ಮಂಗಳೂರು: ಕಳೆದ ಫೆಬ್ರವರಿ ತಿಂಗಳಲ್ಲಿ ಉತ್ತರಭಾರತ ಕಡೆ ಪ್ರವಾಸ ಕೈಗೊಂಡು ಉತರಾಖಂಡ್ ರಾಜ್ಯದ ಹೃಷಿಕೇಶ್ ಗೆ ತೆರಳಿದ್ದೆವು. ಪವಿತ್ರ ಗಂಗಾ ನದಿವು ಹರಿಯುವ ಹೃಷಿಕೇಶ್ ಹಿಂದುಗಳಿಗೆ ಪವಿತ್ರ ಸ್ಥಳ. ಪ್ರತಿಯೊಬ್ಬರಿಗೂ ಒಮ್ಮೆಯಾದರೂ ಹೃಷಿಕೇಶ್ ಗೆ ಹೋಗಿ ಗಂಗಾ ನದಿಯಲ್ಲಿ ಮಿಂದು ಬರಬೇಕೆನ್ನುವ ಕನಸಿರುತ್ತದೆ. ನಾವಂತೂ ಆ ಕನಸನ್ನು ಈ ಪ್ರವಾಸದ ಮೂಲಕ ನನಸು ಮಾಡಿಕೊಂಡೆವು
ಉತ್ತರಾಖಂಡ್ ರಾಜ್ಯದ ರಾಜಧಾನಿ ಡೆಹ್ರಾಡೂನ್ ನಿಂದ ಸ್ವಲ್ಪ ದೂರದಲ್ಲಿರುವ ಹೃಷಿಕೇಶವು ಧಾರ್ಮಿಕ ಸ್ಥಳವಾಗಿದೆ. ಪವಿತ್ರ ಗಂಗಾ ನದಿವು ಹೃಷಿಕೇಶದ ಮೂಲಕ ಹರಿಯುತ್ತದೆ. ಇಲ್ಲಿ ಅನೇಕ ಮಂದಿರಗಳು, ಆಶ್ರಮಗಳು ಇವೆ.
ಗಂಗಾರತಿ ನಡೆಯುವುದು ಇಲ್ಲಿನ ವಿಶೇಷ. ಇದನ್ನು ಕಣ್ತುಂಬಿ ಕೊಳ್ಳಲು ದೇಶದ ನಾನಾ ಭಾಗಗಳಿಂದ ಜನರು ಬರುತ್ತಾರೆ. ಸಂಜೆಯ ಹೊತ್ತಿಗಾಗಲೇ ಗಂಗಾ ಮಾತೆಯ ಹಾಡುಗಳು ಮೊಳಗುತ್ತದೆ. ಗಂಗಾ ನದಿಯನ್ನೂ ದಾಟಲು ರಾಮ ಝೂಲಾ, ಲಕ್ಷ್ಮಣ ಝೂಲಾ ಎಂಬ ತೂಗು ಸೇತುವೆಗಳಿವೆ. ಇದು ವಿದ್ಯುತ್ ದೀಪಗಳಿಂದ ಅಲಂಕೃತಗೊಂಡು ನೋಡುಗರ ಕಣ್ಮನ ಸಳೆಯುತ್ತದೆ.
ಹೃಷಿಕೇಶದಲ್ಲಿ ಹರಿಯುವ ಗಂಗಾ ನದಿಯಲ್ಲಿ ‘ರಿವರ್ ರಾಫ್ಟಿಂಗ್’ ಮಾಡಬಹುದು. ಇದು ಇನ್ನಷ್ಟು ಪ್ರವಾಸಿಗರನ್ನು ಹೃಷಿಕೇಶಕ್ಕೆ ಆಕರ್ಷಿಸುತ್ತಿದೆ. ರಾಫ್ಟಿಂಗ್ ಮಾಡಲೆಂದೇ ಅನೇಕರು ಬರುವರಿದ್ದಾರೆ. ರಾಫ್ಟಿಂಗ್ ಆರಂಭವಾಗುವ ಸ್ಥಳಕ್ಕೆ ಹೋಗಿ ಅಲ್ಲಿಂದ 13 ಕಿ.ಮೀ ಸಾಗುತ್ತಾ ಹೃಷಿಕೇಶದ ಗಂಗಾರತಿ ನಡೆಯುವ ಸ್ಥಳಕ್ಕೆ ಬರಬೆಕಾಗುತ್ತದೆ. ಗಾಳಿ ತುಂಬಿದ ಉದ್ದ ಹಾಗೂ ಅಗಲವಾದ ಟ್ಯೂಬ್ ನಲ್ಲಿ 5 ರಿಂದ 6 ಜನರಿಗೆ ಹಾಗೂ ಒಬ್ಬ ಮಾರ್ಗದರ್ಶಕ ಇರುತ್ತಾರೆ.
ಈ ಸಂದರ್ಭದಲ್ಲಿ ರಭಸವಾಗಿ ಹರಿಯುವ ನೀರು ಹಾಗೂ ಸುತ್ತಲ ಕಾನನಗಳನ್ನು ಕಣ್ತುಂಬಿಕೊಳ್ಳಬಹುದು. ರಾಫ್ಟಿಂಗ್ ನಲ್ಲಿ ಸಾಗುವ ಅನುಭವಂತು ಮೈನವಿರೇಳಿಸುವಂತ್ತದ್ದು. ಅದಲ್ಲದೆ ರಾಫ್ಟಿಂಗ್ ಮಾಡುವಾಗ ನದಿಗೆ ಇಳಿಯಲು ಅವಕಾಶ ಇದೆ ಆದಂತೂ ಅದ್ಬುತ ಅನುಭವವೇ ಸರಿ.
ದೇವಭೂಮಿ ಉತ್ತರಾಖಂಡ್ ನಲ್ಲಿರುವ ಪವಿತ್ರ ಸ್ಥಳವಾದ ಹೃಷಿಕೇಶ್ ಗೆ ಹೋದಾಗ ಮನಸ್ಸಿಗೇನೊ ಸಂತೋಷ, ಉಲ್ಲಾಸ ಹಾಗೂ ಒಂದು ಬಾರಿ ಭಾವುಕರಾಗುದರಲ್ಲಿ ಅನುಮಾನವಿಲ್ಲ.
ತಲುಪುವುದು ಹೇಗೆ- ಕೇರಳದಿಂದ ಹೊರಟ ರೈಲು ಮಂಗಳೂರಿನ ಮೂಲಕ ಉತ್ತರಾಖಂಡ್ ರಾಜಧಾನಿ ಡೆಹ್ರಾಡೂನ್ ಗೆ ತಲುಪುತ್ತದೆ.
ರೋಹಿತ್ ದೋಳ್ಪಾಡಿ
ಮಂಗಳೂರು ವಿಶ್ವವಿದ್ಯಾನಿಲಯ,ಕೊಣಾಜೆ