕ್ಕೆ ಮತಗಟ್ಟೆ ನೀಡಲಾಗಿದೆ. ಆದರೆ, ನಮ್ಮಲ್ಲಿ 300 ಮಂದಿ ಮತದಾರರು ಇದ್ದರೂ ನಮಗೆ ಮತಗಟ್ಟೆ ನೀಡದೆ ತಾರತಮ್ಯ ಮಾಡಲಾಗಿದೆ. ಕಳೆದ ಹಲವು ಚುನಾವಣೆಯಲ್ಲಿ ನಮ್ಮ ಬೇಡಿಕೆಗೆ ಪೂರಕ ಸ್ಪಂದನೆ ಸಿಗುತ್ತಿಲ್ಲ. ದೂರದ ದಾಸನಹುಂಡಿ ಗ್ರಾಮಕ್ಕೆ ಮತ ಚಲಾಯಿಸಲು ಹೋಗಬೇಕು. ಇಲ್ಲಿ ಸಾರಿಗೆ ವ್ಯವಸ್ಥೆ ಇಲ್ಲ. ವೃದ್ಧರು, ಗರ್ಭಿಣಿಯರು, ಬಾಣಂತಿಯರು ನಡೆದುಕೊಂಡು ಸಾಗಲು ಕಷ್ಟ. ನಡೆಯುವದಾರಿಯಲ್ಲಿ ನಮ್ಮನ್ನು ಚುನಾವಣೆಗೆ ಸ್ಪರ್ಧಿಸಿರುವ ವ್ಯಕ್ತಿಗಳು ಹಿಂಬಾಲಿಸಿ ಮತಯಾಚನೆ ಮಾಡುವ ಹಿಂಸೆಯನ್ನೂ ಸಹಿಸಿಕೊಳ್ಳುವ ಅನಿವಾರ್ಯತೆ ಇದೆ. ಹಾಗಾಗಿ ಈ ಭಾಗದಲ್ಲಿರುವ ಅಂಗನವಾಡಿ ಕೇಂದ್ರದಲ್ಲಿ ಮತಗಟ್ಟೆ ಸ್ಥಾಪಿಸಬೇಕು ಎಂದು ಗ್ರಾಮದ ಮುಖಂಡರಾದ ವೀರಣ್ಣ, ನಂಜುಂಡಯ್ಯ, ನಾಗಮಾದಯ್ಯ ಸೇರಿದಂತೆ ಮತ್ತಿತರರು ಆಗ್ರಹವಾಗಿದೆ.
ಹಬ್ಬದಲ್ಲಿ ಎಲ್ಲರೂ ಒಗ್ಗಟ್ಟು, ಮತದಾನದಲ್ಲಿ ಭ್ರಮನಿರಸನ : ಗಂಗವಾಡಿ ಗ್ರಾಮದಲ್ಲಿ ಪ್ರತಿ ವರ್ಷವೂ ವೀರಭದ್ರೇಶ್ವರ ದೇವರ ರಥೋತ್ಸವ, ಕೊಂಡೋತ್ಸವ ಸಂಭ್ರಮದಿಂದ ಜರುಗುತ್ತದೆ. ಆ ವೇಳೆ ಇಡೀ ಗ್ರಾಮದ ಎಲ್ಲಾ ಜನಾಂಗದವರೂ ಒಟ್ಟಾಗಿ ಸೇರಿ ಈ ಸಂಭ್ರಮದಲ್ಲಿ ಭಾಗವಹಿಸುತ್ತಾರೆ. ಆದರೆ, ಮತದಾನಬಂದರೆ ನಮ್ಮನ್ನು ಒಡೆಯಲಾಗುತ್ತದೆ. ಇದಕ್ಕೆ ಗ್ರಾಮ ಎರಡು ತಾಲೂಕುಗಳಿಗೂ ಹಂಚಿ ಹೋಗಿರುವುದೇಕಾರಣವಾಗಿದೆ.
ಗಂಗವಾಡಿ ಗ್ರಾಮದ ಚುನಾವಣಾಸಮಸ್ಯೆ ನಿವಾರಣೆ ಬಗ್ಗೆ ಗ್ರಾಮಸ್ಥರು ಲಿಖೀತ ಮನವಿ ಕೊಟ್ಟಲ್ಲಿ, ಸಂಬಂಧಪಟ್ಟ ಜಿಲ್ಲಾಧಿಕಾರಿ ಹಾಗೂ ಚುನಾವಣಾ ಆಯೋಗದ ಗಮನಕ್ಕೆ ಈ ವಿಷಯ ತಂದು ಸಮಸ್ಯೆ ನಿವಾರಣೆಗೆಕ್ರ ಮ ವಹಿಸಲಾಗುವುದು.
–ಬಸವರಾಜ ಚಿಗರಿ, ಪ್ರಭಾರ ತಹಶೀಲ್ದಾರ್
-ಫೈರೋಜ್‌ಖಾನ್